ರಾಮಮಂದಿರವು ಆಧುನಿಕ ಭಾರತದ ಸಂಕೇತ: ರಾಷ್ಟ್ರಪತಿ
ನವದೆಹಲಿ, ಆಗಸ್ಟ್ 5: ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕಾಗಿ ನಡೆದ ಭೂಮಿಪೂಜೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶ್ಲಾಘಿಸಿದ್ದಾರೆ.
“ಇದು ರಾಮರಾಜ್ಯದ ಆದರ್ಶಗಳಿಗೆ ಸಾಕ್ಷಿಯಾಗಿದೆ ಮತ್ತು "ಆಧುನಿಕ ಭಾರತದ ಸಂಕೇತವಾಗಿದೆ" ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಜನರಿಗೆ ಶುಭಾಶಯ ಕೋರಿದ ರಾಷ್ಟ್ರಪತಿ, "ಅಯೋಧ್ಯೆಯಲ್ಲಿ ರಾಮ ದೇವಸ್ಥಾನಕ್ಕೆ ಅಡಿಪಾಯ ಹಾಕಿದ್ದಕ್ಕಾಗಿ ಎಲ್ಲರಿಗೂ ಶುಭಾಶಯಗಳು. ದೇವಾಲಯವು ಕಾನೂನಿನ ಪ್ರಕಾರ ನಿರ್ಮಿಸಲ್ಪಡುತ್ತಿದ್ದು, ಇದು ಭಾರತದ ಸಾಮಾಜಿಕ ಸಾಮರಸ್ಯ ಮತ್ತು ಜನರ ಉತ್ಸಾಹವನ್ನು ವ್ಯಾಖ್ಯಾನಿಸುತ್ತದೆ. ರಾಮರಾಜ್ಯದ ಆದರ್ಶಗಳಿಗೆ ಸಾಕ್ಷಿಯಾಗಿ, ಆಧುನಿಕ ಭಾರತದ ಸಂಕೇತವಾಗಿರಲಿದೆ” ಎಂದು ತಿಳಿಸಿದ್ದಾರೆ.