ಕುಷ್ಟಗಿ

6ರಂದು ರವಿಕುಮಾರ ಸ್ವಾಮಿ ಹಿರೇಮಠರ 54ನೇ ಹುಟ್ಟು ಹಬ್ಬ ಆಚರಣೆ

6ರಂದು ರವಿಕುಮಾರ ಸ್ವಾಮಿ ಹಿರೇಮಠರ 54ನೇ ಹುಟ್ಟು ಹಬ್ಬ ಆಚರಣೆ

ಕುಷ್ಟಗಿ 02: ಜಂಗಮ ಸಮಾಜದ ಹಿರಿಯ ಮುಖಂಡ ರವಿಕುಮಾರ ಸ್ವಾಮಿ ಹಿರೇಮಠ ಇವರ 54ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಕುಷ್ಟಗಿ ಪಟ್ಟಣದ ಸರ್ವಧರ್ಮ ಸಮಾಜದ ಮುಖಂಡರು ಹಾಗೂ ರೀಯಲ್ ಎಸ್ಟೇಟ್ ಉದ್ಯಮಿ ಇಮಾಮ್ ಸಾಬ ಜಂಗ್ಲಿ ಇವರ ನೇತೃತ್ವದಲ್ಲಿ ಜು. 6ರಂದು ಬುಧವಾರ ಬೆಳಿಗ್ಗೆ 11:00 ಗಂಟೆಗೆ ತಾವರಗೇರಿ ರಸ್ತೆಯ ಬಳಿ ಇರುವ ಮಹಾಂತ ಸಂಗಮ ಬಡಾವಣೆಯ ಬೃಹತ್ ವೇದಿಕೆಯಲ್ಲಿ ಹುಟ್ಟು ಹಬ್ಬ ಆಚರಣೆ ಹಾಗೂ ಜಿಲ್ಲೆಯ ವಿವಿಧ ಶ್ರೀಗಳಿಂದ ಆರ್ಶೀವಚನ ಮತ್ತು ವಿರೇಶ್ವರ ಪುಣ್ಯಾಶ್ರಮದ ಪರಮ ಪೂಜ್ಯ ಕಲ್ಲಯ್ಯ ಅಜ್ಜ,  ಗುರುದೊಡ್ಡ ಲಾಲಸಾಬವಲಿ ದೇವರು, ಶಾಬೂದ್ದೀನ್ ಹೆಬ್ಬಳ್ಳಿ ಇವರಿಗೆ ತುಲಾಭಾರ ಸೇವೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ರೀಯಲ್ ಎಸ್ಟೇಟ್ ಉದ್ಯಮಿ ಇಮಾಮ್ ಸಾಬ ಜಂಗ್ಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಮದ್ದಾನೇಶ್ವರ ಮಠದ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು, ನಿಡಶೇಸಿ ಪಂಶ್ಚಕಂತಿ ಹಿರೇಮಠದ ಚನ್ನಬಸವೇಶ್ವರ ಶಿವಾಚಾರ್ಯ  ಮಹಾಸ್ವಾಮಿಗಳು, ಚಳಗೇರಿಯ ವೀರಸಂಗಮೇಶ್ವರ ಮಹಾಸ್ವಾಮಿಗಳು, ಮಂಗಳೂರಿನ ಅರಳಲೆ ಕಟ್ಟಿಮನಿ ಮಠದ ಶಿವಗಂಗಾ ಶಿವಾಚಾರ್ಯ ಮಹಾಸ್ವಾಮಿಗಳು, ಯಲಬುರ್ಗಾದ ಶ್ರೀಧರ ಮುರಡಿಮಠದ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸುವರು.  

ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್, ಕೆಪಿಸಿಸಿ ಉಪಾಧ್ಯಕ್ಷ ಹಸನಸಾಬ ದೋಟಿಹಾಳ, ಮಾಜಿ ಶಾಸಕ ಕೆ.ಶರಣಪ್ಪ ವಕೀಲರು, ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಸೇರಿದಂತೆ ಇನ್ನಿತರರು ಭಾಗವಹಿಸುತ್ತಾರೆ ಎಂದು ಕುಷ್ಟಗಿ ಪಟ್ಟಣದ ಸರ್ವಧರ್ಮ ಸಮಾಜದ ಮುಖಂಡರು ತಿಳಿಸಿದ್ದಾರೆ. 


ಸುದ್ದಿ ಓದಿ