ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸುವಂತೆ ಅಧಿಕಾರಿಗಳಿಗೆ ಮನವಿ
ಶಿಗ್ಗಾವಿ : ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಕ ವಿದ್ಯುತ್ ಪೂರೈಸುವಂತೆ ಹುಲಸೋಗಿ ಗ್ರಾಮದ ರೈತರು ಶಿಗ್ಗಾವಿ ಹೆಸ್ಕಾಂ ಅಧಿಕಾರಿ ವಿನುತ ಅವರಿಗೆ ಮನವಿ ಅರ್ಿಸಿ ಒತ್ತಾಯಿಸಿದ್ದಾರೆ.
ಹೋಲಸೋಗಿ ಗ್ರಾಮಗಳ ರೈತರು ಈಗಾಗಲೇ ಶೇ.70 ರಷ್ಟು ಬಿತ್ತನೆ ಕಾರ್ಯ ಪೂರ್ಣ ಮಾಡಿದ್ದು ಈ ಭಾರಿಯ ಮುಂಗಾರು ದುರ್ಬಲವಾಗಿದ್ದು ಕೃಷಿಕರನ್ನ ಕಂಗೆಡಿಸಿದೆ, ಈಗಾಗಲೇ ಸತತ 8 ಘಂಟೆಗಳ ಕಾಲ ವಿದ್ಯುತ್ ಪೂರೈಸುತ್ತಿದ್ದ ಹೆಸ್ಕಾಂ, ಸದ್ಯ 15 ದಿನಗಳಿಂದ ಅಸಮರ್ಕ ವಿದ್ಯುತ್ ಪೂರೈಸುತ್ತಿದ್ದು ರೈತರು ದುಭಾರಿ ಬೆಲೆ ಬೀಜ, ರಸಗೊಬ್ಬರಗಳನ್ನ ಜಮೀನುಗಳಲ್ಲಿ ಬಿತ್ತನೆ ಮಾಡಿದ್ದಾರೆ, ಬೆಳೆಗಳು ಬಿಸಿಲಿನ ತಾಪದಿಂದ ಒಣಗುತ್ತಿವೆ ಆದ್ದರಿಂದ ಒಂದಿಲ್ಲೋಂದು ಸಮಸ್ಯೆಗೆ ಸಿಲುಕುತ್ತಿರುವ ರೈತರಿಗೆ ಕಷ್ಟದ ಕೋಟಲೆಗಳನ್ನ ಅನುಭವಿಸುವಂತಾಗಿದು ಹೆಸ್ಕಾಂ ಅಧಿಕಾರಿಗಳು ಶೀಘ್ರವಾಗಿ ಸ್ಪಂದಿಸಿ ನಿತ್ಯ 8 ಘಂಟೆಗಳ ಕಾಲ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಸುವಂತೆ ಹುಲಸೋಗಿ ಗ್ರಾಮದ ರೈತರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ರೈತರಾದ ಭೀಮಣ್ಣ ಕೋಕಾಟಿ, ರಾಜಪ್ಪ ಕೊಂಡಾಯಿ, ಭೀಮಸಿ ಸಿಂದೆ, ಗಂಗಾಧರ ಜಾದವ, ಮಹೇಶ ಕೋಕಾಟಿ, ಪ್ರಕಾಶ ಕೋಕಾಟಿ, ಮಂಜುನಾಥ ಸುಲ್ತಾನಜಿ, ನಕುಲಪ್ಪ ಕೋಕಾಟಿ, ಮೃತ್ಯುಂಜಯ ಕಂಬಾಳಿಮಠ, ಗೂಳಪ್ಪ ಸೊಲಬಕ್ಕನವರ, ಪರಸಪ್ಪ ಗಾಜುನವರ, ಶಂಕರ್ ಅರ್ಕಸಾಲಿ, ನಾಮದೇವ ಅಂಚಲಕರ, ಮುದುಕಪ್ಪ ಕೋಕಾಟಿ, ಮಾಲತೇಶ ಕೊಂಡಾಯಿ, ಮಂಜುನಾಥ ಕೊಂಡಾಯಿ, ಈರಣ್ಣ ಹೈಬತ್ತಿ, ಶಿದ್ದಪ್ಪ ಶೇರೆಕಾರ ಸೇರಿದಂತೆ ಇನ್ನುಳಿದ ರೈತರು ಇದ್ದರು.