ಕಾರವಾರ

ದೇವಸ್ಥಾನ ನಿರ್ಮಾಣಕ್ಕಾಗಿ ಜಾಗ ಮಂಜೂರಿಗೆ ಆಗ್ರಹಿಸಿ ಮನವಿ

ದೇವಸ್ಥಾನ ನಿರ್ಮಾಣಕ್ಕಾಗಿ  ಜಾಗ ಮಂಜೂರಿಗೆ ಆಗ್ರಹಿಸಿ ಮನವಿ

ಮುಂಡಗೋಡ: ಶಿವಶರಣ ಹಡಪದ ಅಪ್ಪಣ್ಣ ದೇವಸ್ಥಾನ ನಿರ್ಮಾಣಕ್ಕೆ ಜಾಗ ಮಂಜೂರಿ ಮಾಡುವಂತೆ ಆಗ್ರಹಿಸಿ ಶಿವಶರಣ ಹಡಪದ ಅಪ್ಪಣ್ಣ (ಕ್ಷೌರಿಕ) ಪುರುಷರ ಕ್ಷೇಮಾಭಿವೃದ್ದಿ ಸಂಘ ಮುಂಡಗೋಡ ಇವರು ಶನಿವಾರ ತಹಸೀಲ್ದಾರರಿಗೆ ಮನವಿ ಅರ​‍್ಿಸಿದರು. 

ಮುಂಡಗೋಡ ತಾಲೂಕಿನಲ್ಲಿ ಶಿವಶರಣ ಹಡಪದ ಅಪ್ಪಣ್ಣ ಜನಾಂಗ ಸಾಕಷ್ಟು ಪ್ರಮಾಣದಲ್ಲಿದ್ದು, ಹಡಪದ ಜನಾಂಗದ ಆಶೋತ್ತರ ಬೇಡಿಕೆಯಂತೆ ದೇವಾಲಯ ನಿರ್ಮಾಣಕ್ಕಾಗಿ ಜಾಗ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.  

ಶಿವಶರಣ ಹಡಪದ ಅಪ್ಪಣ್ಣ (ಕ್ಷೌರಿಕ) ಪುರುಷರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಮಂಜುನಾಥ, ಹಡಪದ, ಮಹೇಶ ಹಡಪದ, ಶಾಂತಪ್ಪ ಹಡಪದ, ಚಿದಾನಂದ ಹಡಪದ, ಬಸವರಾಜ ಹಡಪದ, ಮಂಜುನಾಥ ಆಲದಕಟ್ಟಿ,  ಮಂಜುನಾಥ ಕ್ಷೌರದ, ಶಂಕರ ಹುಲಗೂರ, ಜಗದೀಶ ಕುನ್ನೂರ, ಮಾಂತೇಶ ಹಡಪದ, ನಿಂಗಪ್ಪ ನಂದಿಕಟ್ಟಿ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ