ತಾಳಿಕೋಟಿ

ಸಂಭ್ರಮದ ಶರಣಮುತ್ಯಾರವರ ರಥೋತ್ಸವ

ಸಂಭ್ರಮದ ಶರಣಮುತ್ಯಾರವರ ರಥೋತ್ಸವ

ತಾಳಿಕೋಟೆ : ಪಟ್ಟಣದ ಆರಾಧ್ಯ ದೈವ ಶ್ರೀ ಸಾಂಭಪ್ರಭು ಶರಣಮುತ್ಯಾರವರ ಜಾತ್ರಾ ಮಹೋತ್ಸವವು ರವಿವಾರ ಭಕ್ತಿ, ಶ್ರದ್ಧೆ, ಸಂಭ್ರಮಗಳಿಂದ ಜರುಗಿತು. ಬೆಳಿಗ್ಗೆ ಪಲ್ಲಕ್ಕಿ ಉತ್ಸವ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೂಲಕ ದೇವಸ್ಥಾನವನ್ನು ತಲುಪಿತು. ಪಲ್ಲಕ್ಕಿ ಉತ್ಸವದಲ್ಲಿ ಪುರುವಂತರ ಸೇವೆ, ಭಜನೆ, ಭಾಜಾ ಭಜಂತ್ರಿ, ಡೊಳ್ಳು ಕುಣಿತ ಗಮನ ಸೆಳೆದವು. ಪಲ್ಲಕ್ಕಿ ಉತ್ಸವವು ದೇವಸ್ಥಾನ ತಲುಪುತ್ತಿದ್ದಂತೆ ದೇವಸ್ಥಾನ ಪ್ರದಕ್ಷಿಣೆ ಸಮಯದಲ್ಲಿ ಅಸಂಖ್ಯಾತ ಭಕ್ತರು ಉರುಳುಸೇವೆ ಮಾಡಿದರು. ಅವರನ್ನು ದಾಟಿಕೊಂಡು ಪಲ್ಲಕ್ಕಿ ಹೊತ್ತವರು ಹಾಗೂ ನೇತೃತ್ವ ವಹಿಸಿದ್ದ ಶರಣಪ್ಪ ಶರಣರು, ಬಸಣ್ಣ ಶರಣರು ಇತರು ಮುನ್ನಡೆದರು. ಬೆಳಿಗ್ಗೆಯಿಂದಲೇ ಭಕ್ತಾದಿಗಳು ದೇವರಿಗೆ ನೈವೇದ್ಯ, ಕಾಯಿ, ಕರ​‍್ೂರ ಅರ​‍್ಿಸಿದರು. ಅನೇಕ ದೀಡನಮಸ್ಕಾರ ಹಾಕಿದರು. ಸಂಜೆ ದೇವಸ್ಥಾನ ಬಳಿ ರಥವನ್ನು ಹೂಮಾಲೆ, ತೆಂಗಿನ ಗರಿ, ಬಾಳೆ ಇತ್ಯಾದಿಗಳಿಂದ ಅಲಂಕರಿಸಲಾಯಿತು. ಪಲ್ಲಕ್ಕಿ ಸಮೇತ ಶರಣರ ಕುಟುಂಬದವರು ಭಕ್ತಾದಿಗಳು ರಥದ ಸುತ್ತ ಪಂಚಪ್ರದಕ್ಷಿಣ ಹಾಕಿ ಪೂಜೆ ಸಲ್ಲಿಸಲಾಯಿತು. ಕಳಸ, ಛತ್ರಿ ಚಾಮರವನ್ನು ರಥದ ಮೇಲೇರಿ ಮಹಾವಾದ್ಯಗಳು ಮೊಳಗುತ್ತಿದ್ದಂತೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥದ ಮುಂದೆ ನಂದಿಕೋಲು ಹಿಡಿಯಲು ಯುವಪಡೆ ಪೈಪೋಟಿ ನಡೆಸಿತ್ತು. ಭಕ್ತಾದಿಗಳು, ರಥಕ್ಕೆ, ಕಾಯಿ, ಕಬ್ಬು, ಬಾಳೆಹಣ್ಣು, ಉತ್ತತ್ತಿಗಳನ್ನು ಎಸೆದು ತಮ್ಮ ಭಕ್ತಿ ಸಮರೆ​‍್ಣ ಮಾಡಿದರು. ರಥೋತ್ಸವದಲ್ಲಿ ಶರಣರ ಕುಟುಂಬದ ಸದಸ್ಯರು, ತಾಳಿಕೋಟೆ ಪಟ್ಟಣ, ಮೂಡಬೂಳ, ಕರಿಭಾವಿ ಸೇರಿದಂತೆ ಸುತ್ತಲಿನ ಗ್ರಾಮಗಳ ಸಾವಿರಾರು ಭಕ್ತರ ಹರ್ಷೋದ್ಘಾರಗಳ ನಡುವೆ  ಮಹಾರಥೋತ್ಸವ ಜರುಗಿತು. ಭಕ್ತಾದಿಕಗಳಿಗಾಗಿ ಮಹಾಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಸ್ಥಾನದಿಂದ ಗದ್ದುಗೆಯವರೆಗೆ ರಥೋತ್ಸವ ಜರುಗಿತು. ಇಂದಿನಿಂದ ದನಗಳ ಜಾತ್ರಾ ಮಹೋತ್ಸವ ಆರಂಭವಾಗಲಿದೆ. 






ಸುದ್ದಿ ಓದಿ