ರಾಣೆಬೆನ್ನೂರ

ಶನೈಶ್ಚರ ಮಂದಿರದಲ್ಲಿ ಇಂದಿನಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭ

ಶನೈಶ್ಚರ ಮಂದಿರದಲ್ಲಿ ಇಂದಿನಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭ

ಲೋಕದರ್ಶನ ವರದಿ 

ರಾಣಿಬೆನ್ನೂರ 29:  ನಗರದ ಹೊರವಲಯದಲ್ಲಿರುವ ಹಿರೇಮಠದ ಶನೈಶ್ಚರ ಸ್ವಾಮಿ ಮಂದಿರದ ಆವರಣದಲ್ಲಿ ಲೋಕಕಲ್ಯಾಣಾರ್ಥವಾಗಿ ಹಾಗೂ ಪ್ರದೇಶಾಭಿವೃದ್ದಿಗಾಗಿ ನಿರಂತರ 384 ದಿನಗಳ ಕಾಲ ನಡೆಯುತ್ತಿರುವ ವಿವಿಧ ಧಾರ್ಮಿಕ ಹಾಗೂ ಪೂಜಾ ಕಾರ್ಯಕ್ರಮದ 9 ನೇ ವರ್ಷದ ಶನೈಶ್ಚರ ಸ್ವಾಮಿಯ ವಾರ್ಷಿಕೋತ್ಸವದ  ಅಂಗವಾಗಿ ಸೋಮವಾರ ಶನೈಶ್ಚರಸ್ವಾಮಿಗೆ ಗಂಗಾಪೂಜೆ ನೆರವೇರಿಸಿ ಅನಂತರ ಪಂಚಾಚಾರ್ಯ ಧ್ವಜಾರೋಹಣ ಮಾಡುವುದರ ಮೂಲಕ ವಿವಿಧ ಕಾರ್ಯಕ್ರಮಗಳಿಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. 

     ಕೂಡಲದ ಗುರುಮಹೇಶ್ವರ ಶಿವಾಚಾರ್ಯರು ಧ್ವಜಾರೋಹಣ ನೆರವೇರಿಸಿ 384 ದಿನಗಳ ಕಾಲ ಮುನ್ನಡೆಸಿಕೊಂಡು ಬಂದಿರುವ ವೈವಿಧ್ಯಮಯ ಕಾರ್ಯಕ್ರಮಗಳ ಮಂಗಲೋತ್ಸವ ಕಾರ್ಯಕ್ರಮಕ್ಕೆ ಇಂದಿನಿಂದ ಚಾಲನೆ ದೊರೆತ್ತಿದ್ದು, ಇಂತಹ ವಿನೂತನ ಕಾರ್ಯಕ್ರಮ ನಡೆಯುತ್ತಿರುವುದು ರಾಷ್ಟ್ರದಲ್ಲಿಯೇ ಇದೇ ಪ್ರಥಮವಾಗಿದೆ. ಇದರ ಯಶಸ್ವಿಗೆ ಮುಂದಿನ 5 ದಿನಗಳ ಕಾಲ ಸಹಕರಿಸಬೇಕು. ಇದರಿಂದ ಇಡೀ ನಾಡಿಗೆ ಒಳಿತಾಗುವುದು ಎಂದರು. 

    ಶನೈಶ್ಚರ ಮಂದಿರದ ಶ್ರೀ ಶಿವಯೋಗಿ ಶಿವಚಾರ್ಯ ಸ್ವಾಮಿಗಳು ಮಾತನಾಡಿ ಡಿ. 4ರವರೆಗೆ ನಡೆಯಲಿರುವ ಈ ವಿಶೇಷವಾದ ಕಾರ್ಯಕ್ರಮಗಳಿಗೆ ನಾಡಿನ ಹರ-ಗುರು-ಚರ ಮೂರ್ತಿಗಳು ಮತ್ತಿತರರು ಆಗಮಿಸಲಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು. ಸ್ವಾಗತ ಸಮಿತಿಯ ಅಧ್ಯಕ್ಷ ಎಸ್‌.ಎಸ್‌.ರಾಮಲಿಂಗಣ್ಣನವರ, ಕಾರ್ಯದರ್ಶಿ ಸಿದ್ದಪ್ಪ ಚಿಕ್ಕಬಿದರಿ, ನಗರಸಭೆ ಸದಸ್ಯ ಪ್ರಕಾಶ ಪೂಜಾರ ಸೇರಿದಂತೆ ಶಾಸ್ರ್ತಿಗಳು, ವಟುಗಳು, ಭಕ್ತರು ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ