ಶಿಗ್ಗಾವ್

ಸೆ. 9ರಂದು ರಾಷ್ಟ್ರೀಯ ಲೋಕ್ ಅದಾಲತ್

ಸೆ. 9ರಂದು ರಾಷ್ಟ್ರೀಯ ಲೋಕ್ ಅದಾಲತ್

ಶಿಗ್ಗಾವಿ 10: ಸೆ. 9ರಂದು ರಾಷ್ಟ್ರೀಯ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದ್ದು ಇದರ ಸದುಪಯೋಗವನ್ನ ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಶಿಗ್ಗಾವಿ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ದಿವಾಣಿ ನ್ಯಾಯಾಧೀಶರಾದ ಪೈರೋಜಾ ಹ ಉಕ್ಕಲಿ ಹೇಳಿದರು. 

ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಸಭಾಭನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯ ಕಾನೂನು ಸೇವೆಗಳ ಪ್ರಧಿಕಾರ ಬೆಂಗಳೂರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾವೇರಿ, ತಾಲೂಕಾ ಕಾನೂನು ಸೇವಾ ಸಮೀತಿ ಶಿಗ್ಗಾವಿ ವತಿಯಿಂದ ಹಮ್ಮಿಕೊಂಡಿರುವ ಈ ಲೋಕ್ ಅದಾಲತ್‌ನಲ್ಲಿ ವ್ಯಾಜ್ಯ ಪೂರ್ವ ಪ್ರಕರಣಗಳು, ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು ಸೇರಿದಂತೆ ಬ್ಯಾಂಕ್ ವಸೂಲಾತಿ, ರಾಜೀಯಾಗಬಲ್ಲ ಅಪರಾಧ ಪ್ರಕರಣಗಳು, ವೈವಾಹಿಕ ಪ್ರಕರಣಗಳು, ಚೆಕ್ ಅಮಾನ್ಯದ ಪ್ರಕರಣಗಳು, ವೇತನ, ಭತ್ಯೆಗಳಿಗೆ ಸಂಭಂದಿಸಿದ ಸೇವಾ ಪ್ರಕರಣಗಳು ಹಾಗೂ ಪಿಂಚಣಿ ಪ್ರಕರಣಗಳನ್ನ ರಾಜಿ ಹಾಗೂ ಕಡಿಮೆ ಖರ್ಚಿನಲ್ಲಿ ಶೀಘ್ರ ಪರಿಹಾರಗಳನ್ನ ತೀರ್ಮಾನದ ಮೂಲಕ ಅವಕಾಶವಿದೆ ಎಂದರು. 

ಕಿರಿಯ ದೀವಾಣಿ ನ್ಯಾಯಾದೀಶರಾದ ನಸ್ರತ್ ಮುಕ್ತಾರ ಅಹ್ಮದ್ ಖಾನ್ ಅವರು, ವಿವಿಧ ಬ್ಯಾಂಕಿನ ಮ್ಯಾನೇಜರ್ ಗಳು ಹಾಗೂ ನ್ಯಾಯವಾದಿಗಳು ಇದ್ದರು. 


ಸುದ್ದಿ ಓದಿ