ಹಾಸ್ಟಲ್ನ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಮನವಿ
ಹೊಸಪೇಟೆ 3: ಎ.ಐ.ಡಿ.ಎಸ್.ಓ. ಹಾಗೂ ಎಐಡಿವೈಓ ಸಂಘನೆಗಳ ವತಿಯಿಂದ ಜಂಬುನಾಥ್ ಗುಡ್ಡದ ಹತ್ತಿರದ ಮೂರು ಹಾಸ್ಟೆಲ್ ಗಳ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಲಾಯಿತು.
ಹೊಸಪೇಟೆ ಹೊರವಲಯದಲ್ಲಿರುವ ಮೂರು ಹಾಸ್ಟೆಲ್ ನಲ್ಲಿ ಒಟ್ಟು 350-400 ವಿದ್ಯಾರ್ಥಿಗಳು ಇರುತ್ತಾರೆ. ಇವರು ನಗರದ ವಿಜಯನಗರ ಕಾಲೇಜು, ಶ್ರೀ ಶಂಕರ್ ಆನಂದ್ ಪದವಿ, ಸಪ್ತಗಿರಿ ಪ್ಯಾರಾಮೇಡಿಕಲ್ ಕಾಲೇಜು, ಪ್ರೌಡದೇವರಾಯ ಇಂಜಿನಿಯರಿಂಗ್ ಕಾಲೇಜು, ಡಿಪೆÇ್ಲೀಮಾ ಕಾಲೇಜು, ಐಟಿಐ ಕಾಲೇಜು - ಹೀಗೆ ಅನೇಕ ಕಾಲೇಜುಗಳಿಗೆ ವಿವಿಧ ಸಮಯಗಳಲ್ಲಿ ತೆರಳ ಬೇಕಾಗುತ್ತದೆ. ಮುಖ್ಯವಾಗಿ ಬೆಳಗ್ಗೆ 7 ಕ್ಕೆ 11 ಕ್ಕೆ ಹಾಗೂ ಸಂಜೆ 6 ಕ್ಕೆ ಬಸ್ ಸೌಲಭ್ಯ ಇಲ್ಲದೆ ದೂರದವರೆಗೂ ನಡೆದುಕೊಂಡು ಹೋಗುವುದು ಕμÀ್ಟ ಎಂದು ತಮ್ಮ ಕμÀ್ಟಗಳನ್ನು ತೋಡಿಕೊಂಡರು.
ಎಐಡಿವೈಓ ಪದಾಧಿಕಾರಿಗಳಾದ ಪಂಪಾಪತಿ, ಹುಲುಗಪ್ಪ ಎ.ಐ.ಡಿ.ಎಸ್.ಓ ರಾಜ್ಯ ಸೆಕ್ರೆಟರಿಯೆಟ್ ಸದಸ್ಯರಾದ ರವಿಕಿರಣ್ ಹಾಗೂ ವಿದ್ಯಾರ್ಥಿಗಳಾದ ಜೆಹೆಚ್.ನಾಗರಾಜ್, ಸೋಮಪ್ಪ, ಗಣೇಶ್, ಸುದೀಪ್, ನವೀನ್ ಯಲ್ಲಾಲಿಂಗ ಮುಂತಾದವರು ಭಾಗವಹಿಸಿದ್ದರು.