ರಾಷ್ಟ್ರೀಯ ಲೋಕ್ ಅದಾಲತ್: 7770 ಪ್ರಕರಣಗಳು ಇತ್ಯರ್ಥ
ಲೋಕದರ್ಶನ ವರದಿ
ಸವದತ್ತಿ 12: ತಾಲೂಕಾ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ದಿ. 11ರಂದು ಸವದತ್ತಿಯ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿತ್ತು.
ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ಸವದತ್ತಿಯ ಎಲ್ಲಾ ನ್ಯಾಯಾಲಯಗಳಲ್ಲಿ ಒಟ್ಟು 2119 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು ಹಾಗೂ 905 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಅದೇ ರೀತಿ ವ್ಯಾಜ್ಯ ಪೂರ್ವ ಪ್ರಕರಗಳು ಒಟ್ಟು 9506 ಪ್ರಕರಣಗಳನ್ನು ಕ್ಯೆಗೆತ್ತಿಕೊಳ್ಳಲಾಗಿತ್ತು ಅದರಲ್ಲಿ 7770 ಪ್ರಕರಣಗಳು ರಾಜಿ ಮೂಲಕ ಇತ್ಯರ್ಥವಾಗಿವೆ ಒಟ್ಟು 24336581 ಕ್ಕೂ ಹೆಚ್ಚು ಹಣ ವಸೂಲಾತಿಯಾಗಿದೆ ಎಂದು ಗೌರವಾನ್ವಿತ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರಾದ ಶಶಿಧರ ಎಮ್ ಗೌಡ ರವರು ತಿಳಿಸಿದರು.
ಹಿರಿಯ ಶ್ರೇಣಿ ದಿವಾಣಿ ನ್ಯಾಯಾಲಯಲ್ಲಿ ವಿವಾಹ ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿ ಸುಮಾರು ದಿನಗಳಿಂದ ಕೋರ್ಟ್ಗೆ ಅಲೆದಾಡುತ್ತಿರುವ ಜೋಡಿಯನ್ನು ಮನವಲಿಸಿ ಪುನಃ ಒಗ್ಗೂಡಿಲಾಯಿತು ಅದರಿಂದ ಎರಡೂ ಕಡೆಯ ಪಕ್ಷಗಾರರು, ವಕೀಲರು ಹಾಗೂ ಊರಿನ ಹಿರಿಯರು ಸಂತಸ ವ್ಯಕ್ತಪಡಿಸಿದರು.
ದ್ಯಾಮನಗೌಡರು ವಕೀಲರು, ಕುಸಗಲ್ ವಕೀಲರು, ಬಡಿಗೇರ ವಕೀಲರು, ತುರಮರಿ ವಕೀಲರು, ಹೊಸಮಠ ವಕೀಲರು ಇನ್ನು ಅನೇಕ ಗಣ್ಯ ವಕೀಲರು, ನ್ಯಾಯಾಧೀಶರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು