ರಾಷ್ಟ್ರೀಯ

ಮಾಸ್ಕ್ ದಂಡ ಶುಲ್ಕ ಕಡಿತ : ನಗರ ಪ್ರದೇಶಗಳಲ್ಲಿ 250 ರೂ,ಗ್ರಾಮೀಣ ಭಾಗದಲ್ಲಿ 100 ರೂ ದಂಡ ವಿಧಿಸಲು ಸಿಎಂ ಆದೇಶ

ಮಾಸ್ಕ್ ದಂಡ ಶುಲ್ಕ ಕಡಿತ : ನಗರ ಪ್ರದೇಶಗಳಲ್ಲಿ 250  ರೂ,ಗ್ರಾಮೀಣ ಭಾಗದಲ್ಲಿ 100 ರೂ ದಂಡ ವಿಧಿಸಲು ಸಿಎಂ ಆದೇಶ

ಬೆಂಗಳೂರು,ಅಕ್ಟೋಬರ್ 07: ಕೊರೋನಾ ಸೋಂಕು ನಿಯಂತ್ರಿಸುವಲ್ಲಿ ,ಮಾರ್ಗಸೂಚಿ ಪಾಲಿಸದವರ ವಿರುದ್ದ ಸರ್ಕಾರ ಘೋಷಿಸಿದ್ದ ದಂಡ ಶುಲ್ಕವನ್ನು ವಸೂಲಾತಿ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಮಾಸ್ಕ್ ಧರಿಸದವರ ಮೇಲೆ ಹಾಕಲಾಗುತ್ತಿದ್ದ ದಂಡ ಶುಲ್ಕವನ್ನು ಇಳಿಕೆ ಮಾಡಿ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶಿಸಿದ್ದಾರೆ.

ಇಂದಿನಿಂದ ಮಾಸ್ಕ್ ಧರಿಸದವರ ವಿರುದ್ಧ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ 1000 ರೂ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 500ರೂ ದಂಡ ವಿಧಿಸಲಾಗುತ್ತಿದೆ.ಬೆಂಗಳೂರು ನಗರದಲ್ಲಿ ಬಿಬಿಎಂಪಿ ಮಾರ್ಷಲ್ ಗಳು ಹಾಗೂ ಪೊಲೀಸರು ಅಕ್ಷರಶಃ ದರೋಡೆಗೆ ಇಳಿದಿದ್ದರು.ರಸ್ತೆಯಲ್ಲಿ ಓಡಾಡುವವರು,ಬೈಕ್ ನಲ್ಲಿ ಪ್ರಯಾಣಿಸುವವರು ,ಕೂಲಿ ಕಾರ್ಮಿಕರು,ಅಲೆ ಮಾರಿಗಳನ್ನು ಹಿಡಿದು ಬಲವಂತದಿಂದ ದಂಡ ವಸೂಲಾತಿ ಮಾಡುತ್ತಿದ್ದರು.

ಸರ್ಕಾರ ಕೊರೋನಾ ಹೆಸರಿನಲ್ಲಿ ಲೂಟಿಗಿಳಿದಿದೆ.ದಂಡ ಪಾವತಿಸದವರನ್ನು ಬಂಧಿಸುವ ಕ್ರಮವನ್ನು ಕೈಗೊಂ ಡಿದ್ದರು.ಈ ಬಗ್ಗೆ ಸಾರ್ವಜನಿಕರ ಸರ್ಕಾರದ ವಿರುದ್ಧ ಹಿಡಿಶಾಪ ಹಾಕಿದ್ದರು.ಕೊರೋನಾ ಹೆಸರಿನಲ್ಲಿ ಸರ್ಕಾರ ಸಂಕಷ್ಟದಲ್ಲಿರುವ ಜನರನ್ನು ಸುಲಿಕೆ ಮಾಡುತ್ತಿದೆ ಎಂದು ಆರೋಪಿಸಿದ್ದರು.

ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಿಗಳಿಗೆ ದಂಡ ಶುಲ್ಕವನ್ನು ಕಡಿತಗೊಳಿಸಿ ನಿರ್ದೇಶ ನ ನೀಡಿದ್ದಾರೆ.ತಕ್ಷಣದಿಂದ ಜಾರಿಗೆ ಬರುವಂತೆ ನಗರದ ಪ್ರದೇಶದಲ್ಲಿ ಮಾಸ್ಕ್ ಧರಿಸದಿದ್ದವರಿಗೆ 250 ರೂ ದಂಡ, ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 100ರೂ ದಂಡ ವಿಧಿಸಲು ತೀರ್ಮಾನಿಸಿ ತಕ್ಷಣದಿಂದಲೇ ಈ ಕ್ರಮ ಜಾರಿಗೆ ಬರುವಂತೆ ಆದೇಶಿಸಿದ್ದಾರೆ. 

ಜೊತೆಗೆ ಕರೋನಾ ನಿಯಂತ್ರಣದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಯಲ್ಲಿ ನಿಯಾವಳಿ ಪ್ರಕಾರ ಜನರು ಮಾಸ್ಕ್ ,ಸ್ಯಾನಿಟೈಸರ್,ದೈಹಿಕಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ.ಜನರ ಜೀವನ ಮತ್ತು ಜೀವ ಎರಡೂ ಮುಖ್ಯವಾಗಿದೆ.ಹೀಗಾಗಿ ಸರ್ಕಾರದೊಂದಿಗೆ ಸಹಕರಿಸಿ ಎಂದು ಮನವಿ ಮಾಡಿದ್ದಾರೆ.

ಕೊರೋನಾ ನಿಯಂತ್ರಣ ಮಾಡಲು ಸರ್ಕಾರಕ್ಕೆ ದಂಡ ಶುಲ್ಕ ವಿಧಿಸುವುದು ಏಕೈಕ ಕ್ರಮವಲ್ಲ. ಸರ್ಕಾರದ ಆದೇಶಗಳು ಬಹುತೇಕ ಜನರಿಗೆ ಮಾಹಿತಿ ಇರುವುದಿಲ್ಲ.ದುಡಿಯಲು ಬಂದವರು, ಶ್ರಮಿಕರು,ಕೂಲಿ ಕಾರ್ಮಿಕ ರು,ದಿನಗೂಲಿ ನೌಕರರು,ಹೊರ ರಾಜ್ಯ ಮತ್ತು ಹೊರ ದೇಶಗಳಿಂದ ಬಂದವರರಿಗೆ ಏಕಾಏಕಿ ದಂಡ ಶುಲ್ಕದ ಬರೆ ಹಾಕುವ ಪದ್ದತಿಯೇ ಅನಾರೀಗವಾದ ಕ್ರಮವಾಗಿದೆ. ಸರ್ಕಾರ ಜನರಲ್ಲಿ ಮತ್ತಷ್ಟು ಜಾಗೃತಿ ಮೂಡಿಸಬೇಕು. ಒಂದು ಅಥವಾ ಎರಡು ಭಾರಿ ಮಾಸ್ಕ್ ಧರಿಸದ ಸಿಕ್ಕಿ ಬಿದ್ದವರಿಗೆ ಎಚ್ಚರಿಕೆ ನೀಡಬೇಕು.ಪದೇ ಪದೇ ತಪ್ಪು ಮಾಡಿದರೆ ದಂಡ ಶುಲ್ಕವನ್ನು ದುಪ್ಪಟ್ಟು ವಸೂಲು ಮಾಡಲು ಕ್ರಮ ಕೈಗೊಳ್ಳಬಹುದು ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಸುದ್ದಿ ಓದಿ