“ಪುಷ್ಪ” ಸಿನಿಮಾ ನಂತರ “ಬನ್ನಿ” ಬಾಲಿವುಡ್ ನಲ್ಲಿ ಮತ್ತೆ ಸದ್ದು ಮಾಡಲು ರೆಡಿ
ಮುಂಬೈ : ಜನೆವರಿ 17 ಅಲ್ಲು ಅರ್ಜುನ್ ಅವರ ಇತ್ತೀಚೆಗೆ ಬಿಡುಗಡೆಯಾದ ಚಿತ್ರ ‘ಪುಷ್ಪ ದಿ ರೈಸ್’ ಎಲ್ಲಾ ಭಾಷೆಗಳಲ್ಲಿ ದಾಖಲೆಯ ಕಲೆಕ್ಷನ್ಗಳೊಂದಿಗೆ ಅಬ್ಬರ ಸೃಷ್ಟಿಸಿದೆ. ಅದರಲ್ಲೂ ಉತ್ತರ ಭಾರತದಲ್ಲಿ ಈ ಚಿತ್ರ ಬರೋಬ್ಬರಿ ರೂ. 80 ಕೋಟಿಗೂ ಅಧಿಕ ಆದಾಯ ಗಳಿಸಿದೆ. ವಾಸ್ತವವಾಗಿ, ಚಿತ್ರದ ಹಿಂದಿ ಆವೃತ್ತಿಯ ಮೇಲೆ ಚಿತ್ರತಂಡ ಯಾವುದೇ ನಿರೀಕ್ಷೆಗಳನ್ನು ಹೊಂದಿರಲಿಲ್ಲ.
ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ ಅಭೂತಪೂರ್ವ ಕಲೆಕ್ಷನ್ಗಳೊಂದಿಗೆ ದಾಖಲೆಯನ್ನ ಸೃಷ್ಟಿಸಿದೆ. ನಟ ಅಲ್ಲು ಅರ್ಜುನ್ ಮೇಕ್ ಓವರ್ ಮತ್ತು ಪುಷ್ಪ ಸಿನಿಮಾದ ತನ್ನ ನಟನೆಗೆ ಉತ್ತರ ಭಾರತದ ಪ್ರೇಕ್ಷಕರು ಮಾರುಹೋಗಿದ್ದಾರೆ. ಪುಷ್ಪ ಚಿತ್ರದ ಹಿಂದಿ ಆವೃತ್ತಿ ಇನ್ನೂ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ.. ಇದೇ ತಿಂಗಳಲ್ಲಿ ಬಾಲಿವುಡ್ ಪ್ರೇಕ್ಷಕರಿಗೆ ಬನ್ನಿ ಮತ್ತೊಂದು ಸರ್ಪ್ರೈಸ್ ರೆಡಿ ಮಾಡಿದ್ದಾರೆ.
ಎರಡು ವರ್ಷಗಳ ಹಿಂದೆ ಬನ್ನಿ ನಾಯಕನಾಗಿ ತ್ರಿವಿಕ್ರಮ್ ನಿರ್ದೇಶನದ ಸೂಪರ್ ಹಿಟ್ ಆಕ್ಷನ್ ಎಂಟರ್ಟೈನರ್ ‘ಅಲ ವೈಕುಂಠಪುರಮುಲೋ’. ಈ ಚಿತ್ರ ಬನ್ನಿಗೂ ಅದ್ಭುತ ಕ್ರೇಜ್ ತಂದುಕೊಟ್ಟಿತ್ತು. ಇದರಲ್ಲಿರುವ ಹಾಡುಗಳು ಬನ್ನಿ ಡ್ಯಾನ್ಸ್ ಗೆ ಅಭಿಮಾನಿಗಳನ್ನು ದೊಡ್ಡ ಮಟ್ಟದಲ್ಲಿ ರಂಜಿಸಿವೆ. ಈ ಚಿತ್ರವನ್ನ ಕೇವಲ ತೆಲುಗಿನಲ್ಲಿ ಮಾತ್ರ ಬಿಡುಗಡೆ ಮಾಡಿದ್ದ ಚಿತ್ರತಂಡ ಪುಷ್ಪ ಸಿನಿಮಾದ ಯಶಸ್ಸಿನನಂತರ ಅಲಾ ವೈಕುಂಟಪುರಮುಲೋ ಚಿತ್ರದ ಹಿಂದಿ ಅವತರಣಿಕೆ ಇದೇ ತಿಂಗಳ 26 ರಂದು ಬಿಡುಗಡೆಮಾಡಲಿದೆ.
ಬನ್ನಿ ‘ಪುಷ್ಪ’ಸಿನಿಮಾದ ಸೂಪರ್ ಕ್ರೇಜ್ ಅನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಪಕರು ಈ ನಿರ್ಧಾರ ಕೈಗೊಂಡಿದ್ದಾರೆ. ಈ ಬಗ್ಗೆ ಬಾಲಿವುಡ್ ವಿಮರ್ಶಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದು, ವಿಶೇಷ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾದ ಮೂಲಕ ಬನ್ನಿ ಬಾಲಿವುಡ್ನಲ್ಲಿ ಮ್ಯಾಜಿಕ್ ಮಾಡುತ್ತಾರಾ ಎಂಬುದನ್ನು ನೋಡಬೇಕು.