ರಂಗಕರ್ಮಿ ವೆಂಕಟೇಶ ಈಡಿಗರ: ಚಲನ ಚಿತ್ರ ಅಕಾಡೆಮಿ ಜಿಲ್ಲಾ ಸಂಚಾಲಕ
ಲೋಕದರ್ಶನ ವರದಿ
ರಾಣೇಬೆನ್ನೂರು 14: ನಗರದ ಸಾಹಿತಿ, ರಂಗಕರ್ಮಿ ಶಿಕ್ಷಕ ವೇಂಕಟೇಶ ಈಡಿಗರ ಅವರನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಹಾವೇರಿ ಜಿಲ್ಲಾ ಸಂಚಾಲಕರನ್ನಾಗಿ ನೇಮಕಾತಿ ಮಾಡಿ ಆದೇಶ ಪತ್ರ ರವಾನಿಸಿದೆ.
ಈ ಕುರಿತು ಕರ್ನಾಟಕ ಚಲನಚಿತ್ರ ಅಕಾಡೆಮಿ ಈಡಿಗರ ಅವರನ್ನು ನೇಮಕಾತಿಗೂಳಿಸಿ ಕಳೆದ ನವೆಂಬರ್ 8 ರಂದು ಅಕಾಡೆಮಿಯ ರೆಜಿಸ್ಟ್ರಾರ್ ಜಿ. ಹಿಮಂತರಾಜು ಅವರು ಪತ್ರ ರವಾನಿಸಿದ್ದಾರೆ. ಜಿಲ್ಲೆಗಳಲ್ಲಿ ಚಲನಚಿತ್ರ ಆಸಕ್ತರ ತಂಡ ರಚಿಸಿ, ಚಿತ್ರ ಆಸಕ್ತರಿಗೆ, ವಿಕ್ಷಕರಿಗೆ ಸದಭಿರುಚಿಯ ಚತ್ರಗಳನ್ನು ತೋರಿಸುವುದು. ಪ್ರೇಕ್ಷಕರಿಗೆ ವಿಶ್ವದ ಶ್ರೇಷ್ಠ ಚಲನಚಿತ್ರಗಳನ್ನು ನೂಡುವ, ಅರಿಯುವ ಅವಕಾಶವನ್ನು ಮಾಡಿಕೂಟ್ಟು. ಬೇರು ಮಟ್ಟದಲ್ಲಿ ಪ್ರೇಕ್ಷಕರ ನಿರ್ಮಾಣಕ್ಕಾಗಿ “ಬೆಳ್ಳಿ ಮಂಡಲ” ಘಟಕಗಳನ್ನು ಪುನಾರಾರಂಬಿಸಲು ಅಕಾಡೆಮಿ ಉದ್ದೇಶಿಸಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬೆಳ್ಳಿ ಮಂಡಲ ಘಟಕಗಳನ್ನು ಪ್ರಾರಂಭಿಸುವ ಸಂಪೂರ್ಣ ಹೂಣೆಯನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸದಸ್ಯರಾದ ರಾಜ್ಗುಡಿ ಅವರಿಗೆ ವಹಿಸಲಾಗಿದೆ. ಅದರಂತೆ ತಮ್ಮನ್ನು ಹಾವೇರಿ ಜಿಲ್ಲಾ ಸಂಚಾಲಕರನ್ನಾಗಿ ನೇಮಕಾತಿ ಮಾಡಲಾಗಿದ್ದು. ತಮ್ಮ ಜಿಲ್ಲೆಯಲ್ಲಿ ಬೆಳ್ಳಿ ಮಂಡಲ ಘಟಕ ಸ್ಥಾಪಿಸಲು ಈ ಕೂಡಲೇ ಕಾರ್ಯ ಪ್ರವತ್ತರಾಗಲು ಮುಂದಾಗಬೇಕು ಎಂದು ಹಿಮಂತರಾಜು ಅವರು ಕೋರಿದ್ದಾರೆ.