ರಾಣೆಬೆನ್ನೂರ

ರಾಮಕೃಷ್ಣ ಆಶ್ರಮದಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ಜಪಯಜ್ಞ

ರಾಮಕೃಷ್ಣ ಆಶ್ರಮದಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ಜಪಯಜ್ಞ

ರಾಣೇಬೆನ್ನೂರು 22: ಇಲ್ಲಿನ ಮಾಗೋಡ ರಸ್ತೆ ಬಳಿ ಇರುವ ರಾಮಕೃಷ್ಣ -ವಿವೇಕಾನಂದ ಆಶ್ರಮದಲ್ಲಿ  ಗುರು ಪೂರ್ಣಿಮೆ ಪ್ರಯುಕ್ತ ಜಪಯಜ್ಞ ಕಾರ್ಯಕ್ರಮವು ಜು.24ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಜರುಗಲಿದೆ. 

ಅಂದು ಬೆಳಗ್ಗೆಯಿಂದ ಸಂಜೆಯವರೆಗೆ ಭಜನೆ ಮತ್ತು ನಾಮಪದ ಮಹಿಮೆ ಕುರಿತು ಪ್ರವಚನಗಳು ಜರುಗಲಿದ್ದು, ಜಪಮಾಲೆ (ರುದ್ರಾಕ್ಷಿ) ಆಶ್ರಮದ ಪುಸ್ತಕ ಭಂಡಾರದಲ್ಲಿ ದೊರೆಯಲಿದ್ದು, ಆಶ್ರಮದಲ್ಲಿಯೇ ಮಧ್ಯಾಹ್ನದ ಪ್ರಸಾದ ವ್ಯವಸ್ಥೆ ಇರುತ್ತದೆ. ಆಶ್ರಮಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಕೋರಿಕೆಯ ಮೇರೆಗೆ ನಿಲುಗಡೆ ಸೌಲಭ್ಯವಿರುತ್ತದೆ. ಆದ್ದರಿಂದ ಭಕ್ತಾಧಿಗಳು ಕಾರ್ಯಕ್ರಮಕ್ಕೆ ಆಗಮಿಸಿ ಸದುಪಯೋಗಪಡಿಸಿಕೊಳ್ಳಬೇಕೆಂದು ಆಶ್ರಮದ ಅಧ್ಯಕ್ಷರಾದ ಸ್ವಾಮೀಜಿ ಪ್ರಕಾಶಾನಂದಜಿ ಮಹಾರಾಜ್ ತಿಳಿಸಿದ್ದಾರೆ. 


ಸುದ್ದಿ ಓದಿ