ರಾಣೆಬೆನ್ನೂರ

ಹುಲ್ಲತ್ತಿ ತಾಂಡಾ ಸರ್ಕಾರಿ ಶಾಲೆಗೆ ಸುಸಜ್ಜಿತ ಕಟ್ಟಡ ನಿರ್ಮಿಸಲು ಗ್ರಾಮಸ್ಥರ ಮನವಿ

ಹುಲ್ಲತ್ತಿ ತಾಂಡಾ ಸರ್ಕಾರಿ ಶಾಲೆಗೆ ಸುಸಜ್ಜಿತ ಕಟ್ಟಡ ನಿರ್ಮಿಸಲು ಗ್ರಾಮಸ್ಥರ ಮನವಿ

ರಾಣಿಬೆನ್ನೂರ 09: ತಾಲೂಕಿನ ಹುಲ್ಲತ್ತಿ ತಾಂಡಾದ ಸರ್ಕಾರಿ ಪ್ರಾಥಮಿಕ ಶಾಲೆಗೆ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಿಸಬೇಕೆಂದು ಆಗ್ರಹಿಸಿ ಮಂಗಳವಾರ ತಾಂಡಾ ನಿವಾಸಿಗಳು  ಕ್ಷೇತ್ರ ಶಿಕ್ಷಣಾಧಿಕಾರಿ ಗುರು ಪ್ರಸಾದ್ ಜೆ.ಎನ್‌. ಅವರಿಗೆ ಮನವಿ ಸಲ್ಲಿಸಿದರು.  

ಗ್ರಾಮದ ಮುಖಂಡ ಗೋವಿಂದಪ್ಪ ಹನುಮಂತಪ್ಪ ಲಮಾಣಿ ಮಾತನಾಡಿ, ಹುಲ್ಲತ್ತಿ ತಾಂಡಾಕ್ಕೆ ಸರ್ಕಾರಿ ಪ್ರಾಥಮಿಕ ಶಾಲೆ ಇದ್ದಿಲ್ಲ. ಗ್ರಾಮಸ್ಥರ ಅನೇಕ ವರ್ಷಗಳ ಹೋರಾಟದಿಂದ ಸರ್ಕಾರಿ ಶಾಲೆ ಮಂಜೂರಿಯಾಗಿದೆ. ಸರ್ಕಾರ ಇಬ್ಬರು ಶಿಕ್ಷಕರನ್ನು ನಿಯೋಜನೆ ಮಾಡಿದೆ. ಮಕ್ಕಳ ಹಾಜರಾತಿ ಕೂಡ ಹೆಚ್ಚಾಗಿದೆ ಎಂದರು.  

ಶಿಕ್ಷಕರು ಮಕ್ಕಳಿಗೆ ಮರದ ಕೆಳಗೆ ಬಯಲಿನಲ್ಲಿ ಪಾಠ ಪ್ರವಚನ ಮಾಡುತ್ತಾರೆ. ಅಡುಗೆ ಕೋಣೆ ಕೂಡ ಸಣ್ಣದಾಗಿದ್ದು, ಅಡುಗೆ ಮಾಡಲು ಮತ್ತು ಪಾತ್ರೆ ಪರಿಕರಗಳು, ಆಹಾರ ಸಾಮಗ್ರಿಗಳನ್ನು ದಾಸ್ತಾನು ಮಾಡಲು ಅನಾನುಕೂಲವಾಗಿದೆ. ಶಾಲಾ ಕಟ್ಟಡ ಇಲ್ಲದ ಕಾರಣ ವಿದ್ಯಾರ್ಥಿಗಳು ಪಟ್ಟಣ್ಕಕೆ ಹೋಗುತ್ತಿದಾರೆ. ಕೂಡಲೇ ಸುಸಜ್ಜಿತ ಕಟ್ಟಡ ಹಾಗೂ ಅಡುಗೆ ಕೋಣೆ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು.  

ಕಟ್ಟಡ ನಿರ್ಮಿಸಿಕೊಡಲು ವಿಳಂಭವಾದಲ್ಲಿ ಮೇ. 9 ರಂದು ಗ್ರಾಮಸ್ಥರು, ಮಕ್ಕಳ ಪಾಲಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಶಿಕ್ಷಣ ಪ್ರೇಮಿಗಳು ಸೇರಿ ಪಾದಯಾತ್ರೆ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಆಗಮಿಸಿ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.  ಗ್ರಾಪಂ ಸದಸ್ಯ ಮಂಜುನಾಥ ಲಮಾಣಿ, ವಿರೇಶ್ ಲಮಾಣ, ಜಯಪ್ಪ ಲಮಾಣಿ, ಜಗದೀಶ್ ಕೆರೂಡಿ, ನಾಗರಾಜ ಲಮಾಣಿ, ಅರ್ಜುನ ಲಮಾಣಿ, ಮಾರುತಿ ಲಮಾಣಿ, ಎಂ.ಎಚ್‌. ದೊಡ್ಡಮನಿ ಇದ್ದರು. 


ಸುದ್ದಿ ಓದಿ