ರಾಷ್ಟ್ರ ವಂದನಾ, ಸೂರ್ಯ ನಮಸ್ಕಾರ ಕಾರ್ಯಕ್ರಮ
ಲೋಕದರ್ಶನ ವರದಿ
ರಾಣೇಬೆನ್ನೂರು 30; ಇಲ್ಲಿನ ಉಮಾಶಂಕರ ನಗರದ ಜಿಲ್ಲಾ ಪತಂಜಲಿ ಯೋಗ ಸಮಿತಿಯ ಜಿಲ್ಲಾ ಮಹಿಳಾ ಪ್ರಭಾರಿ ಜ್ಯೋತಿ ಜಗದೀಶ ಜಂಬಗಿ ಇವರ ನೇತೃತ್ವದಲ್ಲಿ ಆಜಾಧಿಕಾ ಅಮೃತ ಮಹೋತ್ಸವದ 73ನೇ ಗಣರಾಜ್ಯೋತ್ಸವದ ನಿಮಿತ್ತ 75 ಕೋಟಿ ಸೂರ್ಯ ನಮಸ್ಕಾರ ರಾಷ್ಟ್ರ ವಂದನಾ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದಲ್ಲಿ ಪತಂಜಲಿ ಪರಿವಾರದ ಅಧ್ಯಕ್ಷ ರವೀಂದ್ರ ವಿಜಾಪುರ, ಬಿಎಸ್ಟಿ ಅಧ್ಯಕ್ಷ ರಾಮಸಿಂಗ್ ರಾಠೋಡ, ಯೋಗ ಸಾಧಕ ಕೆ.ಸಿ.ಕೋಮಲಾಚಾರ್ ಸೇರಿದಂತೆ ಪತಂಜಲಿ ವಿವಿಧ ಯೋಗ ಕೇಂದ್ರಗಳ ಮುಖಂಡರು ನೂರಾರು ಯೋಗ ಸಾಧಕರು ಪಾಲ್ಗೊಂಡಿದ್ದರು.