ರಾಣೆಬೆನ್ನೂರ

ರಾಣೇಬೆನ್ನೂರು ಲಯನ್ಸ್‌ ಶಾಲಾ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬಿಳ್ಕೋಡುಗೆ

ರಾಣೇಬೆನ್ನೂರು ಲಯನ್ಸ್‌ ಶಾಲಾ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬಿಳ್ಕೋಡುಗೆ


ಲೋಕದರ್ಶನ ವರದಿ 

ರಾಣೀಬೆನ್ನೂರ 20: ಮನಸ್ಸು ಮರ್ಕಟದಂತೆ ಅದನ್ನು ಕೇಂದ್ರಿಕರಿಸಿರಬೇಕು. ಎನ್ನುವ ಸ್ವಾಮಿ ವಿವೇಕಾನಂದರ ವಾಣಿಯಂತೆ  ಶಕ್ತಿಯೇ ಜೀವನ ದುರ್ಭಲತೆಯೇ ಮರಣ ಎಂದು ಹೇಳಿದ್ದಾರೆ. ಶಿಕ್ಷಣದಿಂದ ಭವಿಷ್ಯ ವೃಧ್ಧಿಗೋಳ್ಳಬೇಕಾದರೆ ಅದಕ್ಕೆ ಸಂಸ್ಕಾರ ಅಷೇ ಮುಕ್ಯ. ವಿದ್ಯಾರ್ಥಿಗಳಿಗೆ ಮನೋರಂಜೆನೆಗಿಂತ ಮನೋವಿಕಾಸ ಮುಖ್ಯವಾಗಿರಬೇಕು, ಇದರಿಂದ ಬೌದ್ಧಿಕ ವಿಕಾಸತೆ ಹೆಚ್ಚಾಗಲು ಸಾಧ್ಯವಾಗುವುದು ಎಂದು ಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಶ್ರೀ ಪ್ರಕಾಶನಂದ ಜೀ ಮಹಾರಾಜ್ ಹೇಳಿದರು.  

   ಅವರು ಇಲ್ಲಿನ ಮೇಡ್ಲೇರಿ ರಸ್ತೆಯ  ಲಯನ್ಸ್‌ ಎಂ.ಜಿ.ಇ. ಸಂಸ್ಥೆಯ ಲಯನ್ಸ್‌,  ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಆಯೋಜಿಸಿದ್ದ 2021-22 ನೇ ಸಾಲಿನ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.  ವಿದ್ಯಾರ್ಥಿಗಳು ಕಷ್ಟ ಪಟ್ಟು ಓದುವುದಕ್ಕಿಂತ ಅತ್ಯಂತ ಇಷ್ಟಪಟ್ಟು ಓದಬೇಕು. ಇದರಿಂದ ಮಾತ್ರ ಪರಿಶುದ್ಧವಾಗಿ ಅಂಕ ಗಳಿಸಲು ಸಾಧ್ಯವಿದೆ. ಪರೀಕ್ಷೆಗೂ ಮುನ್ನ ಕೆಲ ಕಾಲ ಓದಿದ್ದನ್ನು ಸೌಮ್ಯ ಮತ್ತು ಸೂಕ್ಷ್ಮವಾಗಿ ಮನನ ಮಾಡಿಕೊಂಡು ಯಾವುದೇ ಆತಂಕಕ್ಕೆ ಒಳಗಾಗದೆ ಹಬ್ಬದ ರೂಪದಲ್ಲಿ ಪರೀಕ್ಷೆಯನ್ನು ಎದುರಿಸಿದಾಗ ಮಾತ್ರ ಸಾಧನೆ ಸುಲಭವಾಗುವುದು ಎಂದರು.  

ಅಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಲ.ಎಂ.ಎಸ್‌.ಅರಕೇರಿ ವಹಿಸಿದ್ದರು.  ವೇದಿಕೆಯಲ್ಲಿ . ಟಿ. ವೀರಣ್ಣ, ಬಿ.ಎನ್‌. ಪಾಟೀಲ,. ರಾಜು . ಅಡಿವೆಪ್ಪನವರ, ಪ್ರಭುಲಿಂಗಪ್ಪ ಹಲಗೇರಿ. ಬಸವರಾಜ ಬಡಿಗೇರ,  ಜಯಣ್ಣ ಮುಚಡಿ,  ಬಸವರಾಜ. ಕುರುಗೊಡಪ್ಪನವರ, ಟಿ. ಕೆ. ಎಂ. ಬಸವರಾಜಯ್ಯ, ಸಿ. ಎಸ್‌. ಕಲ್ಯಾಣಿ. ಶಿವಪ್ಪ. ಗುರಿಕಾರ, ಅಮೋಘ. ಬದಾಮಿ, ಗುತ್ತೆಪ್ಪ ಹಳೇಮನಿ ಸೇರಿದಂತೆ ಮತ್ತಿತರರು ಗಣ್ಯರು ಉಪಸ್ಥಿತರಿದ್ದರು. 

ಶಿಕ್ಷಕಿ ಎಫ್‌. ಜಿ. ಬೆಳಕೇರಿ ಪ್ರಾರ್ಥಿಸಿದರು. ಆರ್‌.ವಿ.ಸುರಗೊಂಡ ಸ್ವಾಗತಿಸಿದರು. ಬಿ.ಎನ್‌.ಪಾಟೀಲ ಪ್ರಾಸ್ಥಾವಿಕವಾಗಿ ಮಾತನಾಡಿದರು.  ಎಂ.ಜಿ.ಮಣ್ಣಮ್ಮನವರ ನಿರೂಪಿಸಿ ಆರ್‌.ವಿ.ಸುರಗೊಂಡ ವಂದಿಸಿದರು. 


ಸುದ್ದಿ ಓದಿ