ಮೇಲ್ಸೇತುವೆ ನಿರ್ಮಾಣಕ್ಕೆ ತ್ಯಾಗ ಬಲಿದಾನಕ್ಕೆ ಸಿದ್ಧ
ರಾಣೇಬೆನ್ನೂರು 26: ಮೇಲ್ಸೇತುವೆಗಾಗಿ “28” ರ ರಾಣೇಬೆನ್ನೂರು “ಬಂದ್” ಸಂಬಂಧ ಕರೆದ ಸಭೆಯಲ್ಲಿ ಸಂಘ ಸಂಸ್ಥೆಗಳ ಒಕ್ಕೊರಲಿನ ನಿರ್ಧಾರ ಅಂತರ್ಜಿಲ್ಲಾ, ಅಂತರ್ರಾಜ್ಯಕ್ಕೆ ಸಂಪರ್ಕ ಕಲ್ಪಿಸಿಕೊಡುವ ಬಾಗಲಕೋಟ ಬಿಳಿಗಿರಿರಂಗನಬೆಟ್ಟ ರಾಜ್ಯ ಹೆದ್ದಾರಿ 57- ಕ್ಕೆ ರೈಲ್ವೆ ಮೇಲ್ಸೇತುವೆ ಅವಶ್ಯವಿದೆ ಅವೈಜ್ಞಾನಿಕವಾಗಿ ಈಗ ನಿರ್ಮಿಸಿರುವ ರೇಲ್ವೆ ಕೆಳಸೇತುವೆಯಿಂದ ಉಂಟಾಗುವ ಅವಾಂತರಗಳಿಂದ ವಾಣಿಜ್ಯ ನಗರಿ ರಾಣೇಬೆನ್ನೂರು ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಮೇಲ್ಸೇತುವೆ ನಿರ್ಮಾಣವಾದರೆ ವಾಣಿಜ್ಯ ನಗರಿಯ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಸುಗಮ ಸಂಚಾರ ಅಭಿವೃದ್ಧಿಯ ಒಂದು ಭಾಗವಾಗಿದೆ.
ಹೀಗಾಗಿ ನಾವುಗೆಳೆಲ್ಲ ರೈಲ್ವೆ ಮೇಲ್ಸೇತುವೆ ನಿರ್ಮಾಣದ ಹೋರಾಟಕ್ಕೆ ಕಂಕಣ ಬದ್ಧರಾಗಿ ನಿಲ್ಲುತ್ತೇವೆ. ಪ್ರಾಣಹೋದರೂ ನಾವು ಹಿಂದಕ್ಕೆ ಸರಿಯುವುದಿಲ್ಲವೆಂದು ನಗರದ “ 65” ಕ್ಕೂ ಹೆಚ್ಚು ಸಂಘಟನೆಗಳ ಮುಖಂಡರು ಇಂದು ಪ್ರಮಾಣ ಮಾಡಿದರು.
ಇಂದು ಎಪಿಎಂಸಿ ವರ್ತಕರ ಸಮುದಾಯ ಭವನದಲ್ಲಿ “28” ರ ಬಂದ್ ಸಂಬಂಧ ಕರೆದ ಸಭೆಯಲ್ಲಿ ಅನೇಕ ಭಾಗಿಯಾಗಿ ಮಾತನಾಡಿದ ವಿವಿಧ ಸಂಘಗಳ ಅಧ್ಯಕ್ಷರುಗಳು ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನವಿರೋಧಿ ನೀತಿ ಖಂಡಿಸಿದರು.
ವರ್ತಕರ ಸಂಘದ ಅಧ್ಯಕ್ಷರಾದ ಸದಾನಂದ ಉಪ್ಪಿನ, ಚೌಡೇಶ್ವರಿ ಹಮಾಲರ ಸಂಘದ ಅಧ್ಯಕ್ಷರಾದ ಮಲ್ಲೇಶಪ್ಪ ಮೇಡ್ಲೆರಿ, ಜೈ ಭಾರತ ಶ್ರಮಜೀವಿ ಗುಡಶೆಡ್ ಹಮಾಲರ ಸಂಘದ ಅಧ್ಯಕ್ಷರಾದ ಬಸವಣೆಪ್ಪ ಮರಿಯಮ್ಮನವರ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ. ನಿತ್ಯಾನಂದ ಕಂದುಪುರ, ವೀರಕಂಠೀರವ ಕಟ್ಟಡ ಕಾರ್ಮಿಕರ ಸಂಘದ ಶ್ರೀಮತಿ ರೇಣುಕಾ ಲಮಾಣಿ, ಬಿ.ಆರ್. ಅಂಬೇಡ್ಕರ ಸಂಘದ ಜಿಲ್ಲಾಧ್ಯಕ್ಷ ಕೆ.ಆರ್. ಉಮೇಶ, ಕನ್ನಡ ಜಾಗೃತ ವೇದಿಕೆಯ ಪುಷ್ಪಾ ಎನ್.ಎಚ್. ದಿನಗೂಲಿ ನೌಕರರ ಜಿಲ್ಲಾಧ್ಯಕ್ಷ ಬಸವರಾಜ ಕೊಂಗಿಯವರ, ಗೋಲ್ಡ ಮರ್ಚೆಂಟ್ಸ್ ಅಸೋಸಿಯೆಶನ್ನ ಅಧ್ಯಕ್ಷರಾದ ಸಂತೋಷ ದೇವಾಂಗದ, ಮೆಟಲ್ ಅಸೋಸಿಯೆಶನ್ನ ಅಧ್ಯಕ್ಷರಾದ ಗಂಗಣ್ಣಾ ಸಮಾಂತ್ರಿ, ಹೂವಿನ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ರವಿ ಕಲಾಲ, ಚಿಕನ್ ಮಾರುಕಟ್ಟೆಯ ವ್ಯಾಪರಸ್ಥರ ಸಂಘದ ಅಧ್ಯಕ್ಷರಾದ ಗೌಸುದ್ದೀನಸಾಬ, ದುರ್ಗಾ ತರಕಾರಿ ಮಾರುಕಟ್ಟೆಯ ಸುರೇಶ, ಬೇಕರಿ ಅಸೋಸಿಯೆಶನ್ನ ಅಧ್ಯಕ್ಷರಾದ ವೆಂಕಟೇಶ, ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾದ ರುಕ್ಮಿಣಿಬಾಯಿ ಸಾಹುಕಾರ, ಬಾರ್ ಅಸೋಸಿಯೆಶನ್ನ ಅಧ್ಯಕ್ಷರಾದ ಕೃಷ್ಣಪ್ಪ, ನೆಹರೂ ಮಾರುಕಟ್ಟೆಯ ವರ್ತಕರ ಸಂಘದ ಅಧ್ಯಕ್ಷರಾದ ಅಶೋಕ ಗಂಗನಗೌಡ್ರ, ಸೇರಿದಂತೆ 65- ಕ್ಕೂ ಹೆಚ್ಚು ಸಂಘಟನೆಗಳ ಮುಖಂಡರು ಉದ್ಯಮಿ ಡಾಽಽ ಸಂಜಯ ನಾಯಕ ಸೇರಿದಂತೆ ಹಲವು ಗಣ್ಯರು ಭಾಗವಹಿಸದ್ದರು.
ಅಧ್ಯಕ್ಷತೆಯನ್ನು ರೇಲ್ವೆ ಮೇಲ್ಸೇತುವೆ ನಿರ್ಮಾಣ ಹೋರಾಟ ಸಮಿತಿಯ ಅಧ್ಯಕ್ಷರಾದ ರವೀಂದ್ರಗೌಡ ಎಫ್. ಪಾಟೀಲ ವಹಿಸಿದ್ದರು. ಉಮೇಶಣ್ಣಾ ಹೊನ್ನಾಳಿ, ಜಿ.ಎಚ್. ಹೊಟ್ಟೆಗೌಡರ ಉಪಸ್ಥಿತರಿದ್ದರು.