ಸ್ನೇಹದೀಪ ಅಂಧ ಅಂಗವಿಕಲರ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ
ಲೋಕದರ್ಶನ ವರದಿ
ರಾಣೇಬೆನ್ನೂರ 02: ಇಲ್ಲಿನ ರಾಮ ನಗರದ ಸ್ನೇಹ ದೀಪ ಅಂಧ ಅಂಗವಿಕಲರ ಸೇವಾ ಸಂಸ್ಥೆಯಲ್ಲಿ ಜ26 ರಂದು 73ನೇ ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮವು ಸರಳವಾಗಿ ಆಚರಿಸಲಾಯಿತು.
ವರ್ತಕ ಜಿ.ಜಿ.ಹೊಟ್ಟಿಗೌಡ್ರ ಅವರು 73ನೇ ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಹಲಗೇರಿ ಪಿಎಸ್ಐ ಕೆ.ಸಿ.ಕೋಮಲಾಚಾರ್, ಸಂಸ್ಥೆಯ ಶ್ರೀರಂಗಂ, ಮಹೇಶ್ ನಾಡಿಗೇರ, ಯೋಗೇಶ್ ಭವಾನಿ ಶಂಕರ್, ವಸಂತ ಹುಲ್ಲತ್ತಿ ಸೇರಿದಂತೆ ಸಂಸ್ಥೆಯ ಅನೇಕ ಪದಾಧಿಕಾರಿಗಳು, ಶಿಕ್ಷಕರು ಮತ್ತು ನಗರದ ಅನೇಕ ಗಣ್ಯರು ಪಾಲ್ಗೊಂಡಿದ್ದರು.