ತಮ್ಮೆಲ್ಲರ ಸೇವೆಯನ್ನು ಮಾಡಲು ಸದಾಸಿದ್ಧ: ಸಂಗಮೇಶ ಕಂಬಾಳಿಮಠ
ಶಿಗ್ಗಾವಿ 06: ದೇವರು ಹಾಗೂ ತಮ್ಮೆಲ್ಲರ ಸಹಕಾರ ಕೃಪೆ ಇರುವವರೆಗೂ ತಮ್ಮೆಲ್ಲರ ಸೇವೆಯನ್ನು ಮಾಡಲು ಸದಾಸಿದ್ದನಿದ್ದೆನೆ ಎಂದು ಕೆಸಿಸಿ ಬ್ಯಾಂಕ್ ನೂತನ ನಿರ್ದೇಶಕ ಹೇಳಿದರು.
ತಾಲೂಕಿನ ಕುನ್ನೂರ ಗ್ರಾಮದ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಜರುಗಿದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದವರು ತಮ್ಮೆಲ್ಲರ ಸಲಹೆ ಮಾರ್ಗದರ್ಶನದಲ್ಲಿ ಸೇವೆಯನ್ನು ಮಾಡುವದಾಗಿ ಹೇಳಿದವರು, ಸಹಕಾರಿ ಸಂಘಗಳು ಹಲವಾರು ರೈತಪರವಾದ ಯೋಜನೆಗಳು ಹಾಗೂ ತಮ್ಮ ಸಂಘದ ಪಧಾದಿಕಾರಿಗಳು ಸಹಕಾರದಿಂದ ಸಿಬ್ಬಂದಿ ವರ್ಗದಕಾರ್ಯನಿರ್ವಹಣೆಯಿಂದ ಸಂಘವು ಅಭಿವೃದ್ದಿಯಲ್ಲಿ ಮುಂದೆಬರುವದು ನನ್ನ ಕೈಮೀರಿ ಅಭಿವೃದ್ಧಿಗೆ ಕೈ ಜೋಡಿಸುವ ಭರವಸೆಯನ್ನು ನೀಡಿದರು.
ಎಪಿಎಂಸಿ ಮಾಜಿ ಅಧ್ಯಕ ್ಷತಿಪ್ಪಣ್ಣಾ ಸಾತಣ್ಣವರ ಮಾತನಾಡಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಸಲಹೆ ಮಾರ್ಗದರ್ಶನದಿಂದ ಸಂಘವನ್ನು ಮುಂಚೋಣಿಯಲ್ಲಿ ಮುಂದೆ ತರುವ ಯೋಜನೆಯನ್ನು ರೂಪಿಸಿಕೊಳ್ಳಬೇಕು ಅಲ್ಲದೆ ಸರಕಾರದ ಯೋಜನೆಗಳನ್ನು ತರಲು ಮುಂದಾಗುತ್ತೆವೆ ಎಂದರು.
ಪ್ರಾಸ್ಥಾವಿಕವಾಗಿ ಪರಶುರಾಮ ಕಾಳಿ, ಗ್ರಾ.ಪಂ.ಸದಸ್ಯ ಡಿ.ಆರ್.ಬೊಮ್ಮನಳ್ಳಿ, ಸೇರಿದಂತೆ ಹಲವರು ಮಾತನಾಡಿದರು. ವಿವಿಧ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವ್ಯವಸಾಯ ಸೇವಾ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮಾಬೂಸಾಬ ಜಿಗಳೂರ ವಹಿಸಿದ್ದರು.
ಮುಖ್ಯ ಅಥಿತಿಗಳಾಗಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಸಿದ್ದನಗೌಡ್ರ ಪಾಟೀಲ, ಸಂಘದ ಉಪಾಧ್ಯಕ್ಷ ಭೀಮಣ್ಣಾ ಬಾರ್ಕಿ, ಸದಸ್ಯರಾದ ಸಿದ್ದಪ್ಪ ಹದ್ಲಿ, ಲಕ್ಷ್ಮಣ್ಣಾಜ್ಜಕೇರ್ಪನವರ, ಶಾಂತಪ್ಪ ಸೋಗಲಿ, ಬಿ.ಎಸ.ಹಿರೇಮಠ, ಮಹದೇವಪ್ಪ ಬೂದ್ಯಾಳ, ಬಸವ್ವ ನಿಂ.ಪೂಜಾರ, ಈರಮ್ಮ ಹಿರೇಮಠ, ಡಾ.ಪಿ.ಎಚ್.ಲಮಾಣಿ, ಡಿ.ಆರ್.ಕಿವಡನವರ, ಸೇರಿದಂತೆ ಹಲವರು ಇದ್ದರು. ಸಂಘದ ಕಾರ್ಯನಿರ್ವಾಹಕ ಬಿ.ಎನ್ ಪಾಟೀಲ ಸ್ವಾಗತಿಸಿದರೆ ಕಾರ್ಯದರ್ಶಿ ಸುರೇಶ ಬೆಂಡಿಗೇರಿ ನಿರುಪಿಸಿದರು, ಜೈಲಾನಿ ಮತ್ತೇಖಾನ ವಂದಿಸಿದರು.