ಜೆಡಿಎಸ್ ಅಧ್ಯಕ್ಷರ ಮರು ನೇಮಕ
ಶಿಗ್ಗಾವಿ 18 : ಶಿಗ್ಗಾವಿ ತಾಲೂಕಿನ ಜೆಡಿಎಸ್ ಅದ್ಯಕ್ಷರನ್ನಾಗಿ ಪಟ್ಟಣದ ಈರಣ್ಣ ನವಲಗುಂದ ಅವರನ್ನು ಮರು ನೇಮಕ ಮಾಡಿ ಆದೇಶಿಸಲಾಗಿದೆ, ಈರಣ್ಣ ನವಲಗುಂದ ಅವರು, ಉತ್ತಮ ರೀತಿಯಲ್ಲಿ ಜೆಡಿಎಸ್ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದು ಪದಾಧಿಕಾರಿಗಳೆಲ್ಲರೂ ಅವರನ್ನೆ ಮರು ನೇಮಕ ಮಾಡುವಂತೆ ಒತ್ತಾಯಿಸಿದ ಪ್ರಯುಕ್ತ ಮರು ನೇಮಕ ಮಾಡಿ ಆದೇಶ ಮಾಡಲಾಗಿದೆ ಎಂದು ಪಟ್ಟಣದಲ್ಲಿ ಜೆಡಿಎಸ್ ಜಿಲ್ಲಾದ್ಯಕ್ಷ ಮಂಜುನಾಥ ಗೌಡಶಿವಣ್ಣವರ ತಿಳಿಸಿದ್ದಾರೆ.