ರಾಷ್ಟ್ರೀಯ

ಅಶೋಕ್ ಗಸ್ತಿ ನಿಧನಕ್ಕೆ ರಾಜ್ಯಸಭೆ ಸಂತಾಪ; ಅರ್ಧ ಗಂಟೆ ಕಲಾಪ ಮುಂದೂಡಿಕೆ

ಅಶೋಕ್ ಗಸ್ತಿ ನಿಧನಕ್ಕೆ  ರಾಜ್ಯಸಭೆ ಸಂತಾಪ; ಅರ್ಧ ಗಂಟೆ ಕಲಾಪ ಮುಂದೂಡಿಕೆ

ನವದೆಹಲಿ, ಸೆಪ್ಟೆಂಬರ್ 18: ಗುರುವಾರ   ರಾತ್ರಿ   ನಿಧನರಾದ   ಕರ್ನಾಟಕ ಸಂಸದ ಅಶೋಕ್ ಗಸ್ತಿ ಅವರಿಗೆ   ಶ್ರದ್ದಾಂಜಲಿ ಸಲ್ಲಿಸಿದ ನಂತರ ರಾಜ್ಯಸಭೆಯ ಕಲಾಪವನ್ನು ಶುಕ್ರವಾರ  ಅರ್ಧ ಗಂಟೆಯ ಮುಂದೂಡಲಾಯಿತು.

ಕರ್ನಾಟಕದಿಂದ ರಾಜ್ಯಸಭೆ  ಹಾಲಿ ಸದಸ್ಯರಾಗಿದ್ದ  ಅಶೋಕ್ ಗಸ್ತಿ ಅವರ ನಿಧನಕ್ಕೆ  ತೀವ್ರ  ಸಂತಾಪ ವ್ಯಕ್ತಪಡಿಸಿದ   ಸಭಾಪತಿ ಎಂ. ವೆಂಕಯ್ಯನಾಯ್ಡು, ದೇಶ ಒಬ್ಬ  ಸಮರ್ಥ ಸಂಸದೀಯ ಪಟುವನ್ನು  ಕಳೆದುಕೊಂಡಿದೆ ಎಂದು  ಸಂತಾಪ  ಸೂಚಿಸಿದ  ನಂತರ ಕಲಾಪವನ್ನು ಅರ್ಧಗಂಟೆ ಮುಂದೂಡಿದರು. 

ಗಸ್ತಿ ಬಿಜೆಪಿಯ ಹಾಲಿ ರಾಜ್ಯಸಭಾ ಸದಸ್ಯರಾಗಿದ್ದು,  ಕೋವಿಡ್ -19 ಸೋಂಕಿನಿಂದ ಗುರುವಾರ  ರಾತ್ರಿ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.

ಈ ನಡುವೆ  ಶಿವಸೇನಾ ಸದಸ್ಯ ಸಂಜಯ್ ರಾವತ್   ರೈತರ  ಚಳುವಳಿ ಕುರಿತು ಶೂನ್ಯ ವೇಳೆ ಪ್ರಸ್ತಾಪದ  ನೋಟೀಸ್  ನೀಡಿದ್ದಾರೆ

ಸಿಪಿಐ(ಎಂ) ಸದಸ್ಯ ಕೆ.ಕೆ. ರಾಗೇಶ್   ರಾಜ್ಯಗಳಿಗೆ ಜಿಎಸ್ ಟಿ ಪರಿಹಾರ  ಪಾವತಿಸದ ಬಗ್ಗೆ ಶೂನ್ಯ ವೇಳೆ ನೋಟೀಸ್  ನೀಡಿದ್ದಾರೆ

ಸುದ್ದಿ ಓದಿ