ಕಾರ್ಮಿಕರು, ನೌಕರರು, ಗ್ರಾಹಕರನ್ನು ಹೊಂದಾಣಿಕೆ ಮಾಡಿಕೊಂಡು ಕಾರ್ಯನಿರ್ವಹಿಸುವುದೇ ಸವಾಲಿನ ಕೆಲಸ: ರೋಷನ
ಶಿಗ್ಗಾವಿ 30: ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹ್ಮದ ರೋಷನ್ ಹಾಗೂ ರಾಜ್ಯ ಕವಿಪ್ರನಿನಿ ನೌಕರರ ಸಂಘದ ರಾಜ್ಯಾಧ್ಯಕ್ಷ ಅವರ ಉಪಸ್ಥಿತಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಕಾರ್ಯಾಧ್ಯಕ್ಷ ಹಾಗೂ ಹಾವೇರಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿಜಯಕುಮಾರ ಮದಕಣ್ಣನವರ ವಯೋ ಸಹಜ ನಿವೃತ್ತಿ ಬೀಳ್ಕೊಡುಗೆ ಸಮಾರಂಭ ಹಾವೇರಿ ರಜನಿ ಸಭಾಂಗಣದಲ್ಲಿ ಜರುಗಿತು.
ವ್ಯವಸ್ಥಾಪಕ ನಿರ್ದೇಶಕ ಮಹ್ಮದ ರೋಷನ್ ಮಾತನಾಡಿ ವ್ಯವಸ್ಥೆಯ ಮದ್ಯ ಕಾರ್ಮಿಕರು ನೌಕರರು ಹಾಗೂ ಗ್ರಾಹಕರನ್ನು ಹೊಂದಾಣಿಕೆ ಮಾಡಿಕೊಂಡು ಕಾರ್ಯನಿರ್ವಹಿಸುವುದೇ ಸವಾಲು ಆದರೆ ಹೆಸ್ಕಾಂ ಎಂಡಿ ಆಗಿ ಕಾರ್ಯನಿರ್ವಹಿಸುತ್ತಿರುವುದು ಸಂತಸ ತರುತ್ತಿದೆ ವಿಜಯ್ ಕುಮಾರ್ ಒಬ್ಬ ಸ್ನೇಹಜೀವಿ ಹಾಗೂ ಕಾರ್ಮಿಕ ಹಿತೈಷಿ ಎಂದು ಹೇಳಿದರು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು ಕಾರ್ಮಿಕ ಸಂಘಟನೆ ಹಾಗೂ ನೌಕರರ ಕಾಳಜಿ ಬಗ್ಗೆ ಆಗಮಿಸಿದ ಎಲ್ಲಾ ಅತಿಥಿ ಮಹೋದಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿಧಾನ ಸಭೆ ಉಪ ಸಭಾದ್ಯಕ್ಷ ರುದ್ರ್ಪ ಲಮಾಣಿ, ರಾಜ್ಯ ವಿದ್ಯುತ್ ಗುತ್ತಿಗೆದಾರರ ರಾಜ್ಯ ಸಂಘದ ಮಾಜಿ ಕಾರ್ಯಕಾರಿ ಸದಸ್ಯ ಮಂಜುನಾಥ್ ಮಣ್ಣಣ್ಣವರ್ ಹಾಗೂ ವಿದ್ಯುತ್ ಗುತ್ತಿಗೆದಾರರು ವಿಜಯ್ ಕುಮಾರ್ ಮತ್ತು ಮತ್ತೊಬ್ಬ ಕಿರಿಯ ಇಂಜಿನಿಯರ್ ಮಾಳಿಮಠ ಅವರನ್ನು ಸನ್ಮಾನಿಸಿದರು. ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿದ ಮಂಜುನಾಥ ಗುತ್ತಿಗೆದಾರ ಕೈಗೊಂಡಿರುವ ಅಪಘಾತ ವಲಯದ ಕಾಮಗಾರಿಗಳು ಹಾಗೂ ಮಳೆಗಾಲದ ಕಾಮಗಾರಿಗಳ ಬಿಲ್ಲು ಪಾವತಿಗೆ ಅನುದಾನ ಬಿಡುಗಡೆಗೆ ಮನವಿ ಮಾಡಿಕೊಂಡರು ತಕ್ಷಣವೇ ಸ್ಪಂದಿಸಿದ ವ್ಯವಸ್ಥಾಪಕ ನಿರ್ದೇಶಕ ರೋಶನ್ ಸೋಮವಾರ ಮಂಗಳವಾರದ ಒಳಗೆ ಅನುದಾನ ಬಿಡುಗಡೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು ಸಂದರ್ಭದಲ್ಲಿ ನೌಕರರು ಕಾರ್ಮಿಕರು ಗುತ್ತಿಗೆದಾರರು ಪರಿವಾರದವರು ಹಿತೈಷಿಗಳು ನೂರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.