ಸಮಾಜ ನಮಗೇನು ಕೊಟ್ಟಿದೆ ಎನ್ನುವದಕ್ಕಿಂತ ನಾವು ಸಮಾಜಕ್ಕೆ ಏನು ಮಾಡಿದ್ದೇವೆ ಎನ್ನುವದನ್ನು ಅರಿಯಿರಿ: ಡಾ. ಅಲ್ಲಮಪ್ರಭು ಶ್ರೀಗಳು
ಲೋಕದರ್ಶನ ವರದಿ
ನೇಸರಗಿ 20: ಇಂದಿನ ಪ್ರಸಕ್ತ ದಿನಗಳಲ್ಲಿ ಜನ ಸಮಾಜ ನಮಗೆ ಏನು ಕೊಟ್ಟಿದೆ ಎಂದು ಕೇಳುತಿದ್ದಾರೆ, ಅದನ್ನು ಸಮಾಜದ ಜನರಾದ ನಾವೆಲ್ಲರೂ ಸಮಾಜಕ್ಕೆ ನಾವು ಏನು ಕೊಟ್ಟಿದ್ದೇವೆ ಎನ್ನುವ ಕುರಿತು ಪರಾಮರ್ಶೆ ಮಾಡಿಕೊಳ್ಳಬೇಕು ಎಂದು ಬೆಳಗಾವಿ - ನಾಗನೂರ ರುದ್ರಾಕ್ಷಿಮಠದ ಪರಮಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಹೇಳಿದರು. ಅವರು ಗುರುವಾರದಂದು ಬೆಳ್ಳಿಗೆ 8-30 ಕ್ಕೆ ನೇಸರಗಿ ಕ್ರಾಸ್ ಹತ್ತಿರ ಇರುವ ಬಸವೇಶ್ವರ ಸರ್ಕಲ್ ಹತ್ತಿರ ಬಸವೇಶ್ವರ ಭಾವಚಿತ್ರಕ್ಕೆ ಮಾಲಾರೆ್ಣ ಮಾಡಿ, ಅಲ್ಲಿಂದ ವಿದ್ಯಾ ಮಂದಿರ ಪ್ರೌಢ ಶಾಲೆಯಿಂದ ಶ್ರಾವಣ ಮಾಸದ ಪ್ರಯುಕ್ತ ವೀರಭದ್ರೇಶ್ವರ ದೇವಸ್ಥಾನದವರೆಗೆ ಬಸವ ನಡಿಗೆ ಪಾದಯಾತ್ರೆ ನೆರವೇರಿಸಿ ವೀರಭದ್ರೇಶ್ವರ ದರ್ಶನ ಪಡೆದು ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಆಶೀರ್ವಚನ ನಡಿ ಪವಿತ್ರ ಶ್ರಾವಣ ಮಾಸದಲ್ಲಿ ತಮ್ಮ ಗ್ರಾಮಕ್ಕೆ ಆಗಮಿಸಿ ಅಣ್ಣ ಬಸವಣ್ಣನವರ ವಚನ ಸಾಹಿತ್ಯ, ಸಮಾನತೆ ಮೌಲ್ಯವನ್ನು ಜಗತ್ತಿಗೆ ಸಾರಿ, ಕಳೆದ 900 ವರ್ಷಗಳ ಹಿಂದೆ ದಯವಿಲ್ಲದ ಧರ್ಮ ಯಾವುದಯ್ಯ, ದಯವೇ ಧರ್ಮದ ಮೂಲವಯ್ಯ!, ಕಳಬೇಡ ಕೊಲಬೇಡ, ಹುಸಿಯ ನುಡಿಯಬೇಡ ಎಂಬ ಆದರ್ಶ ತತ್ವವನ್ನು ಜಗತ್ತಿಗೆ ಸಾರಿದವರು.
ಬಸವಣ್ಣನವರು, ಜಾತಿಗಳಲ್ಲಿ ಕೆಲವರು ಗಂಡು ಮತ್ತು ಹೆಣ್ಣು ಎಂದರು. ಆದರೆ ಅಣ್ಣ ಬಸವಣ್ಣನವರು ಮಾತ್ರ ಭವಿ ಮತ್ತು ಭಕ್ತಿ ಎಂಬ ಹೆಸರಿಟ್ಟು, ದೇವರನ್ನು ನಂಬುವವರು ಹಾಗೂ ದೇವರನ್ನು ನಂಬದವರು ಎಂದು ವಿಮೋಚನೇ ಮಾಡಿ ಜಾಗತಿಕ ಮಟ್ಟದಲ್ಲಿ ಸಂಸ್ಕೃತಿ, ಶ್ರೇಷ್ಠ ಪರಂಪರೆ ಸಾಹಿತ್ಯ ಸಾರಿ ಸಂಸ್ಕೃತಿ ಹಾಗೂ ಸಂಸ್ಕಾರ ಹಾಕಿಕೊಟ್ಟು ಜಗತ್ತಿನ ವಿಶ್ವಗುರು ಬಸವಣ್ಣನವರು, ಅವರಂತೆ ಅವರ ಅಳಿಯ ಚನ್ನಬಸವೇಶ್ವರರು ಉಳವಿಗೆ ಹೋಗಿ ಧರ್ಮ ಪ್ರಚಾರ ಮಾಡಿ ಹೆಸರುವಾಸಿಯಾದರು. 1932 ರಲ್ಲಿ ಕೆ ಎಲ್ ಇ ಸಂಸ್ಥೆ ಜನರಿಗೆ ಉತ್ತಮ ಶಿಕ್ಷಣ ನಡುತಿತ್ತು ಆದರೆ ಓದುವ ವಿದ್ಯಾರ್ಥಿಗಳಿಗೆ ವಸತಿ, ದಾಸೋಹ ವ್ಯವಸ್ಥೆ ಇರಲಿಲ್ಲ, ಇದನ್ನು ಮನಗಂಡ ರುದ್ರಾಕ್ಷಿಮಠದ ಲಿಂ. ಡಾ. ಶಿವಬಸವ ಮಹಾಸ್ವಾಮಿಗಳು ಬೆಳಗಾವಿಯ ರುದ್ರಾಕ್ಷಿಮಠದಲ್ಲಿ ವಿದ್ಯಾರ್ಥಿಗಳಿಗೆ ವಸತಿ ಮತ್ತು ದಾಸೋಹ ವ್ಯವಸ್ಥೆ ಕಲ್ಪಿಸಿ ಮಹಾನ್ ಪುರುಷರಾದರು.