ಕೊರೊನಾ ಚಿಕಿತ್ಸೆಯಲ್ಲಿ ಆಶಾಕಿರಣ ‘ಕಬಾಸುರ ಕುಡಿನೀರ್’ ಔಷಧ: ಶ್ರೀ ಶ್ರೀ ರವಿಶಂಕರ್
ನವದೆಹಲಿ,
ಡಿಸೆಂಬರ್ 2: ಇಡೀ ಪ್ರಪಂಚವನ್ನೇ ಅಲ್ಲೋಲ ಕಲ್ಲೋಲ
ಮಾಡುತ್ತಿರುವ ಕೊರೊನಾ ಸೋಂಕಿಗೆ ಚಿಕಿತ್ಸೆ
ಕಲ್ಪಿಸುವಲ್ಲಿ ಸಿದ್ಧ ವೈದ್ಯ ಆಶಾಕಿರಣವಾಗಿ ಕಂಡುಬರುತ್ತಿದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ
ಈ ಔಷಧ ಸೇವನೆಯಿಂದ ಉತ್ತಮ ಫಲಿತಾಂಶ ಕಂಡುಬಂದಿದೆ
ಎಂದು ಜರ್ಮನಿಯ ಫ್ರಾಂಕ್ ಫರ್ಡ್ ಸಂಸ್ಥೆ
ತನ್ನ ಸಂಶೋಧನೆಯಲ್ಲಿ ಸಾಬೀತುಪಡಿಸಿದೆ. ಆಯುರ್ವೇದ ಹಾಗೂ
ಸಿದ್ಧ ಔಷಧ ಸಮ್ಮಿಶ್ರಣವಾಗಿರುವ ಕಬಾಸುರ
ಕುಡಿನೀರ್ ಔಷಧ ಕೋವಿಡ್ -19 ವಿರುದ್ಧದ ಹೋರಾಟದಲ್ಲಿ
ಉತ್ತಮ ಫಲಿತಾಂಶ ನೀಡಿದೆ ಎಂದು ಆರ್ಟ್ ಆಪ್ ಲೀವಿಂಗ್ ಸಂಸ್ಥಾಪಕ
ಶ್ರೀ ಶ್ರೀ ರವಿಶಂಕರ್ ಹೇಳಿದ್ದಾರೆ.
ಈ ಸಿದ್ಧ ವೈದ್ಯ ಔಷಧಗಳ ಶಂಶೋಧನೆ, ತಯಾರಿಕೆಯಲ್ಲಿ ಆರ್ಟ್ ಆಪ್ ಲೀವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಅವರಿಗೆ ಸೇರಿದ ತತ್ವ ಸಂಸ್ಥೆ ಮಹತ್ವದ ಪಾತ್ರ ವಹಿಸಿತ್ತಿದೆ. ಈ ಪ್ರಯೋಗಳ ಕುರಿತು, ಅವುಗಳ ಪ್ರಾಥಮಿಕ ಫಲಿತಾಂಶಗಳ ಕುರಿತು ನಡೆಸಲಾದ ವೆಬಿನಾರ್ ನಲ್ಲಿ ಶ್ರೀ ಶ್ರೀ ರವಿಸಂಕರ್ ಈ ಮಾಹಿತಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನ ನಾರಾಯಣ ಹೃದಯಾಲಯ ಸಂಸ್ಥೆ ನಡೆಸಿದ ಮತ್ತೊಂದು ಸಂಶೋಧನೆಯಲ್ಲೂ ಕಬಾಸುರ ಕುಡಿನೀರ್ ಔಷಧ ಸೇವಿಸಿದವರ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಕಂಡುಬಂದಿಲ್ಲ ಎಂದು ಶ್ರೀ ಶ್ರೀ ರವಿಶಂಕರ್ ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ. ಈವರೆಗಿನ ಫಲಿತಾಂಶಗಳು ಉತ್ತೇಜನಕಾರಿಯಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಔಷಧಿ ತೆಗೆದುಕೊಂಡವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಳಗೊಂಡು ಸೋಂಕು ಪ್ರತಿರೋಧಿಸಿ ಆರೋಗ್ಯವಂತರಾಗಿದ್ದಾರೆ ಎಂದು ತಿಳಿಸಿದ್ದಾರೆ.