ಸಾಲ ಮರುಪಾವತಿಸಿ ಸಂಸ್ಥೆಗಳ ಅಭಿವೃದ್ಧಿಗೆ ಸಹಕಾರ ನೀಡಿ: ಪುರದಗುಡಿ
ಲೋಕದರ್ಶನ ವರದಿ
ಸವದತ್ತಿ 18: ಸಾಲ ಪಡೆದಂತ ಸದಸ್ಯರು ಸರಿಯಾದ ಸಮಯಕ್ಕೆ ಮರುಪಾವತಿ ಮಾಡುವ ಮೂಲಕ ಸಂಸ್ಥೆಗಳ ಅಭಿವೃದ್ದಿಗೆ ಸಂಪೂರ್ಣ ಸಹಕಾರ ನೀಡಬೇಕೆಂದು ಸೊಸೈಟಿ ಅಧ್ಯಕ್ಷ ಮಹಾಬಳೇಶ್ವರ ಪುರದಗುಡಿ ಹೇಳಿದರು.
ಸ್ಥಳೀಯ ಜ್ಯೋತಿ ಅರ್ಬನ ಕೋ.ಆಫ್ ಕ್ರೆಡಿಟ್ ಸೊಸೈಟಿಯ 26ನೇ ವಾರ್ಷಿಕ ಸರ್ವ ಸಾಧರಣಾ ಸಭೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿ ಅವರು, ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿಯವರು ಕೂಡಲೆ ಗುಣಮುಖರಾಗಲಿ ಎಂದು ರೇಣುಕಾದೇವಿಯಲ್ಲಿ ಪ್ರಾರ್ಥಿಸಿದ್ದರು. ಹಣಕಾಸು ಸಂಸ್ಥೆಗಳು ತಮ್ಮ ಅಸ್ಥಿತ್ವವನ್ನು ಸ್ಥಿರವಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಭದ್ರತೆಯ ಕಡೆಗೆ ವಿಶೇಷ ಗಮನ ನೀಡಬೇಕಿದೆ ಎಂದರು.
ಮುನವಳ್ಳಿಯ ಅಕ್ಷತಾ ಮರದಬಿಡಕಿನ ತಹಸೀಲ್ದಾರರಾಗಿ ಆಯ್ಕೆಆಗಿದಕ್ಕೆ ಸನ್ಮಾನ ಸ್ವೀಕರಿಸಿ ಮಾತನಾಡಿ ಈ ಸಂಸ್ಥೆಯಿಂದ ನಡೆಯುತ್ತಿರುವ ವಿದ್ಯಾರ್ಥಿಗಳ ಸನ್ಮಾನ ಮತ್ತು ಪ್ರೋತ್ಸಾಹದಂತಹ ಕಾರ್ಯವು ಶ್ಲಾಘನೀಯವಾಗಿದೆ ಎಂದರು.
ಪ್ರಾಚಾರ್ಯ ಡಾ.ವೈ.ಎಮ್.ಯಾಕೊಳ್ಳಿ ಮಾತನಾಡಿ, ಸಮಾಜದಲ್ಲಿರುವ ಸಾಕಷ್ಟು ಆರ್ಥಿಕ ಸಹಕಾರಿ ಸಂಸ್ಥೆಗಳು ಇಂದು ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸುವದರ ಜೊತೆಗೆ ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ಸಬಲತೆಯನ್ನು ನೀಡುತ್ತಿವೆ ಎಂದರು.
ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ರೇಣುಕಾ ಮನಗೋಳಿ, ಸುಧಾ ಕಾಶೀದ, ಜಯಶ್ರೀ ಕೀಲಿ, ಕಾರ್ತಿಕ ಕುಲಕರ್ಣಿ, ವರ್ಷಿಣಿ ಲಾಳಗೆ, ಹೇಮಂತ ಬಜೇರಿ, ಸಮೀರ ಅತ್ತಾರ, ವೈಷ್ಣವಿ ಪಾಶ್ಚಾಪೂರ, ಶ್ರೇಯಾ ದ್ಯಾಮನ್ನವರ, ಪ್ರೀತಿ ಕದಂ, ಚನ್ನವೀರ ನವಲಗುಂದ, ಸಂಭರಮ್ ಜಾಧವ, ಅನುಷಾ ಗೋರಬಾಳ, ಅನ್ನಪೂರ್ಣ ಬಿಕ್ಕಣ್ಣವರ, ಸನಾ ಅತ್ತಾರ, ಶೃಷ್ಠಿ ಕರೇನ್ನವರ, ಸೌಜನ್ಯಾ ಗೌಡಾ, ಚೈತ್ರಾ ಶಿವಬಸನ್ನವರ, ಸಂಪತಕುಮಾರ ಚವ್ಹಾಣ, ಸೌಜನ್ಯಾ ಕುದರಿ, ಶ್ರೀಶೈಲ ಹೇಬ್ಬಳ್ಳಿ, ವಿಜಯಲಕ್ಷಿ-್ಮ ಪಾಣಿಗಟ್ಟ, ಕಿರಣ ವಕ್ಕುಂದ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹಿರಿಯ ನ್ಯಾಯವಾದಿ ವಿ ವಿ ಹಿರೇಮಠ, ಡಾ.ಎನ್.ಸಿ.ಬೆಂಡಿಗೇರಿ, ಮಹಾಬಳೇಶ್ವರ ಸಾಲೋಣಿ, ರಾಮಪ್ಪ ರಾಮಪ್ಪನವರ, ಸೋಮಪ್ಪ ಅವಗಡನವರ, ಫಕ್ಕೀರ್ಪ ಬಟಕುರ್ಕಿ, ಗಂಗಪ್ಪ ಬಟಕುರ್ಕಿ, ಹಣಮಂತ ಹಳಕಟ್ಟಿ ಇತರರು ಉಪಸ್ಥಿತರಿದ್ದರು.