ಸೌಂದತ್ತಿ

ಮನೆ ಹಾನಿ ಅರ್ಜಿದಾರರಿಗೆ ಬಸವ, ಅಂಬೇಡ್ಕರ ವಸತಿ ಯೋಜನೆಯಡಿ ಪರಿಹಾರ

ಮನೆ ಹಾನಿ ಅರ್ಜಿದಾರರಿಗೆ ಬಸವ, ಅಂಬೇಡ್ಕರ ವಸತಿ ಯೋಜನೆಯಡಿ ಪರಿಹಾರ
ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ಡಿಸಿ ನಿತೇಶ ಪಾಟೀಲ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.

ಸವದತ್ತಿ 15: ಮೂರು ವರ್ಷ ಕಳೆದರೂ ಬೆಳೆ ಹಾನಿ ಪರಿಹಾರ ಸಿಕ್ಕಿಲ್ಲ. ಜಮೀನು ವಾಟ್ನಿ ಕುರಿತು ತಲಾಟಿಗಳು ಸೂಕ್ತ ಕ್ರಮ ವಹಿಸುತ್ತಿಲ್ಲವೆಂದು ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಸಾರ್ವಜನಿಕರ ಅಹವಾಲು ಸ್ವೀಕಾರ ವೇಳೆ ಜನತೆ ಮನವಿ ಮಾಡಿದರು.

ರೈತರ ಪಹಣಿಯಲ್ಲಿ ನೀರಾವರಿ ನಿಗಮದ ಹೆಸರು, ರೈತರ ಕಡೆಗಣನೆ. ಕಾರಖಾನೆಯಲ್ಲಿ ತೂಕ ಮಾಡಿದ ಹಾಗೂ ಪ್ರತ್ಯೇಕವಾಗಿ ಮಾಡಿದ ಕಬ್ಬು ಬೆಳೆ ತೂಕದಲ್ಲಿ ಅತೀವ ವ್ಯತ್ಯಾಸ ಬರುತ್ತಿದೆ ಎಂದು ರೈತ ಮತ್ತು ಜನರಿಂದ ಅರ್ಜಿ ಸಲ್ಲಿಸಲಾಯಿತು.    ಜೆಇ ನಿರ್ಮಲಾ ನಾಯಕ ಅವರನ್ನು ಡಿಸಿ ಎದುರು ಜನ ತರಾಟೆಗೆ ತೆಗೆದುಕೊಂಡರು. ಘನತ್ಯಾಜ್ಯ ವಿಲೇವಾರಿ ಘಟಕದ ಹತ್ತಿರ ನಾಯಿಗಳ ಹಾವಳಿ ಮತ್ತು ದುರ್ವಾಸನೆ ಬಗ್ಗೆ ಮನವಿ ನೀಡಲಾಯಿತು. 

ಚರಂಡಿ ಶುದ್ಧೀಕರಣ ಘಟಕ ಕಾಮಗಾರಿ ಅಪೂರ್ಣವಾದರೂ ಪುರಸಭೆಯಿಂದ ಹಣ ಪಾವತಿಸಲಾಗಿದೆಂದು ಕ್ರಮ ವಹಿಸಲು ಡಿಸಿ ಅವರಿಗೆ ದೂರು ನೀಡಲಾಯಿತು. ಯಲ್ಲಮ್ಮ ದೇವಸ್ಥಾನದಲ್ಲಿ ಇಷ್ಟೊಂದು ಸಿಬ್ಬಂದಿ ಸ್ವಚ್ಛತೆ ಕಾರ್ಯದಲ್ಲಿದ್ದರೂ ದೇವಸ್ಥಾನದ ಸ್ವಚ್ಛತೆ ಮರೀಚಿಕೆಯಾಗಿದೆ. ಮುಜರಾಯಿ ಇಲಾಖೆಯ ಎಸಿ ಯೊಂದಿಗೆ ಚರ್ಚಿಸಲಾಗುವದೆಂದು ಜಿಲ್ಲಾಧಿಕಾರಿ ನಿತೀಶ ಪಾಟೀಲ ತಿಳಿಸಿದರು. 

ಕೆಲ ವೈಯಕ್ತಿಕ ಅರ್ಜಿಗಳನ್ನು ನೇರವಾಗಿ ನಾಗರಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ನ್ಯಾಯ ಪಡೆಯಿರಿ. ಮನೆ ಹಾನಿ ಪರಿಹಾರ ಸಿಗದ ಅರ್ಜಿದಾರರಿಗೆ ಬಸವ ವಸತಿ ಯೋಜನೆ ಅಥವಾ ಅಂಬೇಡ್ಕರ ವಸತಿ ಯೋಜನೆಯಲ್ಲಿ ಪರಿಹಾರ ಕಲ್ಪಿಸಲು ತಿಳಿಸಿದರು.

ಈ ವೇಳೆ ಎಸ್.ಪಿ. ಸಂಜೀವ ಎಮ್. ಪಾಟೀಲ, ಸಿಇಓ, ತಹಶೀಲ್ದಾರ ಜಿ.ಬಿ. ಜಕ್ಕನಗೌಡರ, ಡಿವೈಎಸ್ಪಿ ರಾಮನಗೌಡ ಹಟ್ಟಿ, ಶ್ರೀಶೈಲ ಅಕ್ಕಿ, ಕಾಂಚನಾ ಅಮಠೆ ಇದ್ದರು. 



ಸುದ್ದಿ ಓದಿ