ಶಿಗ್ಗಾವ್

ನಾಗರಭಾವಿ ಮಠದ ಮರು ನಿರ್ಮಾಣ ಪೂಜೆ

ನಾಗರಭಾವಿ ಮಠದ ಮರು ನಿರ್ಮಾಣ ಪೂಜೆ

ಶಿಗ್ಗಾವಿ 16: ಪಟ್ಟಣದ ಪುರಾತನ ಮಠಗಳಲ್ಲಿ ಒಂದಾಗಿ, ಚೆನ್ನವೀರ ಸ್ವಾಮಿಯ  ಕರ್ತೃ ಗದ್ದಿಗೆ ಹೊರತುಪಡೆಸಿ ಸಂಪೂರ್ಣ ಅಳಿವಿನಂಚಿನಲ್ಲಿ ಇದ್ದ ನಾಗರಭಾವಿ ಮಠದ ಮರು ನಿರ್ಮಾಣ ಪೂಜೆಯನ್ನ ವಿರಕ್ತಮಠ ಶ್ರೀಗಳ ಸಮ್ಮುಖದಲ್ಲಿ ನೆರವೇರಿಸಲಾಯಿತು. 

ಕಮಿಟಿಯ ಸದಸ್ಯ ಪ್ರಶಾಂತ ಬಡ್ಡಿ ಮಾತನಾಡಿ, ಪಟ್ಟಣದ ಇತಿಹಾಸದಲ್ಲಿ ಅದೆಷ್ಟು ಮಠಗಳು ಹುದಗಿ  ಹೋಗಿವೆ. ಆದರೂ ಶಿಗ್ಗಾವ ನಗರದ ಹಿರೇಮಠ ಹಾಗೂ ವಿರಕ್ತಮಠ, ಭಾವನ ಮಠ ತನ್ನ ಅಸ್ತಿತ್ವವನ್ನ ಉಳಿಸಿಕೊಂಡು ಗುರುವಿನ ಸಮ್ಮುಖದಲ್ಲಿ ಭಕ್ತರಿಗೆ ಮಾರ್ಗದರ್ಶನ ತೋರುತ್ತಾ ಬಂದಿವೆ. ಈ ಮಠವು ಶೀಘ್ರವಾಗಿ ನಿರ್ಮಾಣ ಗೊಂಡು ಜನರ ಕಲ್ಯಾಣ ಮಾಡುವಂತಾಗಲಿ ಎಂದರು. 

ಈ ಸಂದರ್ಭದಲ್ಲಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು, ಮುತ್ತು ಯಲಿಗಾರ, ರಮೇಶ ವನಹಳ್ಳಿ, ನಂದೀಶ ಬಾಣದ ಸೇರಿದಂತೆ ಕಮಿಟಿಯ ಸದಸ್ಯರು ಮತ್ತು ಇತರರು ಇದ್ದರು. 


ಸುದ್ದಿ ಓದಿ