ರಾಜ್ಯ ಮಟ್ಟದ ಪ್ರತಿಭಾ ವಿದ್ಯಾರ್ಥಿ ಪುರಸ್ಕಾರಕ್ಕೆ ಉಗಾರ ಗ್ರಾಮದ ರಕ್ಷಾ ಪರಮಾನಟ್ಟಿ ಆಯ್ಕೆ: ಗ್ರಾಮದಲ್ಲಿ ಸಂತಸ..!
ಕಾಗವಾಡ 21: ತಾಲೂಕಿನ ಉಗಾರ ಬುದ್ರಕ್ ಗ್ರಾಮದ ಜೈ ಜಿನೇಂದ್ರ ಎಜ್ಯೂಕೇಶನ್ ಟ್ರಸ್ಟ್‌ನ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ 6 ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ರಕ್ಷಾ ಸಂಜಯ ಪರಮಾನಟ್ಟಿ ಇವಳಿಗೆ ರಾಜ್ಯ ಮಟ್ಟದ ಪ್ರತಿಭಾ ವಿದ್ಯಾರ್ಥಿ ಪುರಸ್ಕಾರ ಲಭಿಸಿದ್ದು, ಗ್ರಾಮ ಮತ್ತು ಶಾಲೆಯ ಕೀರ್ತಿ ಹೆಚ್ಚಿಸಿದ್ದಾಳೆ.
ರವಿವಾರ ದಿ. 14 ರಂದು ಹಾವೇರಿ ಜಿಲ್ಲೆಯ ರಾಣೇಬೆನ್ನೂರ ನಗರದ ಮೃತ್ಯೂಂಜಯ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ಇವರ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆ ಮತ್ತು ರಾಜ್ಯ ಮಟ್ಟದ ಪ್ರತಿಭಾ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ರಕ್ಷಾ ಪರಮಾನಟ್ಟಿ ಇವಳಿಗೆ ವಿಧಾನಸಭೆ ಉಪಸಭಾಪತಿ ರುದ್ರಾ್ಪ ಲಮಾಣಿ, ಶಿಕ್ಷಣ ಸಚಿವ ಮಧು ಬಂಗಾರ್ಪ, ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ರಾಜಗೋಪಾಲ, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಕಾಗವಾಡ ಇವರು ಪುರಸ್ತಾರ ನೀಡಿ, ಸನ್ಮಾನಿಸಿದ್ದಾರೆ.
ಈ ವೇಳೆ ಕಾಗವಾಡ ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷ ಶಶಿಕಾಂತ ಭೈರಗೊಂಡ, ಕಾರ್ಯದರ್ಶಿ ಶಂಕರ ಜರಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪುರಸ್ಕರಾರ ಪಡೆದ ರಕ್ಷಾ ಪರಮಾನಟ್ಟಿ ಇವಳನ್ನು ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಆಡಳಿತಾಧಿಕಾರಿಗಳು, ಮುಖ್ಯೋಪಾಧ್ಯಾಯರು, ಶಿಕ್ಷಕವೃಂದದವರು ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ.