ಭೋರವೆಲ್ಗಳಿಗೆ ನೀಡುವ ವಿದ್ಯುತ್ ಸಮಯ ಬದಲಾವಣೆಗೆ ಆಗ್ರಹಿಸಿ ಮನವಿ
ಶಿಗ್ಗಾವಿ 21: ತಾಲೂಕಿನ ಹನುಮರಹಳ್ಳಿ, ಹಿರೇಮಲ್ಲೂರ, ಚಿಕ್ಕಮಲ್ಲೂರ, ಕಂಕನವಾಡ, ಮೋಟಳ್ಳಿ, ಚಿಕ್ಕನೆಲ್ಲೂರ ಗ್ರಾಮಗಳ ಭೋರವೆಲ್ಗಳಿಗೆ ನೀಡುವ ವಿದ್ಯುತ್ ಸಮಯದಲ್ಲಿ ಬದಲಾವಣೆ ಮಾಡುವಂತೆ ಆಗ್ರಹಿಸಿ ಆ ಭಾಗದ ರೈತರು ರೈತ ಮುಖಂಡರ ನೇತೃತ್ವದಲ್ಲಿ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರೈತ ಸಂಘದ ಅದ್ಯಕ್ಷ ಬಸಲಿಂಗಪ್ಪ ನರಗುಂದ ಮಾತನಾಡಿ ತಾಲೂಕಿನಲ್ಲಿ ವಿವಿಧ ಗ್ರಾಮಗಳಿಗೆ 1ನೇ ಶಿಫ್ಟ್ ಬೆಳಗ್ಗೆ 6 ರಿಂದ 10 ವರಗೆ, ರಾತ್ರಿ 10 ರಿಂದ 1 ಗಂಟೆಯ ವರೆಗೆ ಈಗ ವಿದ್ಯುತ್ ನೀಡುತ್ತಿದ್ದು 2 ನೇ ಶಿಫ್ಟ್ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಮತ್ತು ರಾತ್ರಿ 1 ಗಂಟೆಯಿಂದ 4 ಗಂಟೆಗಳ ವರೆಗೆ ಇದೆ, ಇದರಿಂದ ರೈತರಿಗೆ ಭಾರಿ ತೊಂದರೆಯಗುತ್ತಿದ್ದು ಸಮಯದಲ್ಲಿ ಬದಲಾವಣೆ ಮಾಡಿ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ವರೆಗೆ ರಾತ್ರಿ 8 ರಿಂದ 11 ಗಂಟೆಗಳ ವರೆಗೆ 1 ನೇ ಶೀಫ್ಟ್ ನಲ್ಲಿ ವಿದ್ಯುತ್ ಪೂರೈಸಬೇಕು ಮತ್ತು ಪ್ರತಿದಿನ 7 ತಾಸು ವಿದ್ಯುತ್ ಕೊಡುವ ಬದಲು 8 ತಾಸು ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಹೆಸ್ಕಾಂ ಇಲಾಖೆಯವರಿಂದ ಸ್ಪಂದನೆ ಮಾತ್ರ ಶೂನ್ಯವಾಗಿತ್ತು, ಈ ಸಂದರ್ಭದಲ್ಲಿ ರೈತ ಮುಖಂಡರಾದ ಈರಣ್ಣ ಸಮಗೊಂಡ, ಶಂಕರಗೌಡ ಪಾಟೀಲ್, ಅಶೋಕ ನೆರ್ತಿ, ಎಸ್ ಬಿ ಲಿಂಗನಗೌಡ, ಬಿ ಎಸ್ ಶಿವಣ್ಣವರ, ಶ್ರೀಕಾಂತಗೌಡ ಹುತ್ತನಗೌಡ್ರ, ನಾಗನಗೌಡ ಹುತ್ತನಗೌಡ್ರ, ರಂಗನಾಥಗೌಡ ಲಿಂಗನಗೌಡ್ರ, ಧರ್ಮಪ್ಪ ತೆಂಬದಮನಿ, ಪ್ರಕಾಶಗೌಡ ಪಾಟೀಲ್, ಸತೀಶ ಸಾವಕ್ಕನವರ, ತಿರಕಪ್ಪ ಚಲವಾದಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಉಪಸ್ಥಿತರಿದ್ದರು.