ರೇಣುಕಾ ಅಧ್ಯಕ್ಷೆ, ಕಲ್ಲೇಶ ಉಪಾಧ್ಯಕ್ಷರಾಗಿ ಆಯ್ಕೆ
ಮುಂಡಗೋಡ:ತಾಲೂಕಿನ ಇಂದೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ರೇಣುಕಾ ಬಡಿಗೇರ ಅಧ್ಯಕ್ಷರಾಗಿ ಮತ್ತು ಕಲ್ಲೇಶ ಸುಣಗಾರ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ಅನ್ನಪೂರ್ಣ ಬೆಣ್ಣಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಿಕಂದರ್ ಬಂಕಾಪುರ ರಾಜೀನಾಮೆ ಸಲ್ಲಿಸಿದ್ದರು. ತೆರವಾಗಿದ್ದ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಜಿಯಾ ಬೇಗಂ ಗೌಳಿ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿ ರೇಣುಕಾ ಬಡಿಗೇರ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಧರ್ಮರಾಜ ನಡಿಗೇರ ಮತ್ತು ಬಿಜೆಪಿ ಬೆಂಬಲಿತ ಕಲ್ಲೇಶ ಸುಣಗಾರ ನಾಮಪತ್ರ ಸಲ್ಲಿಸಿದ್ದರು.
ಒಟ್ಟು 16 ಮಂದಿ ಸದಸ್ಯರನ್ನು ಒಳಗೊಂಡ ಗ್ರಾ.ಪಂ.ಚುನಾವಣೆಯಲ್ಲಿ ರೇಣುಕಾ ಬಡಿಗೇರ ಮತ್ತು ಕಲ್ಲೇಶ ಸುಣಗಾರ 13ರಂತೆ ಮತ ಪಡೆದು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು. ಪ್ರತಿಸ್ಪರ್ಧಿಗಳು ತಲಾ 3 ಮತ ಪಡೆದರು. ಚುನಾವಣಾ ಅಧಿಕಾರಿಯಾಗಿ ರಫೀಕ್ಸಾಬ್ ಮೀರಾನಾಯಕ ಕಾರ್ಯ ನಿರ್ವಹಿಸಿದರು. ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಈ ವೇಳೆ ರವಿಗೌಡ ಪಾಟೀಲ, ಪರಶುರಾಮ ತಹಶೀಲ್ದಾರ, ಸುನೀಲ ವೆರ್ಣೇಕರ, ಕೆಂಜೋಡಿ ಗಲಬಿ, ಬಿ.ಕೆ.ಪಾಟೀಲ, ಅಶೋಕ ಸೂರಣ್ಣವರ, ಮಹಮ್ಮದ್ರಫೀಕ್ ದೇಸಳ್ಳಿ, ರಾಜು ಗುಬ್ಬಕ್ಕನವರ, ಬಿಷ್ಠನಗೌಡ ಪಾಟೀಲ, ರವಿ ದುಗ್ಗಳ್ಳಿ, ಅಶೋಕ ತಡಸದ, ಬಸವರಾಜ ಗಲಬಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.