ಮಾತಾ ಪಬ್ಲಿಕ್ ಶಾಲೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ
ಲೋಕದರ್ಶನ ವರದಿ
ರಾಣಿಬೆನ್ನೂರ 30: ನಗರದ ಮಾತಾ ಪಬ್ಲಿಕ್ ಶಾಲೆಯಲ್ಲಿ 73ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಧ್ವಜಾರೋಹಣವನ್ನು ನಗರಸಭಾ ಮಾಜಿ ಸದಸ್ಯ ಮಂಜುನಾಥ ಗೌಡಶಿವಣ್ಣನವರ ನೆರವೇರಿಸಿದರು. ಕೆ.ಎಪ್. ಆನ್ವೇರಿ, ಬಿ.ಹೆಚ್. ಮಡ್ಲೂರ, ಮುಖ್ಯಶಿಕ್ಷಕ ಚನಬಸಪ್ಪ ಎಸ್, ಗಣೇಶ ಕರಬಣ್ಣನವರ,ಲತಾ ಸಿಎಸ್, ಶಿಲ್ಪಾ ಬಿಕೆ, ಶ್ಯಾಮಿಲಿ ಕಡೂರ, ಪುಸ್ಪಲತಾ, ಆಶಾ, ನಾಗೇಂದ್ರ ಮಡಿವಾಳರ ರೂಪಾ ಆಫ್ರಿನ್, ರೇಖಾ, ಗಿರಿಜಾ, ಪಾರಮ್ಮ ಚೆನ್ನಗಿರಿ ಸೇರಿದಂತೆ ಮತ್ತಿತರರು ಇದ್ದರು.