ಲೋಕ್ ಅದಾಲತ್ನಲ್ಲಿ ಸಣ್ಣಪುಟ್ಟ ಮನಸ್ತಾಪಗಳಿಗೆ ಬೇರ್ಪಟ್ಟಿದ್ದ ದಂಪತಿಗಳ ಹೊಂದಾಣಿಕೆ
ಲೋಕದರ್ಶನ ವರದಿ
ಶಿಗ್ಗಾವಿ 10: ನ್ಯಾಯಾಲಯದ ಮೆಟ್ಟಿಲು ಎರಿದ್ದ ದಂಪತಿಗಳು ಪರಸ್ಪರ ವೈಮನಸ್ಸು, ಭಿನ್ನಾಭಿಪ್ರಾಯಗಳನ್ನು ಆಲಿಸಿದ ಶಿಗ್ಗಾವಿ ದಿವಾಣಿ ನ್ಯಾಯಾಲಯದ ನ್ಯಾಯಾಧೀಶರು, ದಂಪತಿಗಳಿಗೆ ತಿಳಿ ಹೇಳುವ ಮೂಲಕ ಅವರನ್ನ ಮತ್ತೆ ಒಂದು ಗೂಡಿಸಿದ್ದಾರೆ.
ಶಿಗ್ಗಾವಿಯ ಹಿರಿಯ ಶ್ರೇಣಿಯ ನ್ಯಾಯಾಲಯದಲ್ಲಿ ಶನಿವಾರದಂದು ನಡೆದ ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ಸಣ್ಣಪುಟ್ಟ ಮನಸ್ತಾಪಗಳಿಗೆ ಬೇರ್ಪಟ್ಟಿದ್ದ ದಂಪತಿಗಳನ್ನು ಮತ್ತೆ ಒಂದು ಮಾಡಲಾಗಿದೆ.
ಗಂಡ, ಹೆಂಡತಿಯನ್ನ ಕರೆಸಿ ಅವರ ಜೊತೆ ಮಾತುಕತೆ ನಡೆಸಿದ ನ್ಯಾಯಾಧೀಶರು ಅವರಿಗೆ ತಿಳಿ ಹೇಳುವ ಕಾರ್ಯವನ್ನ ಮಾಡಿದರು, ಅವರ ಎದುರಲ್ಲೇ ಇಬ್ಬರಿಗೂ ತಿಳುವಳಿಕೆ ಹೇಳಲಾಯಿತು. ಅಸಮಾಧಾನ ಸೇರಿದಂತೆ ಇಬ್ಬರಲ್ಲೂ ಮನಸ್ತಾಪಗಳು ಬಂದಿದ್ದರಿಂದ ಅವರವರ ಎದುರಲ್ಲೇ ಮತ್ತೆ ಅವರನ್ನ ಒಂದು ಮಾಡುವ ಕಾರ್ಯ ನಡೆಯಿತು. ಒಂದಾದ ದಂಪತಿಗಳು ಖುಷಿ ಖುಷಿಯಿಂದಲೇ ನಾವು ಮತ್ತೆ ಯಾವತ್ತೂ ಜಗಳ ಆಡದಂತೆ ಜೀವನ ಸಾಗಿಸುವುದಾಗಿ ಹೇಳಿದ್ದಾರೆ.
ಒಟ್ಟಾರೆ ಸಣ್ಣಪುಟ್ಟ ವಿಚಾರಗಳಿಗೆ ಮುನಿಸಿಗೊಂಡು ನ್ಯಾಯಾಲಯದ ಮೆಟ್ಟಿಲೆರಲು ತೀಮರ್ಾನಿಸಿದವರನ್ನು ಮತ್ತೆ ಒಂದು ಮಾಡುವ ಮೂಲಕ ಶಿಗ್ಗಾವಿ ಹಿರಿಯ ಶ್ರೇಣ ಿನ್ಯಾಯಾಧೀಶೆ ಪೈರೋಜಾ ಹ ಉಕ್ಕಲಿ ಅವರು ಮತ್ತೆ ದಂಪತಿಗಳ ಬಾಳಿಗೆ ಹೊಸ ಬೆಳಕನ್ನ ನೀಡಿದ್ದಾರೆ.
ಕಕ್ಷಿದಾರ ವಕೀಲರ ಸಹಕಾರದಿಂದಲೇ ಈ ರಾಜಿ ಸಂದಾನಕ್ಕೆ ಸಾದ್ಯವಾಯಿತು ಎಂದು ಪಕ್ಷಗಾರರ ವಕೀಲ ಸಂತೋಷ ಪಾಟೀಲ ಹಾಗೂ ಬಿ ಎಸ್ ಜೇಕನಕಟ್ಟಿ. ರಾಜಿ ಸಂಧಾನ ಕ್ರಮಕ್ಕೆ ಅಭಿನಂದಿಸಿದರು.
ಕಿರಿಯ ಶ್ರೇಣಿ ದಿವಾಣಿ ನ್ಯಾಯಾದಿಶ ನಸರತ್ ಮುಕ್ತಾರ ಅಹ್ಮದಖಾನ್, ವಕೀಲ ಪಿ ಆರ್ ಕಲ್ಯಾಣಿ, ಬಿ ಜಿ ರಾಗಿ, ವ್ಹಿ ಎಂ ರಾಮಗೇರಿ, ವಿ ಎಮ್ ಗಾಣಗೇರ, ಕೆ ಎಸ್ ಗುಂಜಳ, ಎನ್ ಎಮ್ ಪವಾರ, ಎಸ್ ಎಮ್ ಬನ್ನಿಮಟ್ಟಿ, ಎಮ್ ಜಿ ವಿಜಾಪೂರ, ಎನ್ ಎಸ್ ನಿಂಗಪ್ಪನವರ ಹಾಗೂ ಇತರ ನ್ಯಾಯಾವಾದಿಗಳು ಉಪಸ್ಥಿತರಿದ್ದರು