ರಾಣೇಬೆನ್ನೂರು ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಾಗಾರ
ರಾಣೇಬೆನ್ನೂರು: ಇಲ್ಲಿನ ಎಸ್ ಜೆ ಎಂ ವಿ ಕಲಾ ಮತ್ತು ವಾಣಿಜ್ಯ ಮಹಾ ವಿದ್ಯಾಲಯದ ಶಿಮುಶಾ ಸಭಾಭವನದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಅನ್ವಯ 2021-22 ನೇ ಸಾಲಿನ ಪದವಿ ಕಾಲೇಜುಗಳಿಗೆ ವಿದ್ಯಾರ್ಥಿನಿಯರ ಪ್ರವೇಶಾತಿ ಮತ್ತು ಜಾಗೃತಿ ಕುರಿತು ಕಾರ್ಯಾಗಾರ ನಡೆಯಿತು
ಈ ಕುರಿತು ಮಾತನಾಡಿದ ಪ್ರೊ.ಶಿವರಾಜಕುಮಾರ್.ಕೆ ಅವರು ಪ್ರಥಮ ವರ್ಷದ ವಿದ್ಯಾರ್ಥಿನಿಯರು 2022-23 ನೇ ಸಾಲಿಗೆ ದ್ವಿತೀಯ ವರ್ಷಕ್ಕೆ ಸೇರಬಯಸದಿದ್ದರೆ ಅವರಿಗೆ ಸರ್ಟಿಫಿಕೇಟ್ನ್ನು ಕೊಡಲಾಗುವುದು. ಅದೇರೀತಿ ದ್ವಿತೀಯ ವರ್ಷವನ್ನು ಮುಗಿಸಿ ವ್ಯಾಸಂಗವನ್ನು ಮುಂದುವರೆಸದಿದ್ದರೆ ಡಿಪ್ಲೂಮಾ ಸರ್ಟಿಫಿಕೇಟ್ನ್ನು ನೀಡಲಾಗುವುದು ಮತ್ತು ಅಂತಿಮ ವರ್ಷ ಮುಗಿಸಿದವರಿಗೆ ಪದವಿಯನ್ನು ನೀಡಲಾಗುವುದು ಎಂದು ತಿಳಿಸಿದರು.
ಕಾಲೇಜು ಪ್ರಾಚಾರ್ಯ ಡಾ.ಜಿ.ಇ.ವಿಜಯಕುಮಾರ್ ಅವರು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯ ಪ್ರಯೋಜನಗಳು ಹಲವು ರಿತಿಯಲ್ಲಿ ಅನುಕೂಲತೆಗಳಿವೆ. ಇದೊಂದು ಕ್ರಾಂತಿಕಾರಕ ಹೆಜ್ಜೆಯಾಗಿದೆ ಮತ್ತು ಉನ್ನತ ಶಿಕ್ಷಣದ ಜೊತೆಗೆ ಕೌಶಲ್ಯ ಅಭಿವೃದ್ಧಿ ಪಡೆದುಕೊಂಡು ವಿದ್ಯಾರ್ಥಿನಿಯರು ಸುಲಭವಾಗಿ ಉದ್ಯೋಗವನ್ನು ಪಡೆಯಬಹುದಾಗಿದೆ ಎಂದರು.
ಕಾಲೇಜು ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಪ್ರೊ.ಬಿ.ಆರ್.ಡಮ್ಮಳ್ಳಿ ಸ್ವಾಗತಿಸಿದರು ಡಾ. ಎಂ.ಆರ್.ಚಿದಾನಂದಪ್ಪ ನಿರೂಪಿಸಿ ಪ್ರೊ.ಎಂ.ರಾಜಶೇಖರಪ್ಪ ವಂದಿಸಿದರು.