ರಾಣೆಬೆನ್ನೂರ

ರಾಣೇಬೆನ್ನೂರು ಲಯನ್ಸ್‌ ಸಪ್ತಾಹ: ರಂಗೋಲಿ ಸ್ಪರ್ಧೆ

ರಾಣೇಬೆನ್ನೂರು ಲಯನ್ಸ್‌ ಸಪ್ತಾಹ: ರಂಗೋಲಿ ಸ್ಪರ್ಧೆ

ಲೋಕದರ್ಶನ ವರದಿ 

ರಾಣೇಬೆನ್ನೂರು 05: ಇಲ್ಲಿನ ಮೇಡ್ಲೇರಿ ರಸ್ತೆಯ ಲಯನ್ಸ್‌ ಶಾಲಾ ಭವನದಲ್ಲಿ ಲಯನ್ಸ್‌ ಸೇವಾ ಸಂಸ್ಥೆಯ ಸಪ್ತಾಹದಂಗವಾಗಿ ಸೋಮವಾರ ಶಾಲೆಯ ವಿದ್ಯಾರ್ಥಿಗಳಿಗೆ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು, ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಾಲ್ಗೊಂಡು ತಮ್ಮ ಸ್ಪರ್ಧಾತ್ಮಕ ಪ್ರತಿಭೆೆಯನ್ನು ಮೇರೆದು ಆಯೋಜಕರ ಸಂಘಟನಾ ಸ್ಪೋರ್ತಿಯನ್ನು ಹೆಚ್ಚಿಸುವಲ್ಲಿ ಮುಂದಾಗಿದ್ದರು. 


ಸ್ಪರ್ಧಾ ವಿಜೇತರಾದ ವಿಧ್ಯಾರ್ಥಿಗಳು ಲಕ್ಷ್ಮೀ ಲಮಾಣಿ ಹಾಗೂ ದೀಪಾ ನವಲೆ ಪ್ರಥಮ, ಅನುಷಾ ಬಂಗಾರಶಟ್ರ ಹಾಗೂ ಪ್ರೀಯಾಂಕಾ ಹಲಗೇರಿ ದ್ವಿತೀಯ, ಪೂಜಾ ಅರೆಬೆಂಚಿ ಹಾಗೂ ಭವ್ಯಾ ರಾಮೇಶ್ವರ ತೃತೀಯ, ಹಾಗೂ ಚೇತನಾ ಕಮ್ಮಾರ ಮತ್ತು ಸವಿತಾ ಲಮಾಣಿ ಸಮಾಧಾನಕರ ಬಹುಮಾನ  ಪಡೆದುಕೊಂಡರು. ಅಧ್ಯಕ್ಷ ವೀರಣ್ಣ ತೋಗರ್ಸಿ ಮಳೇಮಠ ಅವರು ಬಹುಮಾನಗಳನ್ನು ವಿತರಿಸಿ ಗೌರವಿಸಿದರು. 

ಲಯನ್‌್ಸ ಸೇವಾ ಸಂಸ್ಥೆಯ ಅಧ್ಯಕ್ಷ  ಲಟಿ. ವೀರಣ್ಣ ಅವರು ಅಧ್ಯಕ್ಷತೆ  ವಹಿಸಿದ್ದರು.  


ವೇದಿಕೆಯಲ್ಲಿ ಎಂ.ಜಿ.ಇ. ಸೊಸೈಟಿ ಅಧ್ಯಕ್ಷ ಲ. ಎಂ.ಎಸ್‌. ಅರಕೇರಿ, ಪ್ರಭುಲಿಂಗಪ್ಪ.  ಹಲಗೇರಿ,  ಬಸವರಾಜ. ಬಡಿಗೇರ. ಜಯಣ್ಣ. ಮುಚಡಿ.  ಟಿ. ಸಿ. ಪಾಟೀಲ್, ಆರ್‌.ವಿ. ಸುರಗೊಂಡ,  ಎಸ್‌.ವ್ಹಿ. ಉಜ್ಜನಿ,  ಕೆ.ಬಿ.ದಡ್ಡಳ್ಳೇರ,. ಶೈಲಜಾ. ಪಾಟೀಲ,  ಎಸ್‌. ಪಿ. ಸಂಗಾಪುರ, ಶಶಿಕಲಾ ಬಡಿಗೇರ,  ರಂಜಿತಾ. ಚಕ್ರಸಾಲಿ ಸೇರಿದಂತೆ ಮತ್ತಿತರ ಗಣ್ಯರು ಶಾಲಾ ಶಿಕ್ಷಕರು ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ