ರಾಣೆಬೆನ್ನೂರ

ಮೃತಪಟ್ಟ ರೈತ ಪರಮೇಶಪ್ಪ ಕುಟುಂಬ ಸದಸ್ಯರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ

ಮೃತಪಟ್ಟ ರೈತ ಪರಮೇಶಪ್ಪ ಕುಟುಂಬ ಸದಸ್ಯರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ

ರಾಣಿಬೆನ್ನೂರ 13: ಸಾಲ ಬಾಧೆಯಿಂದ ಮನನೊಂದು ವಿಷ ಸೇವಿಸಿ ದಾವಣಗೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ತಾಲೂಕಿನ ಚಿಕ್ಕಕುರುವತ್ತಿ ಗ್ರಾಮದ ಪರಮೇಶಪ್ಪ ಶೇಖಪ್ಪ ಹಲಗೇರಿ (45)  ರಾತ್ರಿ ಸಾವನ್ನಪ್ಪಿದ್ದು, ರೈತ ಸಂಘದ ಕಾರ್ಯಕರ್ತರು  ನಗರದ ಬಸ್ ನಿಲ್ದಾಣದ ಬಳಿ ಶವ ವಿಟ್ಟು ಪ್ರತಿಭಟಿಸಿ ಉಪತಹಶೀಲ್ದಾರ ಎಂ.ಎನ್‌.ಹಾದಿಮನಿ, ಸಹಾಯಕ ಕೃಷಿ ನಿರ್ದೇಶಕ ಹೆಚ್‌.ವಿ.ಗೌಡಪ್ಪಳವರ ಅವರಿಗೆ ಮನವಿ ಸಲ್ಲಿಸಿದರು.  

ಮೃತನು ನಾಲು ಎಕರೆ ಜಮೀನು ಹೊಂದಿದ್ದು ಕೃಷಿಗಾಗಿ ವಿವಿಧ ಬ್ಯಾಂಕ್‌ಗಳಲ್ಲಿ 10 ಲಕ್ಷ ಸಾಲ ಮಾಡಿದ್ದನು. ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿಯೇ ಪದೇ ಪದೇ ರೈತರ ಆತ್ಮಹತ್ಯೆ ಪ್ರಕರಣ ಜರುಗುತ್ತಿರುವುದು ಕಳವಳಕಾರಿ ಸಂಗತಿ. ಪ್ರಕೃತಿ ವಿಕೋಪ, ಕರೋನಾ ಮುಂತಾದ ಕಾರಣಗಳಿಂದಾಗಿ ರೈತರು ಕೃಷಿಗಾಗಿ ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆ ಹಾದಿ ತುಳಿಯುತ್ತಿದ್ದಾನೆ. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರಾಷ್ಟ್ರೀಕೃತ ಮತ್ತು ಸಹಕಾರ ಸಂಘಗಗಳಲ್ಲಿ ರೈತರು ಹೊಂದಿರುವ ಕೃಷಿ ಸಾಲ ಮನ್ನಾ ಮಾಡಬೇಕು. ಮೃತ ರೈತ ಪರಮೇಶಪ್ಪ ಹಲಗೇರಿ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಬೇಕು. ಹಾಗೂ ಅವರ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.  

ಚಂದ್ರಪ್ಪ ಬೇಡರ್, ಎಸ್‌.ಡಿ.ಹಿರೇಮಠ, ಸೈಯದ್ ಕಾಟೇನಹಳ್ಳಿ, ನಿತ್ಯಾನಂದ ಕುಂದಾಪುರ, ಬಸವರಾಜ ಕೊಂಗಿ, ದಿಳ್ಳೇಪ್ಪ ಸತ್ಯಪ್ಪನವರ ಮತ್ತಿತರರು ಭಾಗವಹಿಸಿದ್ದರು. 


ಸುದ್ದಿ ಓದಿ