ಶಿಗ್ಗಾವ್

ಸರ್ವಿಸ್ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಮನವಿ

ಸರ್ವಿಸ್ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಮನವಿ

ಶಿಗ್ಗಾವಿ,05 : ಪಟ್ಟಣದ ಹೊರವಲಯದಲ್ಲಿರುವ ಫೀನೀಕ್ಸ್‌ ಶಾಲೆಯ ಹತ್ತಿರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಸರ್ವಿಸ್ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಅಗ್ರಹಿಸಿ ಜಯಕರ್ನಾಟಕ ಸಂಘಟನೆ ತಾಲೂಕಾದ್ಯಕ್ಷ ಹನುಮಂತಪ್ಪ ಬಂಡಿವಡ್ಡರ ನೇತೃತ್ವದಲ್ಲಿ ತಾಲೂಕಾ ತಹಶೀಲ್ದಾರ ಸಂತೋಷ ಹಿರೇಮಠ ಅವರಿಗೆ ಮನವಿ ಅರ​‍್ಿಸಿ ಒತ್ತಾಯಿಸಿದರು. 

ಮನವಿ ಅರ​‍್ಿಸಿ ಮಾತನಾಡಿದ ಹನುಮಂತಪ್ಪ ಬಂಡಿವಡ್ಡರ, ವನಹಳ್ಳಿ ಗ್ರಾಮಕ್ಕೆ ತೆರಳುವ ಪಿನಿಕ್ಸ ಶಾಲೆಯ ಹತ್ತಿರ ಇರುವ ಮಾರ್ಗಮದ್ಯದ ಸರ್ವಿಸ್ ಕಾಮಗಾರಿಯನ್ನು ಅಪೂರ್ಣಗೊಳಿಸಿರುವ ಹಿನ್ನೆಲೆ ಬೈಕ್ ಸವಾರರಿಗೆ, ವಿವಿಧ ವಾಹನಗಳಿಗೆ ಜೊತೆಗೆ ಶಾಲಾ ವಾಹನಗಳಿಗೆ ಓಡಾಡಲು ಬಹಳ ತೊಂದರೆಯಾಗುತ್ತಿದ್ದು, ಸರ್ವಿಸ್ ರಸ್ತೆಯಿಲ್ಲದೇ ಇರುವುದರಿಂದ ರಾಷ್ಟ್ರೀಯ ಹೆದ್ದಾರಿ ದಾಟುವಾಗ ರಸ್ತೆ ಅಪಘಾತಗಳು ಆಗಿ ಪ್ರಾಣ ಹಾನಿಯಾದ ಉದಾಹರಣೆಗಳಿದ್ದು  ಆದ್ದರಿಂದ ಕಾಮಗಾರಿಯನ್ನು ಸಂಪೂರ್ಣ ಮುಗಿಸುವಂತೆ ಅಗ್ರಹಿಸಿದರಲ್ಲದೆ, ಹೊಸ ಬಸ್ ನಿಲ್ದಾಣದ ಜಯಲಕ್ಷ್ಮಿ ಹೋಟೆಲ್ ಪಕ್ಕದಲ್ಲಿ ಇರುವ ಹಳೇ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆ ಮಾರ್ಗವು ಪಾದಚಾರಿಗಳಿಗೆ ಓಡಾಡಲು ಬಹಳ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಮಾರ್ಗ ದರ್ಶನ ನೀಡಿ ಪಾದಚಾರಿಗಳಿಗೆ ಮುಕ್ತವಾಗಿ ಓಡಾಡಲು ಅನುಕೂಲ ಮಾಡಿಕೊಡಬೇಕೆಂದು ಅಗ್ರಹಿಸಿದರು. 

ಪದಾಧಿಕಾರಿಗಳಾದ ಗೌತಮ್ ಹೊಸ್ಮನಿ, ಗೋವಿಂದಪ್ಪ ವಾಲಿಕಾರ್, ಎಲ್ಲಪ್ಪ ಗಿ ವಡ್ದರ್, ಕೃಷ್ಣಪ್ಪ ಪೂಜಾರಿ, ಅಭಿಷೇಕ್ ವಡ್ಡರ್ ಸೇರಿದಂತೆ ಸಂಘಟನೆ ಪದಾಧಿಕಾರಿಗಳು ಇದ್ದರು. 


ಸುದ್ದಿ ಓದಿ