ರಾಣೆಬೆನ್ನೂರ

ಶಾಂತಿ ನೆಮ್ಮದಿಯ ಬದುಕಿಗೆ ಧರ್ಮದ ಆಚರಣೆ ಅಗತ್ಯ: ಶಿವಯೋಗಿ ಶ್ರೀ

ಶಾಂತಿ ನೆಮ್ಮದಿಯ ಬದುಕಿಗೆ ಧರ್ಮದ ಆಚರಣೆ ಅಗತ್ಯ: ಶಿವಯೋಗಿ ಶ್ರೀ

ರಾಣೇಬೆನ್ನೂರ 11: ಭಾರತೀಯರು ಅಂದಿನಿಂದ ಇಂದಿನವರೆಗೂ ಶಾಂತಿ, ನೆಮ್ಮದಿ ಮತ್ತು ಭಾವೈಕ್ಯತೆಯಿಂದ ತಮ್ಮ ಬದುಕನ್ನು ಸಾಗಿಸುತ್ತಿರುವುದಾದರೆ ಧರ್ಮದ ತಳಹದಿಯ ಮೇಲಿನ ಪೂಜೆ, ಪುನಸ್ಕಾರ, ಧರ್ಮಾಚರಣೆ ಮತ್ತು ಹಬ್ಬ ಹರಿದಿನಗಳು, ಜಾತ್ರೋತ್ಸವಗಳು ಇದಕ್ಕೆ ಮೂಲ ಕಾರಣವಾಗಿದೆ ಎಂದು ಗುಡ್ಡದ ಆನ್ವೇರಿ ವಿರಕ್ತ ಮಠದ ಶಿವಯೋಗಿ ಶಿವಾಚಾರ್ಯರು ಹೇಳಿದರು. 

ಅವರು ಮಂಗಳವಾರ ತಾಲೂಕಿನ ಇತಿಹಾಸ ಪ್ರಸಿದ್ಧ ಹುಲ್ಲತ್ತಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ 51 ಅಡಿ ಎತ್ತರದ ನೂತನ ಗೋಪುರ ನಿರ್ಮಾಣ ಕಾಮಗಾರಿಯ ಪೂಜಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಮನುಷ್ಯ ಎಷ್ಟೇ ಗಳಿಸಿದರೂ ಸಹ ಒಂದಲ್ಲ ಒಂದು ದಿವಸ ಗಳಿಸಿದ್ದನ್ನು ಬಿಟ್ಟು ಹೋಗಲೇಬೇಕು. ಜೊತೆಗೆ ತೆಗೆದುಕೊಂಡು ಹೋಗಲು ಮಾತ್ರ ಸಾಧ್ಯವಿಲ್ಲ. ಇಷ್ಟೆಲ್ಲ ಗೊತ್ತಿದ್ದರೂ ದಾನ ಧರ್ಮ ಮಾಡಲು ಹಿಂದೇಟು ಏಕೆ? ಎನ್ನುವ ಪ್ರಶ್ನೆ ಧರ್ಮದ ಅನುಯಾಯಿಗಳು ಮತ್ತು ಆಚರಣೆಗೆ ತರುವವರಲ್ಲಿ ಕಾಡುವ ಬಲವಾದ ಪ್ರಶ್ನೆ ಇದಾಗಿದೆ ಎಂದ ಶ್ರೀಗಳು, ದಾನ ಧರ್ಮದಿಂದ ಮಾತ್ರ ಮನುಷ್ಯನ ಜೀವನ ಸಾರ್ಥಕತೆ ಪಡೆಯಲಿದೆ. ಅದಕ್ಕಾಗಿ ಪ್ರತಿಯೊಬ್ಬರೂ ತಮ್ಮ ಕೈಲಾದ ಮಟ್ಟಿಗೆ ಈ ಗೋಪುರ ನಿರ್ಮಾಣ ಕಾಮಗಾರಿಗೆ ಕೈಜೋಡಿಸಬೇಕು. ಆದಷ್ಟು ಬೇಗನೆ ಕಳಸಾರೋಹಣ ಕಾರ್ಯವೂ ಸಹ ನಡೆಯಬೇಕು ಎಂದು ಅವರು ತಮ್ಮ ಸದಾಶಯವನ್ನು ವ್ಯಕ್ತಪಡಿಸಿದರು. 

ಇನ್ನೋರ್ವ ಶ್ರೀಗಳಾದ ದೊಡ್ಡಪೇಟೆಯ ಪುಟ್ಟಯ್ಯನ ವಿರಕ್ತ ಮಠದ ಗುರುಬಸವ ಸ್ವಾಮೀಜಿ ಅವರು, ಭಗವಂತ ಎಲ್ಲರಿಗೂ ಬದುಕುವ, ಬದುಕಿ ಬಾಳುವ ಶಕ್ತಿಯನ್ನು ಕರುಣಿಸಿದ್ದಾನೆ. ಮಠ-ಮಂದಿರಗಳು, ದೇವಸ್ಥಾನಗಳು ಗ್ರಾಮೀಣ ನಾಗರಿಕರ ಮಾನಸಿಕ ಶಾಂತಿ ಹಾಗೂ ನೆಮ್ಮದಿ ನೀಡುವ ಪ್ರಮುಖ ತಾಣಗಳು ಎಂದ ಶ್ರೀಗಳು ಧರ್ಮದ ಹಾದಿಯಲ್ಲಿ ನಡೆದಾಗ ಮಾತ್ರ ಜೀವನ ಸಾರ್ಥಕವಾಗುವುದು. ಗ್ರಾಮೀಣ ನಾಗರಿಕರು ತಮ್ಮ ಗ್ರಾಮದಲ್ಲಿ ಇರುವ ಆಂಜನೇಯ ಸ್ವಾಮಿ ಮಂದಿರಕ್ಕೆ ತನ್ನದೇಯಾದ ಭವ್ಯ ಇರಿಹಾಸ ಪರಂಪರೆಯಿದೆ. ಬೇಡಿದ್ದನ್ನು ಕರುಣಿಸುವ ಶಕ್ತಿ ಆಂಜನೇಯ ಸ್ವಾಮಿಯಲ್ಲಿದೆ ಎಂದರು. 

ಮುಖ್ಯ ಅತಿಥಿಗಳಾಗಿ ವಾ.ಕ.ರ.ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಡಾ.ಬಸವರಾಜ ಕೇಲಗಾರ, ವರ್ತಕರಾದ ಜಿ.ಜಿ.ಹೊಟ್ಟಿಗೌಡ್ರ, ಉಮೇಶ ಹೊನ್ನಾಳಿ, ಉಮೇಶ ಗುಂಡಗಟ್ಟಿ ಪ್ರಭುಸ್ವಾಮಿ ಕರ್ಜಗಿಮಠ, ಶಿವಪುತ್ರ​‍್ಪ ಮಲ್ಲಾಡದ, ಜಗದೀಶ ಕೆರೂಡಿ, ಬಸವರಾಜ ಕೊಂಗಿ, ಚಂದ್ರ​‍್ಪ ತಾವರಗುಂದಿ, ಕಾಳಪ್ಪ ಹುಲ್ಲತ್ತಿ, ಅರ್ಚಕ ಈರ​‍್ಪ ಪೂಜಾರ ಮತ್ತು ಬಸಯ್ಯ ಹಿರೇಮಠ, ಶಂಕ್ರ​‍್ಪ ಮುಳಗುಂದ, ಉಜ್ಜಪ್ಪ ಗುಗ್ಗರಿ, ಶಿವಪ್ಪ ಕೆರೂಡಿ, ಗಂಗಪ್ಪ ಮಣ್ಣಣ್ಣವರ, ಹೊಸರ​‍್ಪ ಕೆರೂಡಿ, ತುಕ್ಕಪ್ಪ ಲಮಾಣಿ, ಹನುಮಂತಪ್ಪ ಜ್ಯೋತಿ, ನಾಗರಾಜ ಬಾರ್ಕಿ, ತ್ರಿವೇಣಿ ಎನ್‌.ಹೆಚ್, ರಾಜು, ಗಂಗಮ್ಮ ಪೂಜಾರ, ಪುಟ್ಟಮ್ಮ ಪೂಜಾರ, ದೀಪಾ ತೆಲಗಿ, ವಿದ್ಯಾ ಕಮಡಳ್ಳಿ, ರೇಣುಕಾ ಪೂಜಾರ,  ಸೇರಿದಂತೆ ಮತ್ತಿತರ ಗಣ್ಯರು, ಗ್ರಾಮದ ಮುಖಂಡರು, ಭಕ್ತರು, ಶಾಲಾ ಮಕ್ಕಳು ಪಾಲ್ಗೊಂಡಿದ್ದರು. 


ಸುದ್ದಿ ಓದಿ