ರಾಣೇಬೆನ್ನೂರು-ಸೇಡಂರಾಜಹಂಸ ಸಾರಿಗೆ ಪುನ: ಪ್ರಾರಂಭ
ರಾಣೇಬೆನ್ನೂರು 23: ಕೋವಿಡ್ ಹಿನ್ನಲೆಯಲ್ಲಿ ನಗರಘಟಕದಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ರಾಣೇಬೆನ್ನೂರು - ಸೇಡಂರಾಜಹಂಸ ಸಾರಿಗೆಯನ್ನು ಪುನ: ಪ್ರಾರಂಭಿಸಲಾಗಿದ್ದು ಸಾರ್ವಜನಿಕರು ಸದುಪಯೋಗ ಪಡೆಯಬೇಕೆಂದು ವಾಯುವ್ಯ ಕರ್ನಾಟಕರಸ್ತೆ ಸಾರಿಗೆ ಸಂಸ್ಥೆ ಉಪಾಧ್ಯಕ್ಷಡಾ. ಬಸವರಾಜ ಕೇಲಗಾರ ಹೇಳಿದರು.
ನಗರದ ಬಸ್ ನಿಲ್ದಾಣದಲ್ಲಿ ರಾಜಹಂಸ ಬಸ್ ಸಂಚಾರ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಣೇಬೆನ್ನೂರು ನಗರ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದೆ. ಅದಕ್ಕನುಗುಣವಾಗಿ ಪ್ರಯಾಣಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸಂಚಾರ ಸೇವೆಯನ್ನು ಪ್ರಾರಂಭಿಸಲಾಗಿದೆ ಎಂದರು.
ಎನ್‌ಡಬ್ಲೂಕೆಎಸ್‌ಆರ್‌ಟಿಸಿ ನಿರ್ದೆಶಕ ಸಂತೋಷಕುಮಾರ ಮಾತನಾಡಿ, ರಾಣೇಬೆನ್ನೂರು ನಗರದಿಂದ ಸಾಯಂಕಾಲ 5:45 ಕ್ಕೆ ಹೊರಡುವ ಬಸ್ ಹಾವೇರಿ, ಹುಬ್ಬಳ್ಳಿ, ಗದಗ, ಗಜೇಂದ್ರಗಡ, ಕುಷ್ಠಗಿ, ಲಿಂಗಸೂರ, ಸುರಪುರ, ಶಹಪುರ, ಜೀವರಗಿ, ಕಲಬುರಗಿ ಮಾರ್ಗವಾಗಿ ಚಲಿಸಿ ಮರುದಿನ ಬೆಳಿಗ್ಗೆ 7 ಗಂಟೆಗೆ ಸೇಡಂತಲುಪಲಿದೆ. ಸೇಡಂ ನಿಂದ ಸಂಜೆ 6:30 ಕ್ಕೆ ಹೊರಟು ರಾಣೇಬೆನ್ನೂರು ನಗರಕ್ಕೆ ಮರುದಿನ ಬೆಳಿಗ್ಗೆ 7 ಗಂಟೆಗೆ ಬಂದು ತಲುಪುವುದು ಕಾರಣ ಸಾರ್ವಜನಿಕರು ಸಹಕರಿಸಿ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಘಟಕದ ವ್ಯವಸ್ಥಾಪಕ ಶಿವಮೂರ್ತಿ, ಸಂಚಾರ ನೀರೀಕ್ಷಕ ನಾಗರಾಜ ಕೆ, ಆರ್.ಕುಮಾರಸ್ವಾಮಿ, ನಿಲ್ದಾಣಾಧಿಕಾರಿ ಉಮೇಶ ನಾಯಕ, ಸಹಾಯಕ ಸಂಚಾರಿ ವ್ಯವಸ್ಥಾಪಕ ಜಿ. ಬಿ.ಆಡರಕಟ್ಟಿ, ಡಾ.ಗಣೇಶದೇವಗಿರಿಮಠ, ಉಮೇಶಣ್ಣ ಹೊನ್ನಾಳಿ, ಎನ್. ಎನ್. ಮುಲ್ಲಾ, ಘಟಕದ ಲೆಕ್ಕ ಪತ್ರ ಮೇಲ್ವಿಚಾರಕ ಶಿವಕುಮಾರ, ಪವನ ಮಲ್ಲಾಡದ ಸೇರಿದಂತೆ ಮತ್ತಿತರರು ಇದ್ದರು.