ತಾಳಿಕೋಟಿ

ರಾಮಲಿಂಗಯ್ಯ ಶ್ರೀಗಳ ಸೇವೆ ಅನನ್ಯ: ಚನ್ನವೀರ ಶ್ರೀಗಳು

ರಾಮಲಿಂಗಯ್ಯ ಶ್ರೀಗಳ ಸೇವೆ ಅನನ್ಯ: ಚನ್ನವೀರ ಶ್ರೀಗಳು

ಲೋಕದರ್ಶನ ವರದಿ 

ತಾಳಿಕೋಟಿ: ಸಮಾಜದ ಉದ್ಧಾರಕ್ಕಾಗಿ ತಮ್ಮ ತನು ಮನ ಧನವನ್ನು ಕೊಟ್ಟು ಹಗಲಿರುಳು ಶ್ರಮಿಸುತ್ತಿರುವ ಚಬನೂರು ಹಿರೇಮಠದ ಪೀಠಾಧಿಪತಿ ಜ್ಯೋತಿಷ್ಯರತ್ನ ರಾಮಲಿಂಗಯ್ಯ ಮಹಾಸ್ವಮಿಗಳ ಸೇವಾ ಕಾರ್ಯ ಅನನ್ಯ ಹಾಗೂ ಸ್ಮರಣೀಯವಾಗಿದೆ ಎಂದು ಕುಂಟೋಜಿ ವಿರಕ್ತಮಠದ ಪೀಠಾಧಿಪತಿ ಚನ್ನವೀರ ದೇವರು ಹೇಳಿದರು. 

ಶನಿವಾರ ಪಟ್ಟಣದ ವಿಠ್ಠಲ ಮಂದಿರದಲ್ಲಿ ಕುಮಾರೇಶ್ವರ ಜೀವನ ವಿಕಾಸ ಫೌಂಡೇಶನ್ ಮುದ್ದೇಬಿಹಾಳ ಹಾಗೂ ಸಿ.ಬಿ. ಅಸ್ಕಿ ಫೌಂಡೇಶನ್ (ಕೊಣ್ಣೂರ)  ಇವರ ಸಹಯೋಗದಲ್ಲಿ ಹಮ್ಮಿಕೊಂಡ ‘ವಿಶ್ವ ದಾಸೋಹ ದಿನ’ ಕಾರ್ಯಕ್ರಮದಲ್ಲಿ ಉಭಯ ಫೌಂಡೇಶನ್ ವತಿಯಿಂದ ಶ್ರೀಗಳನ್ನು ಸನ್ಮಾನಿಸಿ ಅವರು ಮಾತನಾಡಿದರು. 

ನನ್ನೆಲ್ಲಾ ಸಮಾಜ ಸೇವಾ ಕಾರ್ಯಗಳಲ್ಲಿ ಎಲ್ಲಾ ರೀತಿಯಲ್ಲಿ ರಾಮಲಿಂಗಯ್ಯ ಮಹಾಸ್ವಾಮಿಗಳ ಸಹಾಯ ಸಹಕಾರ ಇದೆ ನಾನು ಯಾವಾಗೆಲ್ಲಾ ಅವರ ಸಹಾಯ ಕೇಳಿದ್ದೇನೆ ಅವರು ನನಗೆ ಸಹಕಾರ ಕೊಟ್ಟಿದ್ದಾರೆ. ಅವರೊಬ್ಬ ಹೃದಯ ವೈಶಾಲ್ಯತೆ ಹೊಂದಿರುವ ವ್ಯಕ್ತಿ. ಅವರು ಜಂಗಮ ಸಮಾಜದ ತಾಲೂಕಾ ಗೌರವ ಅಧ್ಯಕ್ಷರಾಗಿ ಇಡೀ ತಾಲೂಕಿನಲ್ಲಿ ಸಮಾಜಬಾಂಧವರನ್ನು ಜಾಗೃತಿಗೊಳಿಸಿ ಅವರೆಲ್ಲರನ್ನೂ ಸಂಸ್ಕರಿಸುವಂಥಹ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಅವರ ಯಾವ ಸ್ವಾರ್ಥವೂ ಇಲ್ಲ. 

ಇಂದಿನ ಕಾರ್ಯಕ್ರಮ ಯಶಸ್ವಿ ಆಗಲು ಅವರ ಸಹಾಯ-ಸಹಕಾರ ಬಹಳಷ್ಟಿದೆ ನಾವೆಲ್ಲರೂ ಪರಸ್ಪರ ಸಹಕರಿಸುವದರಿಂದಲೇ ಸಮಾಜದಲ್ಲಿ ಕೆಲಸ ಮಾಡಲು ಸಾಧ್ಯ ಎಂದು ಹೇಳಿದರು. 

ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಮಲಿಂಗಯ್ಯ ಶ್ರೀಗಳು ನಾನು ಮಾಡುತ್ತಿರುವ ಈ ಸೇವೆ ಅತ್ಯಲ್ಪವಾದದ್ದಾಗಿದೆ ಇಲ್ಲಿರುವ ಎಲ್ಲಾ ಶ್ರೀಗಳು ಸಾಕಷ್ಟು ಕೆಲಸ ಮಾಡುತ್ತಿದ್ದಾರೆ ಮುಂದೆಯೂ ನಿಮ್ಮೆಲ್ಲ ಕಾರ್ಯಗಳಿಗೆ ನನ್ನ ಸಹಕಾರ ಇರಲಿದೆ ಎಂದರು. ವೇದಿಕೆಯಲ್ಲಿ ಹಲವಾರು ಮಠಾಧೀಶರು, ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರು, ಹಿರಿಯರು, ರಾಜಕೀಯ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ