ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರೈತ ಸಂಘದಿಂದ ತಾಪಂ ಇಓಗೆ ಮನವಿ
ಲೋಕದರ್ಶನ ವರದಿ
ಕುಷ್ಟಗಿ 26: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ಸಂಜೆ ಇಲ್ಲಿನ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಜಯರಾಮ ಚೌಹಾಣ ಅವರಿಗೆ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಅವೈಜ್ಞಾನಿಕವಾದ ಮೊಬೈಲ್ ನಲ್ಲಿ ದಿನಕ್ಕೆ ಎರಡು ಬಾರಿ ಹಾಜರಾಗುವುದು ಕೂಲಿಕಾರರ ಸ್ಪಷ್ಟ ಚಿತ್ರವನ್ನು ಮೊಬೈಲ್ ನಲ್ಲಿ ಅಪ್ ಲೋಡ್ ಮಾಡುವುದು ಮತ್ತು ಬೆಳಗ್ಗೆಯಿಂದ ಸಂಜೆ 5ಗಂಟೆಯವರೆಗೂ ಕಾರ್ಮಿಕರು ಸ್ಥಳದಲ್ಲಿ ಹಾಜರು ಇರುವಂತೆ ಕಡ್ಡಾಯ ಮಾಡುವ ಆದೇಶ ವಾಪಸ್ಸು ಪಡೆಯಬೇಕು.
ಕೆಲಸಕ್ಕೆ ಬೇಡಿಕೆ ಸಲ್ಲಿಸಿದ ಕೂಡಲೇ ಕಾಮಗಾರಿ ನೀಡಬೇಕು ಮತ್ತು ಕನಿಷ್ಠ 14 ದಿನ ಕೆಲಸ ನೀಡಬೇಕು.
ಕಾಯಕ ಬಂಧುಗಳ ಪ್ರೋತ್ಸಾಹ ಧನ ಹಾಗೂ ಮೂರು ವರ್ಷದ ಕುಡಿಯುವ ನೀರಿನ ಹಣವನ್ನು ಕೂಡಲೇ ಪಾವತಿಸಬೇಕು.
ಕೆಲಸದ ನಡೆಯುವ ಸ್ಥಳದಲ್ಲಿ ಕಾರ್ಮಿಕರಿಗೆ
ಒಂದರಂತೆ ನೆರಳು ವ್ಯವಸ್ಥೆ, ಶುದ್ಧವಾದ ಕುಡಿಯುವ ನೀರು, ಚಿಕ್ಕ ಮಕ್ಕಳ ಪಾಲನೆ ಪೋಷಣೆ ಮಾಡಲು ವ್ಯವಸ್ಥೆಯನ್ನು ಮಾಡಬೇಕು.
ವಿಶಿಷ್ಟಚೇತನರಿಗೆ, ಹಿರಿಯ ನಾಗರಿಕರಿಗೆ, ವಿಧವೆಯರಿಗೆ, ಸಮಾಜದ ದುರ್ಬಲ ವರ್ಗದವರಿಗೆ ನೆರೆಗಾ ಕಾಯ್ದೆ ಅನ್ವಯ ವಿಶೇಷ ಉದ್ಯೋಗ ಚೀಟಿ ನೀಡಬೇಕು.
ಕಾಮಗಾರಿಗೆ ನಿಯೋಜಿಸಿದ ರೈತರ ಬಾಡಿಗೆ ಹಣವನ್ನು ರೈತರ ಖಾತೆಗೆ ಹಣ ಜಮಾ ಮಾಡಬೇಕು.
ತಿಂಗಳಿಗೆ ಒಂದು ಬಾರಿ ಸಂಘದ ಪದಾಧಿಕಾರಿಗಳು ಪಿಡಿಎಫ್, ಬಿ ಎಫ್ ಟಿ ಮತ್ತು ಎ.ಡಿ ಮುಖಂಡತ್ವದಲ್ಲಿ ಸಭೆ ನಡೆಸಿ ಕುಂದುಕೊರತೆಗಳಿಗೆ ಪರಿಹಾರ ನೀಡಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಮನವಿ ಸ್ವೀಕರಿಸಿ ನಂತರ ಮಾತನಾಡಿದ ತಾಲೂಕು ಪಂಚಾಯಿತ ಕಾರ್ಯನಿರ್ವಾಹಕ ಅಧಿಕಾರಿ ಡಾ.ಜಯರಾಮ ಚೌಹಾಣ ಎಲ್ಲ ಬೇಡಿಕೆಗಳನ್ನು ಜಿಲ್ಲಾ ಪಂಚಾಯಿತಿ ಸಿಇಒ ಅವರ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕ ಅಧ್ಯಕ್ಷ ಸಂಗನಗೌಡ ಪಾಟೀಲ್ ಬಸವರಾಜ
ಮೇಳಿ, ಸಂಗಪ್ಪ ಕಂದಕೂರ, ಸಂಗಮ್ಮ ಬೇವಿನಕಟ್ಟಿ, ಮಲ್ಲಿಕಾರ್ಜುನ ಹನಮಗೌಡ, ಭೀಮೆಶ ಹಿರೇಬನ್ನಿಗೋಳ, ಸಃರೇಶ ಬೇನಾಳ, ಬಸಪ್ಪ ಹುನಗುಂದ, ಗೋವಿಂದಪ ನಿಡಶೇಸಿ, ಮಹಾಂತಪ್ಪ ಹುಣಿಸಿಹಾಳ ಸೇರಿದಂತೆ ಕರ್ನಾಟಕ ಪ್ರಾಂತ ರೈತ ಸಂಘದ ನೂರಾರು ಜನ ಈ ಸಂದರ್ಭದಲ್ಲಿ ಭಾಗವಹಿಸಿದ್ದರು.