ಹೊಸಪೇಟೆ

ಅಲೆಮಾರಿಳಿಗೆ ಪ್ರತ್ಯೇಕ ಶೇ 1ರಷ್ಟು ಮಿಸಲಾತಿ ನೀಡಬೇಕೆಂದು ಮನವಿ

ಅಲೆಮಾರಿಳಿಗೆ ಪ್ರತ್ಯೇಕ ಶೇ 1ರಷ್ಟು ಮಿಸಲಾತಿ ನೀಡಬೇಕೆಂದು ಮನವಿ

ಹೊಸಪೇಟೆ 27: ಜನಸ್ಪಂದನಾ ಕಾರ್ಯಕ್ರಮ ಕರ್ನಾಟಕದ 49 ಅಲೆಮಾರಿ ಸಮುದಾಯಗಳಿಗೆ ಒಳಮೀಸಲಾತಿಯಲ್ಲಿ ಪ್ರತ್ಯೇಕವಾಗಿ ಗುರುತಿಸಿ, ಶೇ 1ಅರಷ್ಟು ಪಾಲನ್ನು ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಯಿತು. 

ತೀರ​‍್ಪನನು ಆಧರಿಸಿ ರಾಜ್ಯದಲ್ಲಿ ಒಳಮೀಸಲಾತಿಯನ್ನು ಜಾರಿಗೆ ತರುವ ಸಲುವಾಗಿ ಕರ್ನಾಟಕದ ಘನ ಸರ್ಕಾರವು ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕವ್ಯಕ್ತಿ ಆಯೋಗವನ್ನೂ ನೇಮಿಸಲಾಗಿತ್ತು. ಈ ಆಯೋಗವು 49 ಅಲೆಮಾರಿ ಸಮುದಾಯಗಳನ್ನು ಪ್ರತ್ಯೇಕವಾಗಿ ಗುರುತಿಸಿ, ಇವುಗಳ ಜೊತೆಗೆ ಇನ್ನೂ ಹತ್ತು ಸಮುದಾಯಗಳನ್ನು ಸೇರೆ​‍್ಡ ಮಾಡಿ ಶೇ 1ಅ ರಷ್ಟು ಪ್ರಮಾಣದ ಮೀಸಲಾತಿಯನ್ನು ನಿಗದಿ ಮಾಡಿತ್ತು. ಆದರೆ ದಿ: 19.08.2025 ರಂದು ನಡೆದ ಕ್ಯಾಬಿನೆಟ್ ನಿರ್ಣಯವು ಅಲೆಮಾರಿ ಸಮುದಾಯಗಳನ್ನು ಸ್ಪೃಶ್ಯ ಜಾತಿ ಸಮುದಾಯಗಳ ಗುಂಪಿಗೆ ಸೇರಿಸಿಬಿಟ್ಟಿದೆ. ಇದಲ್ಲದೆ ದಿ: 25.08.2025ರಂದು ಹೊರಡಿಸಿದ ಸರಕಾರದ ಆದೇಶದಲ್ಲಿ ಬಲಗೈ ಸಮುದಾಯಗಳ ಗುಂಪಿಗೆ ಶೇ ಅ, ಎಡಗೈ ಸಮುದಾಯಗಳ ಗುಂಪಿಗೆ ಶೇ 6ಅ ಮತ್ತು ಸ್ಪೃಶ್ಯ ಸಮುದಾಯಗಳ ಗುಂಪಿಗೆ ಅಲೆಮಾರಿಗಳನ್ನು ಸೇರೆ​‍್ಡ ಮಾಡಿದ್ದಲ್ಲದೆ, ಈ ಗುಂಪಿಗೆ ಶೇ 5ಅರಷ್ಟು ಮೀಸಲಾತಿಯನ್ನು ನಿಗದಿಪಡಿಸಲಾಗಿದೆ. ಸಾಮಾಜಿಕ ನ್ಯಾಯ ಮತ್ತು ಸಮಾಜವಾದಿ ಅಶಯಗಳನ್ನು ಸದಾ ಪ್ರತಿಪಾದಿಸುತ್ತಾ ಬಂದಿರುವ ನಿಮ್ಮ ಕಾಲಾವಧಿಯಲ್ಲಿ ಅಲೆಮಾರಿಗಳಂತಹ ತಬ್ಬಲಿ ಸಮುದಾಯಗಳಿಗೆ ನ್ಯಾಯ ಸಿಗುವ ಭರವಸೆ ಇತ್ತು. ಅದರ ದಿ: 25.08.2025ರಂದು ಹೊರಡಿಸಿದ ಸರಕಾರದ ಆದೇಶವು ಈ 49 ಅಲೆಮಾರಿ ಸಮುದಾಯಗಳನ್ನು ಶಾಶ್ವತವಾಗಿ ಮೂಲೆಗುಂಪಾಗಿಸಲಿದೆ. 

ಒಳಮೀಸಲಾತಿಯನ್ನು ಜಾರಿ ಮಾಡುವ ಒತ್ತಡದಲ್ಲಿರುವ ಸರಕಾರವು 101 ಪರಿಶಿಷ್ಟ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವ ನಿಟ್ಟಿನಲ್ಲಿ ಮೀಸಲು ಪ್ರಮಾಣವನ್ನು ಎಚ್ಚರಿಕೆಯಿಂದ ನಿಗದಿಪಡಿಸಬೇಕಿತ್ತು. ಅದರಲ್ಲೂ ಅಲೆಮಾರಿಗಳಂತಹ ತಬ್ಬಲಿ ಮತ್ತು ದನಿ ಇಲ್ಲದ ಸಮುದಾಯಗಳ ವಿಷಯದಲ್ಲಿ ಸರಕಾರವು ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಬೇಕಿತ್ತು. ಆದರೆ, ಸರಕಾರದ ಈ ನಿರ್ಣಯವು ಅಲೆಮಾರಿ ಸಮುದಾಯಗಳಿಗೆ ಮರಣ ಶಾಸನವನ್ನು ಬರೆದುಬಿಟ್ಟಿದೆ. ಅಲೆಮಾರಿಗಳನ್ನು ಬಂಜಾರ, ಬೋವಿ, ಕೊರಮ ಕೊರಚ ಸಮಯದಾಯಗಳ ಜೊತೆಗೆ ಸೇರಿಸಿ ಶೇ 5ಅ ರಷ್ಟು ಮೀಸಲಾತಿಯನ್ನು ನಿಗದಿ ಮಾಡಿರುವುದರಿಂದ ಅಲೆಮಾರಿ ಸಮುದಾಯಗಳು ಶಾಶ್ವತವಾಗಿ ಮೀಸಲಾತಿಯಿಂದ ವಂಚಿತವಾಗಲಿದೆ. ಸಾವಿರಾರು ವರ್ಷಗಳಿಂದ ಅಸ್ಪಶ್ಯರಲ್ಲಿ ಅಸ್ಪೃಶ್ಯರಾಗಿಯೇ ಬದುಕಿ ಬಂದ ಈ ಅನಾಥ ಸಮುದಾಯಗಳಿಗೆ ಸ್ವಾತಂತ್ರ್ಯಾನಂತರ ಸಂವಿಧಾನಬದ್ಧ ಸೌಲಭ್ಯಗಳು ಇನ್ನೂ ದೊರಕಿಲ್ಲ. ಈ ಹೋರಾಟದ ನ್ಯಾಯಬದ್ಧ ಆಶಯಗಳನ್ನು ಭಾರತದ ಸರ್ವೋಚ್ಚ ನ್ಯಾಯಾಲಯವು ಪರೀಶೀಲಿಸಿ ದಿ: 01.08.2024ರಂದು ಮಹತ್ವದ ತೀರ​‍್ಪನನು ನೀಡಿದೆ. ಸುಪ್ರೀಂ ಕೋರ್ಟ್‌ ತನ್ನ ತೀರ​‍್ಿನಲ್ಲಿ ಮೀಸಲಾತಿಯ ಒಳವರ್ಗೀಕರಣವನ್ನು ಮಾಡುವಾಗ ಅನುಸರಿಸಬೇಕಾದ ಮುಖ್ಯವಾದ ಮಾನದಂಡಗಳನ್ನು ಉಲ್ಲೇಖಿಸಿದೆ. ನಮ್ಮ ಈ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರೀಶೀಲಿಸಿ 49+10 ಒಟ್ಟು 59-ಅಲೆಮಾರಿ ಸಮುದಾಯಗಳನ್ನು ಒಂದು ಪ್ರತ್ಯೇಕ ಗುಂಪನ್ನಾಗಿ ಪರಿಗಣಿಸಿ, ಶೇ1ಅ ರಷ್ಟು ಮೀಸಲಾತಿ ಪ್ರಮಾಣವನ್ನು ನೀಡಬೇಕೆಂದು ಒಕ್ಕೊರಲಿನಿಂದ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.  ಈ ಸಂದರ್ಭದಲ್ಲಿ ಸಣ್ಣ ಮಾರೆಪ್ಪ, ಒಳ ಮೀಸಲಾತಿ ಹೋರಾಟ ಸಮಿತಿ ಸಂಚಾಲಕರು,  ಕಿನ್ನೂರಿ ಶೇಖಪ್ಪ, ಸಂಚಾಲಕರು, ಜೆ.ರಮೇಶ, ಚೌಡಪ್ಪ,  ಬಾದಿಗಿ ಪಕ್ಕೀರ​‍್ಪ, ಕರಿಬಸವರಾಜ ಇನ್ನು ಮುಂತಾದ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ