ಮನರಂಜನೆ

ಮತ್ತೆ ಹುಟ್ಟಿದ “ಅಪ್ಪು”

ಮತ್ತೆ ಹುಟ್ಟಿದ “ಅಪ್ಪು”

ಬೆಂಗಳೂರು, ಡಿಸೆಂಬರ್ 31: ಪವರ್‌ಸ್ಟಾರ್ ನಟ ದಿ. ಪುನೀತ್ ರಾಜ್‌ಕುಮಾರ್ ಇಹಲೋಕ ತ್ಯಜಿಸಿದರೇನಾಯಿತು.. ಅಪ್ಪುವನ್ನು ಪ್ರೀತಿಸುವವರ ಸಂಖ್ಯೆಗೇನೂ ಕಡಿಮೆಯಿಲ್ಲ… ಆರಾಧಿಸುವವರಿಗೇನೂ ಕೊರತೆ ಇಲ್ಲ… ರಾಜ್ಯದಿಂದ ಹಿಡಿದು ವಿದೇಶದವರೆಗೂ ಅಪ್ಪುವನ್ನು ನೆನೆಯದವರಿಲ್ಲ… ಪುನೀತನನ್ನ ಸ್ಮರಿಸದವರಿಲ್ಲ. ಅಪ್ಪು ಅನ್ನೋ ಹೆಸರೇ ಹಾಗೆ. ಹೆಸರಿಗೆ ಆನೆ ಮರಿಯಾದರೂ ಪ್ರೀತಿಯಿಂದ ಅಪ್ಪುವನ್ನ ಅಪ್ಪುವವರೇ ಹೆಚ್ಚು. ಇಷ್ಟೆಲ್ಲ ಅಪ್ಪು ಬಗ್ಗೆ ವಿಶ್ಲೇಷಣೆ ಏಕೆ ಅಂತೀರಾ?

“ಅಪ್ಪು” ಮತ್ತೆ ಹುಟ್ಟಿದಾನೆ… ಅರೇ ಪುನೀತ್ ರಾಜ್‌ಕುಮಾರ್ ಮರುಜನ್ಮವಾಯಿತೇ ಎಲ್ಲಿ? ಹೇಗೆ? ಅನ್ನೋ ಕುತೂಹಲ ಹುಟ್ಟಿದ್ದು ಕಲಬುರಗಿಯಲ್ಲಿ. ಪುನೀತ್ ಕೊರತೆಯ ನಡುವೆಯೂ ಅಪ್ಪುವಿನ ಸ್ಮರಣೆಗಾಗಿ ವಿಶೇಷಗಳು ಹುಟ್ಟುತ್ತಲೇ ಇವೆ. ಬೆಳಕಿಗೆ ಬರುತ್ತಲೇ ಇವೆ. ಪುನೀತ್ ರಾಜ್‌ಕುಮಾರ್ ಹೆಸರನ್ನ ಅಮರವಾಗಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ‌.

ಸುದ್ದಿ ಓದಿ