ತಾಳಿಕೋಟಿ

ನಿರಂತರ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಮನವಿ

ನಿರಂತರ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಮನವಿ

ತಾಳಿಕೋಟಿ 25: ತಾಲೂಕಿನ ಕೊಣ್ಣೂರು ಗ್ರಾಮ ವ್ಯಾಪ್ತಿಯ ರೈತರ ಜಮೀನುಗಳಿಗೆ ಅಸಮರ​‍್ಕ ವಿದ್ಯುತ್ ಪೂರೈಕೆ ಆಗುತ್ತಿರುವುದನ್ನು ಖಂಡಿಸಿ ಗ್ರಾಮಸ್ಥರು ಬುಧವಾರ ಇಲ್ಲಿನ ಹೆಸ್ಕಾಂ ಕಚೇರಿಗೆ ಆಗಮಿಸಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಟಿ.ಬಿ .ರಾಠೋಡ ಅವರಿಗೆ ಮನವಿ ಸಲ್ಲಿಸಿದರು.  

ಪ್ರಗತಿಪರ ರೈತ ಮುಖಂಡ ಡಾ. ಬಸವರಾಜ ಅಸ್ಕಿ ಮಾತನಾಡಿ ರೈತರ ಜಮೀನುಗಳಿಗೆ ಕನಿಷ್ಠ ಏಳು ತಾಸು ತ್ರೀ ಫೇಸ್ ವಿದ್ಯುತ್ ಪೂರೈಕೆ ಮಾಡಬೇಕೆಂಬುದು ನಿಯಮ ಆದರೆ ಅದನ್ನು ಈಗ 5 ತಾಸುಗಳಿಗೆ ಕಡಿತಗೊಳಿಸಲಾಗಿದೆ ಇದನ್ನು ಸಹ ಸರಿಯಾಗಿ ಪೂರೈಸುತ್ತಿಲ್ಲ ಇದರಿಂದ ರೈತರ ಟಿಸಿಗಳ ಮೇಲೆ ಲೋಡ್ ಬಿದ್ದು ಯಾವುದೇ ಗುಣಮಟ್ಟದ ಉಲ್ಟೇಜ್ ಇಲ್ಲದ್ದರಿಂದ ಕರೆಂಟ್ ಮೋಟಾರ್ ಗಳು ಚಾಲು ಆಗುತ್ತಿಲ್ಲ ಇದರಿಂದ ಬೆಳೆದಿರುವ ಬೆಳೆಗಳಿಗೆ ಸಕಾಲಕ್ಕೆ ನೀರುಣಿಸಲು ಸಾಧ್ಯವಾಗದೆ ಬೆಳೆಗಳು ಹಾಳಾಗುತ್ತಿವೆ ಮೊದಲೇ ಬರಗಾಲ ಆವರಿಸಿರುವ ಈ ಸಮಯದಲ್ಲಿ ನೀರು ಇದ್ದರೂ ಬಳಕೆ ಮಾಡಿಕೊಳ್ಳಲಾಗದ ದು ಸ್ಥಿತಿ ಉಂಟಾಗಿದೆ ಎಂದು ಆಕ್ರೋಶ ಹೊರಹಾಕಿದರು.  ಈ ಭಾಗದಲ್ಲಿ ಸೇವೆಯಲ್ಲಿರುವ ಲೈನ್ ಮೆನ್ ರೈತರಿಗೆ ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ ಸಮಯಕ್ಕೆ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ವಿದ್ಯುತ್ ಬಗ್ಗೆ ಕೇಳಿದರೆ 4 ತಾಸು ಸಮಯದಂತೆ ನೀಡುತ್ತಿಲ್ಲ ಯಾವಾಗ ಬೇಕಾದಾಗ ಎರಡು ಅಥವಾ ಮೂರು ತಾಸು ವಿದ್ಯುತ್ ನೀಡುತ್ತಾರೆ ಅದು ಸಹ ನಿರಂತರವಾಗಿ ನೀಡುವುದಿಲ್ಲ ಸರಿಯಾದ ಮಾಹಿತಿ ಇಲ್ಲದೆ ಇರುವುದರಿಂದ ರೈತರು ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಇದರ ಸರಿಯಾದ ಮಾಹಿತಿ ರೈತರಿಗೆ ಸಿಗಬೇಕಾದರೆ ಒಂದು ವಾಟ್ಸಾಪ್ ಗ್ರೂಪ್ ಅನ್ನು ಸೃಷ್ಟಿಸಿ ಅದಕ್ಕೆ ಸೂಕ್ತ ಮಾಹಿತಿ ನೀಡಬೇಕೆಂದು ಒತ್ತಾಯಿಸಿದರು. 

ಈಗಾಗಲೇ ಭೀಕರ ಬರಗಾಲದ ಲಕ್ಷಣ ಗೋಚರಿಸುತ್ತಿರುವರಿಂದ ರೈತರು ಕಂಗಾಲಾಗಿದ್ದಾರೆ ಅಲ್ಪ ಸ್ವಲ್ಪ ಬೆಳೆ ಬೆಳೆದ ನಿಂತಿರುವುದರಿಂದ ಅದಕ್ಕೆ ಸರಿಯಾಗಿ ನೀರು ಪೂರೈಕೆ ಆದರೆ ಇದ್ದರೆ ಅದು ಸಹ ಒಣಗಿ ಹೋಗಿ ರೈತರು ಇನ್ನಷ್ಟು ತೊಂದರೆಯನ್ನು ಅನುಭವಿಸಬೇಕಾಗುತ್ತದೆ ಇದನ್ನು ತಪ್ಪಿಸುವಂತಾಗಲು ಹಗಲು ಹೊತ್ತಿನಲ್ಲಿ ನಿರಂತರವಾಗಿ 5 ತಾಸು ವಿದ್ಯುತ್ ಪೂರೈಕೆ ಸಾಧ್ಯವಿಲ್ಲದಿದ್ದರೆ ಹಗಲು ಹೊತ್ತಿನಲ್ಲಿ ಮೂರು ತಾಸು ಹಾಗೂ ರಾತ್ರಿಯಲ್ಲಿ ಎರಡು ತಾಸು ವಿದ್ಯುತ್ ಪೂರೈಸಬೇಕು ಇಲಾಖೆ ಮಿಲಾಧಿಕಾರಿಗಳು ಈ ಗಂಭೀರ ಸಮಸ್ಯೆಯನ್ನು ಸರಿಪಡಿಸುವ ಮೂಲಕ ರೈತರಿಗೆ ನ್ಯಾಯ ಒದಗಿಸಿ ಕೊಡಬೇಕು ಇಲ್ಲದೆ ಹೋದಲ್ಲಿ ಇದಕ್ಕಿಂತಲೂ ಉಗ್ರವಾದ ಹೋರಾಟವನ್ನು ಮಾಡುವುದು ಅನಿವಾರ್ಯವಾಗುತ್ತ ದೆ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.   

ಈ ಸಮಯದಲ್ಲಿ ಎಇ ಅಭಿಷೇಕ ಗಚ್ಚಿನ್ ಮಠ. ಗ್ರಾಮದ ಗಣ್ಯರಾದ ರಾಮನಗೌಡ ಇಂಗಳಗಿ.ಡಾ.ಬಸವರಾಜ ಅಸ್ಕಿ. ಗೌಡಪ್ಪ ಗೌಡ ಹಡಲಗೇರಿ. ಮುದಿಯಪ್ಪ ಗೌಡ ಹಡಲಗೇರಿ .ಅಬ್ದುಲ್ ರೆಹಮಾನ್‌ಅವಟಿ .ಸುಭಾಷ ಯಾಳವಾರ. ಡಾ. ಬಸನಗೌಡ ಬಿರಾದಾರ.ಸಿ.ಆರ್‌. ಪೊಲೀಸ್ ಪಾಟೀಲ. ಮಾಜಿ ಟಿಪಿ ಗುರಣ್ಣ. ವಿವೇಕಾನಂದ .ಐನಾಪೂರ ಸರ್‌. ಸದಾಶಿವ ತಳವಾರ. ನಬಿಸಾ ಮಕಾನದಾರ. ಅಶೋಕ ಯಾಳವಾರ. ಮುದಕಪ್ಪ ಬಡಿಗೇರ. ಅಫಜಲ್ ಅವಟಿ. ಮತ್ತಿತರರು ಇದ್ದರು.ಕೊಣ್ಣೂರು ಗ್ರಾಮದ ರೈತರು ಅವರ ಜಮೀನುಗಳಿಗೆ ಐದು ತಾಸು ವಿದ್ಯುತ್ತನ್ನು ನಿರಂತರವಾಗಿ ಪೂರೈಸಲು ಬೇಡಿಕೆ ಇಟ್ಟಿದ್ದಾರೆ ಇದನ್ನು ಸಿಬ್ಬಂದಿಗಳೊಂದಿಗೆ ಮಾತನಾಡಿ ಪೂರೈಸುವ ವ್ಯವಸ್ಥೆಯನ್ನು ಮಾಡುತ್ತೇವೆ.  ಎಇಇ ಟಿ. ಬಿ.ರಾಠೋಡ.ಕನಿಷ್ಠ 5 ತಾಸು ವಿದ್ಯುತ್ ನಿರಂತರವಾಗಿ ಪೂರೈಸದೆ ಇರುವುದರಿಂದ ಬೆಳೆಗಳು ಒಣಗಿ ಹೋಗುತ್ತಿವೆ ಇದರಿಂದ ರೈತರಿಗೆ ಭಾರಿ ನಷ್ಟ ಆಗುವ ಸಂಭವವಿದೆ ಇದನ್ನು ತಪ್ಪಿಸಲು ಕ್ರಮ ತೆಗೆದುಕೊಳ್ಳದೆ ಉಗ್ರ  ಹೋರಾಟ ಅನಿವಾರ್ಯ ವಾಗುತ್ತದೆ.  ಪ್ರಗತಿಪರ ರೈತ ಮುಖಂಡ ಡಾ. ಬಸವರಾಜ ಅಸ್ಕಿ. 


ಸುದ್ದಿ ಓದಿ