ರಾಣೆಬೆನ್ನೂರ

ಜನ್ಮ ಸಾರ್ಥಕತೆ ಪಡೆಯಲು ಧರ್ಮಜ್ಞಾನ ಅವಶ್ಯ: ಶ್ರೀಶೈಲ ಶ್ರೀ

ಜನ್ಮ ಸಾರ್ಥಕತೆ ಪಡೆಯಲು ಧರ್ಮಜ್ಞಾನ ಅವಶ್ಯ: ಶ್ರೀಶೈಲ ಶ್ರೀ

ಲೋಕದರ್ಶನ ವರದಿ 


ರಾಣೇಬೆನ್ನೂರು 15: ಮನುಷ್ಯ ತನ್ನ ನಿತ್ಯದ ಬದುಕಿನ ಜೀವನದ ಜೋತೆ ಜೋತೆಗೆ ಧಾರ್ಮಿಕತೆಯ ಮನೋಭಾವನೆಯನ್ನು ಅಳವಡಿಸಿಕೂಂಡು ಸಾಗಿದಾಗ ಮಾತ್ರ ಜನ್ಮ ಸಾರ್ಥಕತೆ ಪಡೆಯಲು ಸಾಧ್ಯವಾಗುವುದು ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಶ್ರೀ ಚನ್ನಸಿದ್ದರಾಮ ಮಹಾಸ್ವಾಮಿಗಳು ನುಡಿದರು.  

ಅವರು ನಗರ ಹೂರ ವಲಯದ ಹಿರೇಮಠ ಶನೈಶ್ಚರ ಮಂದಿರದಲ್ಲಿ ಲೋಕಕಲ್ಯಾಣಾರ್ಥ ಮತ್ತು ಪ್ರದೇಶಾಭಿವೃದ್ದಿಗಾಗಿ 384 ದಿನಗಳ ಕಾಲ ನಡೆಯಲಿರುವ ವಿವಿಧ ಧಾರ್ಮಿಕ ಕಾರ್ಯಕ್ರಮದ 365ನೇ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದರು. ಯಾವ ಮನುಷ್ಯನಲ್ಲಿ ದೂಡ್ಡ ದೂಡ್ಡ ವಿಚಾರಗಳು ಇರುತ್ತವೋ ಸಮಾಜಕ್ಕೆ ಒಳಿತು ಬಯಸುವ ಮನಸ್ಸುಗಳಿರುತ್ತವೋ ಅಂತವರು ಸಮಾಜಕ್ಕೆ ಆದರ್ಶರಾಗಿರುತ್ತಾರೆ. ಇಂದು ಸಮಾಜದಲ್ಲಿ ಶಕ್ತಿ ಎಂಬುದು ಪ್ರಾಮುಖ್ಯತೆ ಪಡೆದಿದೆ, ಶಕ್ತಿಯಿಂದಲೇ ಯುಕ್ತಿ ಎಂಬುದನ್ನು ಮರೆಯದೇ ಶಕ್ತಿ ಉಪಾಸನೆ ಮಾಡುವುದರ ಮೂಲಕ ಶಿವನ ಜಪವನ್ನು ಮಾಡಬೇಕು ಅಂದಾಗ ಮಾತ್ರ ಜೀವನ ಮುಕ್ತಿ ಹೂಂದಲು ಸಾಧ್ಯ ಎಂದರು.  

ದಿವ್ಯ ಸಾನಿದ್ಯ ವಹಿಸಿದ್ದ ಹಿರೇಮಠದ ಶಿವಯೋಗಿ ಮಹಾಸ್ವಾಮಿಗಳು ಯಾರೇ ಆಗಿರಲೀ ಧರ್ಮದ ತಳಹದಿಯ ಮೇಲೆ ಬದುಕನ್ನು ಕಟ್ಟಿಕೂಂಡು ಮಾನವ ಕುಲಕ್ಕೆ ಮಾದರಿಯಾಗಬೇಕು. ಹುಟ್ಟಿ ಬಂದ ಜೀವ ಭಗವಂತನಾಗಬೇಕಾದರೆ ಶಾಂತಿ, ಸಹನೆ, ತಾಳ್ಮೆ ಜೋತೆಗೆ ಧಾರ್ಮಿಕತೆಯನ್ನು ಮೈಗೂಡಿಸಿಕೂಂಡು ಅದ್ಯಾತ್ಮಿಕತೆಯಲ್ಲಿ ತೂಡಗಿಸಿಕೂಂಡು ಸಾಗಿದಾಗ ಅಂತವರಲ್ಲಿ ಸಾಕ್ಷಾತ್ ಭಗವಂತನ್ನು ಕಾಣಬಹುದು ಎಂದ ಅವರು   ಆತ್ಮ ಜ್ಞಾನವನ್ನು ಹೆಚ್ಚಿಸಿಕೂಂಡು ಮತ್ತೋಬ್ಬರಿಗೆ ಸ್ಪೋರ್ತಿಯಾಗಬೇಕು ಆತ್ಮ ಜ್ಞಾನವನ್ನು ಭೋದಿಸುವವರು ಬೇರೆ ಯಾರೂ ಅಲ್ಲ, ಮಠಾಧೀಶರು, ನೀವು ನಂಬಿದ ಗುರುಗಳು, ಅವರ ಮಾರ್ಗದಲ್ಲಿ ತಾವೆಲ್ಲರೂ ಸಾಗಬೇಕು ಅಂದಾಗ ನೀವು ಈ ಭೂಮಿಯಲ್ಲಿ ಜನ್ಮ ಪಡೆದಿದ್ದಕ್ಕೂ ಸಾರ್ಥಕವಾಗುತ್ತದೆ ಎಂದರು.  

ವೇದಿಕೆಯಲ್ಲಿ ಕುಮಾರಪಟ್ಟಣ ಪುಣ್ಯಕೋಟಿ ಮಠದ ಶ್ರೀ ಜಗದೀಶ್ವರ ಸ್ವಾಮಿಜಿ, ಗಂಗಾಧರ ಮಠದ, ಶಿವಪ್ಪ ಕುರುವತ್ತಿ, ಕೊಟ್ರೇಶಪ್ಪ ಎಮ್ಮಿ, ಪುಷ್ಪಾ ಬದಾಮಿ, ಸೇರಿದಂತೆ ಮತ್ತಿತರ ಗಣ್ಯರು ಭಕ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ