ವಿಜೃಂಭಣೆಯಿಂದ ಜರುಗಿದ ಶ್ರೀಮನ್ ಮಹಾದೇವಿಯ ರಥೋತ್ಸವ
ತಾಳಿಕೋಟಿ 25: ತಾಲೂಕಿನ ಗೊಟಖಂಡಕಿ ಗ್ರಾಮದ ಆರಾಧ್ಯ ದೇವತೆ ಶ್ರೀಮನ್ ಮಹಾದೇವಿಯವರ 160ನೇ ಮಹಾರಥೋತ್ಸವ ಸಾವಿರಾರು ಭಕ್ತರ ಮಧ್ಯೆ ಶನಿವಾರ ವಿಜೃಂಭಣೆಯಿಂದ ಜರುಗಿತು.
ಜಾತ್ರೆ ಅಂಗವಾಗಿ ಮುಂಜಾನೆಯಿಂದಲೇ ಸದ್ಗುರು ಸಮರ್ಥ ಸಚ್ಚಿದಾನಂದ ಮಠದಲ್ಲಿ ಸಾವಿರಾರು ಭಕ್ತರಿಂದ ವಿಶೇಷ ಪೂಜಾ ವಿಧಿ ವಿಧಾನಗಳು ನಡೆದವು ನೂರಾರು ಭಕ್ತರು ತಾವು ಬೇಡಿಕೊಂಡ ಹರಿಕೆಗಾಗಿ ದೀಡ ನಮಸ್ಕಾರ ಸಲ್ಲಿಸಿದರು ಮುತ್ತೈದೆ ಮಹಿಳೆಯರಿಂದ ಉಡಿ ತುಂಬವ ಕಾರ್ಯಕ್ರಮ ಜರುಗಿತು. ಶ್ರೀಮಠದಲ್ಲಿ ಸುಮಾರು 42 ದಿನಗಳಿಂದ ನಡೆದು ಬಂದ ಶ್ರೀಮನ್ ಮಹಾದೇವಿಯವರ 160ನೇ ಪುರಾಣ ಪಠಣ ಕಾರ್ಯಕ್ರಮದ ಮಂಗಲೋತ್ಸವವಾಯಿತು. ಸಂಜೆ 4 ಗಂಟೆಗೆ ನಾಡಿನಲ್ಲಿಯೇ ಅತಿ ವಿಶಿಷ್ಟ ರೀತಿಯಲ್ಲಿ ನಡೆಯುವ ಮುತ್ತೈದೆ ಮಹಿಳೆಯರಿಂದಲೇ ಮಹಾ ರಥೋತ್ಸವ ಸಕಲ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದ ನಂತರ ಆರಂಭವಾಯಿತು.
ಸದ್ಗುರು ಸಚ್ಚಿದಾನಂದ ಮಠದಿಂದ ಪಾದಕಟ್ಟೆಯವರಿಗೆ ಮುತ್ತೈದೆ ಮಹಿಳೆಯರೇ ಮಹಾ ರಥವನ್ನು ಎಳೆದು ಪಾವನರಾದರು ಮಹಾರತೋತ್ಸವದಲ್ಲಿ ಗೊಟ ಖಂಡಕಿ ಗ್ರಾಮದ ಸುತ್ತ ಮುತ್ತಲಿನ ನೂರಾರು ಗ್ರಾಮಗಳ ಭಕ್ತರು ಅಲ್ಲದೆ ಸಮೀಪದ ಮಹಾರಾಷ್ಟ್ರದ ಸೋಲಾಪುರ್ ಪುಣೆ ಮುಂಬೈ ನಗರಗಳಿಂದಲೂ ನೂರಾರು ಭಕ್ತರು ಆಗಮಿಸಿದ್ದರು ರಥೋತ್ಸವದಲ್ಲಿ ಭಾಗವಹಿಸಿದ ಸಾವಿರಾರು ಭಕ್ತರು ತೇರಿನ ಮೇಲೆ ಉತ್ತತ್ತಿ ಬಾಳೆಹಣ್ಣು ಎಸೆದು ಭಕ್ತಿ ಭಾವದಲ್ಲಿ ಮಿಂದೆದ್ದರು.
ಈ ಮಹಾ ರಥೋತ್ಸವದಲ್ಲಿ ಗ್ರಾಮದ ಗಣ್ಯರಾದ ಪುರಾಣ ಪಠಣಕಾರ ಸುರೇಶ್ ರಾವ್ ಕುಲಕರ್ಣಿ. ಬಸಯ್ಯ ಹಿರೇಮಠ ಯಾಳವಾರ. ನಿಂಗಣ್ಣ ಶರಣರು ಸಾಸನೂರ. ಚನ್ನಬಸವ ಶರಣರು .ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಶಿವನಗೌಡ ಬಿರಾದರ. ರಾಮನಗೌಡ ಬಂಟನೂರ. ಮಧು ಗೌಡ ಪಾಟೀಲ. ಮಲ್ಲಯ್ಯ ಸ್ವಾಮಿ ಹಿರೇಮಠ. ಶಿವಯ್ಯ ಹಿರೇಮಠ. ರುದ್ರಸ್ವಾಮಿ ಹಿರೇಮಠ. ನಿಂಗನಗೌಡ ಬಿರಾದಾರ. ವ್ಯವಸ್ಥಾಪಕ ಗುರುನಾಥ್ ಗೌಡ ಕೋನಾಳ. ತಬಲಾವಾದ ಕ ದೇವಪ್ಪಗೌಡ ಕೋನ್ನಾಳ. ಗೊಟಖಂಡಕಿ ಗ್ರಾಮದ ಹಾಗೂ ಸುತ್ತು ಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಗಣ್ಯರು ಉಪಸ್ಥಿತರಿದ್ದರು