ಇಂಡಿ

ಗ್ರಾಮಗಳ ಅವೈಜ್ಞಾನಿಕ ಪುನರ್ ವಿಂಗಡನೆ ಸರಿಪಡಿಸದಿದ್ದರೆ ಧರಣಿ

ಗ್ರಾಮಗಳ ಅವೈಜ್ಞಾನಿಕ ಪುನರ್ ವಿಂಗಡನೆ ಸರಿಪಡಿಸದಿದ್ದರೆ ಧರಣಿ

ಇಂಡಿ 24: ಜಿಲ್ಲಾ ಪಂಚಾಯತಿ ಮತ ಕ್ಷೇತ್ರಗಳಲ್ಲಿನ ಗ್ರಾಮಗಳ ಪುನರ್ ವಿಂಗಡನೆ ಮಾಡಿದ್ದು ಅವೈಜ್ಞಾನಿಕವಾಗಿದೆ. ಅದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ಜಿ.ಪಂ ಸದಸ್ಯ ಶಿವಯೋಗೆಪ್ಪ ನೇದಲಗಿ, ಜೆಡಿಎಸ್ ತಾಲೂಕಾ ಅಧ್ಯಕ್ಷ ಬಿ.ಡಿ. ಪಾಟೀಲ ನೇತೃತ್ವದಲ್ಲಿ ನೂರಾರು ಜನರು ಗುರುವಾರ ಉಪವಿಭಾಗಾಧಿಕಾರಿ ರಾಹುಲ್ ಸಿಂಧೆಯವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಮಾಜಿ ಜಿ ಪಂ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ಮಾತನಾಡಿ ತಾಲೂಕಿನ 8 ಜಿಲ್ಲಾ ಪಂಚಾಯತ ಗ್ರಾಮಗಳ ಪುನರ್ ವಿಂಗಡಣೆ ಮಾಡಿರುವುದು ಅವೈಜ್ಞಾನಿಕವಾಗಿಕೆ. ಇಂತಹ ಅವೈಜ್ಞಾನಿಕ ನೀತಿಯಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಹಲವಾರು ಜಿ.ಪಂ ತಾ.ಪಂ ಕ್ಷೇತ್ರಗಳನ್ನ ಜನರಿಗೆ ಅನಾನುಕೂಲವಾಗುವಂತೆ ಮಾಡಿದ್ದಾರೆ ಕೂಡಲೆ ಅದನ್ನು ಪರಿಶೀಲಿಸಿ ಅನುಕೂಲ ಮಾಡಿಕೊಡಬೇಕು. ಒಂದು ವೇಳೆ ಕ್ಷೇತ್ರ ವಿಂಗಡನೆಯಲ್ಲಿ ಅನ್ಯಾಯವಾದರೆ ಇದನ್ನೆ ಮುಂದುವರೆಸಿದರೆ  ಕಚೇರಿಯ ಮುಂದೆ ಧರಣಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.  

ಜೆ.ಡಿ.ಎಸ್ ತಾಲೂಕಾ ಅಧ್ಯಕ್ಷ ಬಿ.ಡಿ ಪಾಟೀಲ ಇಂತಹ ಅವೈಜ್ಞಾನಿಕ ನೀತಿಯಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಹಂಜಗಿ ಗ್ರಾಮ ಸಾಲೋಟಗಿ ಮತಕ್ಷೇತ್ರದಲ್ಲಿ ಸೇರಿಸಿರುವದು ಯಾವ ಆಧಾರ ಮೇಲೆ ಕಳೆದ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪಟ್ಟಿಯಲ್ಲಿ ಕೂಡಾ ಜಿಲ್ಲೆಯಲ್ಲಿಯೇ   ಕಂಪ್ಯೂಟರ್ ಚಾರ್ಟ ತಯಾರಿಸಿ ಡಿಸ್‍ಪ್ಲೇಯ್ ಮಾಡಿರುವದು ಅನೇಕ ಜನರಿಗೆ ತೊಂದರೆಯಾಗಿದೆ. ಇಂತಹ ಅಚಾತುರ್ಯ ಜಿ.ಪಂ ವಿಂಗಡಣೆಯಲ್ಲಿ ಆದರೆ ಹೋರಾಟ ಮಾಡಲಾಗುವುದು ಎಂದರು.

ಜೆಡಿಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕಾಮಗೊಂಡ, ಎಸ್.ಎಸ್. ನಂದಾಗೋಳ, ಕಲ್ಲಯ್ಯಾ ಹಿರೇಮಠ,  ಶ್ರೀಶೈಲಗೌಡ ಪಾಟೀಲ, ಸಿದ್ದು ಡಂಗಾ, ಆದಂ ಅಗರಖೇಡ, ಸುದೀರ ಕರಕಟ್ಟಿ, ರಮೇಶ ಧರೇನವರ, ಸಿದ್ದು ಮರಬದ್, ವಿಶ್ವನಾಥ ಧರಗೊಂಡ, ರಮೇಶ ಮಾಧುಗೋಳ, ಮಲ್ಲಿಕಾರ್ಜುನ ಕರೂರ ಸೇರಿದಂತೆ ಅನೇಕರಿದ್ದರು. 


ಸುದ್ದಿ ಓದಿ