ಬೈಲಹೊಂಗಲ

ರಾಯಣ್ಣನ ಭಾವಚಿತ್ರಕ್ಕೆ ಸರಕಾರದಿಂದ ವಿಶೇಷ ಗೌರವ ಸಲ್ಲಿಸುವಂತೆ ಮನವಿ

ರಾಯಣ್ಣನ ಭಾವಚಿತ್ರಕ್ಕೆ ಸರಕಾರದಿಂದ ವಿಶೇಷ ಗೌರವ ಸಲ್ಲಿಸುವಂತೆ ಮನವಿ

ಬೈಲಹೊಂಗಲ 12:  ದೇಶಕಂಡ ಅಪ್ರತಿಮ ವೀರ ವೀರರಾಣಿ ಕಿತ್ತೂರು ಚೆನ್ನಮ್ಮಾಜಿ ಅವರ ಬಲಗೈ ಬಂಟ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣನ ಭಾವಚಿತ್ರಕ್ಕೆ ಸರಕಾರದಿಂದ ವಿಶೇಷ ಗೌರವ ಸಲ್ಲಿಸುವಂತೆ ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆ, ಹಾಗೂ ವಿವಿಧ ಸಂಘಟನೆಯ ಸದಸ್ಯರು ಬುಧವಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. 

ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘದ ಅಧ್ಯಕ್ಷ ವಿಠ್ಠಲ್ ಅಜ್ಜನಕಟ್ಟಿ ಮಾತನಾಡಿದರು. ರಾಯಣ್ಣನ ಜನ್ಮ ದಿನವಾದ  ಆ.15ರಂದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಹಾಗೂ ಗಲ್ಲಿಗೇರಿಸಿದ ದಿನವಾದ ಜ. 26ರಂದು ನಮ್ಮ ದೇಶ ಗಣ ರಾಜ್ಯೋತ್ಸವ ದಿನವಾಗಿದೆ.ಈ ಎರಡು ದಿನಗಳು ಕ್ರಾಂತೀವೀರ ಸಂಗೊಳ್ಳಿ ರಾಯಣ್ಣನವರ ಜನ್ಮ ಹಾಗೂ ಹುತಾತ್ಮ  ದಿನಗಳಗಿದ್ದು,ಅದರ ಸ್ಮರಣಾರ್ಥವಾಗಿ ಘನ ಸರಕಾರ ಈ ಎರಡು ದಿನಗಳಂದು ಸರಕಾರಿ ಕಚೇರಿ, ಶಾಲಾ ಕಾಲೇಜು ಗಳಲ್ಲಿ ರಾಯಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ನೀಡುವಂತೆ ಸರಕಾರ ಆದೇಶ ಹೊರಡಿಸಬೇಕೆಂದು ಆಗ್ರಹಿಸಿದರು. 

ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆ ತಾಲೂಕು ಅಧ್ಯಕ್ಷ ದೇವಲಾಪುರ, ಕನ್ನಡ ಕ್ರಾಂತಿ ದೀಪ ಸಂಘಟನೆಯ ಜಿಲ್ಲಾಧ್ಯಕ್ಷ ಅನಿಲ್ ಕರೀಕಟ್ಟಿ, ಸೋಮನಾಥ್ ಸೊಪ್ಪಿಮಠ, ಕುಮಾರ್ ಹೂಗಾರ, ವಿಜಯ್ ಪೂಜೇರಿ, ವಿವಿಧ ಸಂಘಟನೆಯ ಪದಾಧಿಕಾರಿಗಳು ಇದ್ದರು. 

ಸುದ್ದಿ ಓದಿ