ದೇಶಿಯ ಸಂಸ್ಕೃತಿ ಬಿಂಬಿಸುವ ಕ್ರೀಡೆಗಳಿಗೆ ಮಾನ್ಯತೆ ನೀಡಿ: ಮರುಳಶಂಕರ ಶ್ರೀಗಳು
ರಾಣೇಬೆನ್ನೂರು 31: ಸದೃಢವಾದ ದೇಹದಲ್ಲಿ ಸದೃಢ ವಾದ ಮನಸ್ಸು ಇರುತ್ತದೆ ಎಂಬ ಮಾತಿನಂತೆ ಪ್ರತಿಯೊಬ್ಬ ಮನುಷ್ಯನು ಯಾವುದಾದ ರೊಂದು ಕ್ರೀಡೆಯನ್ನು ನಿತ್ಯದ ಬದುಕಿನಲ್ಲಿ ಹವ್ಯಾಸವಾಗಿ ಅಳವಡಿಸಿಕೊಂಡಾಗ ಆ ವ್ಯಕ್ತಿಯ ಮನಸ್ಸು ಪ್ರಫುಲ್ಲ ಗೊಂಡು ಗುರಿಯೆಡೆಗೆ ಸಾಗಲು ಸಹಕಾರಿಯಾಗುತ್ತದೆಂದು ಗಂಗಾಪುರ ಸಿದ್ದಾರೂಢ ಆಶ್ರ ಮದ ಮರುಳಶಂಕರ ಸ್ವಾಮಿ ಗಳು ಹೇಳಿದರು.
ಅವರು ಮಂಗಳ ವಾರದಂದು ತಾ.ನ ಗಂಗಾಪುರ ಗ್ರಾಮದ ದುರ್ಗಾದೇವಿ ಕ್ರಿಕೇಟ್ ಕ್ಲಬ್ ಇವರ ಆಶ್ರಯ ದಲ್ಲಿ ಗ್ರಾಮೀಣ ಮಟ್ಟದ ಹಾರ್ಡ ಟೆನ್ನಿಸ್ ಕ್ರಿಕೇಟ್ ಟೂರ್ನಾಮೆಂಟ್ಗೆ ಚಾಲನೆ ನೀಡಿ ಮಾತನಾಡಿ ದರು. ಇತ್ತಿಚಿನ ದಿನಗಳಲ್ಲಿ ಯುವಕರು ಅಂತರ್ಜಾಲ ಕ್ರೀಡೆಗಳಿಗೆ ಮಾರುಹೋಗಿ ರುವ ಪರಿಣಾಮ ಗ್ರಾಮೀಣ ಕ್ರೀಡೆಗಳು ನಶಿಸಿ ಹೊಗುತ್ತಿರು ವುದು ದುರದೃಷ್ಠಕರ ಸಂಗತಿ ಯಾಗಿದೆ. ಆದ್ದರಿಂದ ಗ್ರಾಮೀ ಣ ಕ್ರೀಡೆಗಳಾದ ಕಬಡ್ಡಿ, ಖೋ -ಖೋ, ವಾಲಿಬಾಲ್ ನಂತಹ ದೇಶಿಯ ಸಂಸ್ಕೃತಿಯನ್ನು ಪ್ರತಿ ಬಿಂಬಿಸುವ ಕ್ರೀಡೆಗಳಿಗೆ ಮಾನ್ಯತೆ ನೀಡಿರಿ ಎಂದು ಶ್ರೀಗಳು ಕರೆನೀಡಿದರು.ಯುವ ಪತ್ರಕರ್ತ ಭಿಮೇಶ್ ಎಸ್.ಕೆ ಮಾತನಾಡಿ ಕ್ರೀಡಾ ಪಟುಗಳು ಸೋಲು ಗೆಲುವ ಎನ್ನದೇ ಎರ ಡನ್ನೂ ಸಮಾನವಾಗಿ ಸ್ವೀಕರಿಸಿ ಕ್ರೀಡೆಯನ್ನು ಮನರಂಜನೆಗಾಗಿ ಮಾತ್ರ ಆಡಬೇಕು. ಗೆದ್ದಾಗ ಹಿಗ್ಗದೇ ಸೋತಾಗ ಕುಗ್ಗದೇ ಎಲ್ಲರೂ ಸಮಚಿತ್ತದಿಂದ ಕಾಣ ಬೇಕು. ಯಾವುದೇ ಕ್ಷೇತ್ರದಲ್ಲಾ ಗಲಿ ಒಂದೇ ಸಾರಿ ಗೆದ್ದ ಉದಾ ಹರಣೆ ಇಲ್ಲಾ ಅನೇಕ ಸಾಧಕರ ಸಾಕಷ್ಟು ನೋವು-ನಲಿವುಗ ಳನ್ನು ಕಂಡಿದ್ದಾರೆ. ಸೋತಾಗ ಹತಾಶರಾಗದೇ ಆತ್ಮವಿಶ್ವಾಸ ದಿಂದ ಮುನ್ನಡೆಯಬೇಕು ಎಂದರು. ಜಿ.ಪಂ ಮಾಜಿ ಸದಸ್ಯೆ ಮಂಗಳಗೌರಿ ಪೂಜಾರ, ನಾಗಪ್ಪ ಕಜ್ಜರಿ, ಸಂತೋಷ, ಜಗದೀಶ, ಬಸಪ್ಪ ಮಾಚೇನ ಹಳ್ಳಿ, ಮಂಜುನಾಥ ಸಿದ್ದಪ್ಪ ಳವರ, ಕೆ.ಸಿ.ಗುಡಗೂರ, ಕೆ. ಎನ್.ಡಿ, ಹನುಮಂತಪ್ಪ ದುರ್ಗದ, ವಿದ್ಯಾ ದುರ್ಗದ ಗಂಗಾಪುರದ ಗ್ರಾಮಸ್ಥರು ಇದ್ದರು.