ಸ್ವಾತಂತ್ರ್ಯ ಕಹಳೆ ಮೊಳಗಿಸಿದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯೋತ್ಸವ
ಸಿರುಗುಪ್ಪ 23: ಸ್ವಾತಂತ್ರ್ಯದ ಕಹಳೆ ಮೊಳಗಿಸಿದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಎಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರು ತಹಸೀಲ್ದಾರ ಎನ್ ಆರ್ ಮಂಜುನಾಥ ಸ್ವಾಮಿ ಅವರು ಹೇಳಿದರು.
ನಗರದ ತಾಲ್ಲೂಕ್ ಪಂಚಾಯತ್ ಸಭಾಭವನದಲ್ಲಿ ಕರ್ನಾಟಕ ಸರಕಾರ ಜಿಲ್ಲಾ ಪಂಚಾಯತ್ ತಾಲ್ಲೂಕು ಪಂಚಾಯತ್ ತಾಲ್ಲೂಕು ಆಡಳಿತ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಭಾಗಿತ್ವದಲ್ಲಿ ಆಯೋಜಿಸಿದ್ದ 245ನೇ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತ್ಯೋತ್ಸವ ಸಮಾರಂಭ .
ದಲ್ಲಿ ಅವರು ಮಾತನಾಡುತ್ತಾ ಬ್ರಿಟಿಷರ ವಿರುದ್ಧ ಕರ್ನಾಟಕದ ಕಿತ್ತೂರಿನ ರಾಣಿ ಚೆನ್ನಮ್ಮ ನಡೆಸಿದ ಹೋರಾಟ ಭಾರತದ ಇತಿಹಾಸದಲ್ಲಿ ಅವಿಸ್ಮರಣೀಯ ವಾದುದು ಎಂದು ನುಡಿದರು ಶಾಸಕ ಎಂ ಎಸ್ ಸೋಮಲಿಂಗಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಕರ್ನಾಟಕ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಹಾಡಿದ ಕೀರ್ತಿ ಕಿತ್ತೂರ ಸಂಸ್ಥಾನದ ಕಿತ್ತೂರು ರಾಣಿ ಚೆನ್ನಮ್ಮ ಗೆ ಸಲ್ಲುತ್ತದೆ ಬ್ರಿಟಿಷರ ವಿರುದ್ಧ ಹೋರಾಟವನ್ನು ಭಾರತದ ಇತಿಹಾಸಕಾರರು ಆಂಗ್ಲರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರಾಣಿ ಒಬ್ಬ ಮಹಿಳೆ ಚನ್ನಮ್ಮ ಎಂದರು ಮುಖ್ಯ ಭಾಷಣಕಾರರಾಗಿ ಲಕ್ಷ್ಮೀದೇವಿ ಅವರು ಮಾತನಾಡುತ್ತಾ ಕ್ರಿಸ್ತಶಕ 1824ರಲ್ಲಿಯೇ ಆಂಗ್ಲರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಚನ್ನಮ್ಮಳನ್ನು ಸ್ವಾತಂತ್ರ್ಯ ಹೋರಾಟದ ಬೆಳ್ಳಿಚುಕ್ಕಿ ರಾಷ್ಟ್ರಾಭಿಮಾನ ಉದಾತ್ತ ಮಾನವೀಯ ಗುಣಗಳು ಎಂದೆಂದಿಗೂ ಆದರ್ಶ ಮಯವಾದವು ಇಂಥ ಹೋರಾಟಗಾರ್ತಿಯ ಬದುಕು ನಮ್ಮ ಇಂದಿನ ಯುವ ಜನಾಂಗಕ್ಕೆ ಪ್ರೇರಣೆ ದಾಯಕ ವಾಗಿದೆ ಎಂದರು.
ತಾಲ್ಲೂಕು ವೈದ್ಯಾಧಿಕಾರಿ ಡಾ. ಈರಣ್ಣ, ಬಿಸಿಎಂ ಅಧಿಕಾರಿ ಗಾದಿಲಿಂಗಪ್ಪ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕಿ ಬಿ ರಾಜೇಶ್ವರಿ, ನೀರಾವರಿ ಲೋಕೋಪಯೋಗಿ ಇಲಾಖೆಯ ಎಇಇ ನಾಯಕ ಶಿಕ್ಷಣ ಇಲಾಖೆಯ ಬಸವರಾಜಯ್ಯ, ಜಿಲ್ಲಾ ಸಾಕ್ಷರತಾ ಕಾರ್ಯಕಾರಿ ಸಮಿತಿ ಸದಸ್ಯರು ಜನಾಭಿಪ್ರಾಯ ಮುಖಂಡ ಎ ಅಬ್ದುಲ್ ನಬಿ ಅವರು ಭಾಗವಹಿಸಿದ್ದರು. ಎ ಮೊಹಮ್ಮದ್ ನೌಶಾದ್ ಅಲಿ, ದೇವರಾಜ ಪ್ರಾರ್ಥಿ ಸಿದರು ರಹೀಮ್ ಸಾಬ್ ವಿವಿಧ ಇಲಾಖೆ ಅಧಿಕಾರಿಗಳು ಸಾರ್ವಜನಿಕರು ಇದ್ದರು ಸರ್ವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಕೋರಿದರು