ರಾಷ್ಟ್ರೀಯ

ರೈತ ಮುಖಂಡರೊಂದಿಗೆ ಮಾತುಕತೆ ನಡೆಸಲಿರುವ ರಾಜನಾಥ್ ಸಿಂಗ್

ರೈತ ಮುಖಂಡರೊಂದಿಗೆ  ಮಾತುಕತೆ ನಡೆಸಲಿರುವ  ರಾಜನಾಥ್ ಸಿಂಗ್

ನವದೆಹಲಿ, ಡಿಸೆಂಬರ್ 1:  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಜೆ. ಪಿ .  ನಡ್ಡಾ   ಅವರ ದೆಹಲಿ  ನಿವಾಸದಲ್ಲಿ  ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್  ಹಾಗೂ  ನರೇಂದ್ರ ಸಿಂಗ್   ತೋಮರ್ ಅವರು ಮಂಗಳವಾರ ಬೆಳಿಗ್ಗೆ ಮತ್ತೆ  ಸಮಾವೇಶ ನಡೆಸಿ ರೈತರ ಮನವೊಲಿಸುವ ಕುರಿತು ಸಮಾಲೋಚನೆ ನಡೆಸಿದರು ಎಂದು ವರದಿಯಾಗಿದೆ. 

ಕೇಂದ್ರ  ಸರ್ಕಾರ   ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು  ವಿರುದ್ಧ ರೈತರು  ಪ್ರತಿಭಟನೆ  ಹಿನ್ನೆಲೆಯಲ್ಲಿ   ಮನವೊಲಿಕೆ ಸೇರಿದಂತೆ   ಮುಂದೆ ಕೈಗೊಳ್ಳಬೇಕಾದ  ಕ್ರಮಗಳ  ಕುರಿತು ಚರ್ಚೆ ನಡೆಸಿದರು ಎಂದು ವರದಿಯಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರೈತ ಸಂಘಟನೆಗಳ   ಮುಖಂಡರೊಂದಿಗೆ ಮಾತುಕತೆ ನಡೆಸುವ ನಿರೀಕ್ಷೆಯಿದೆ.    ರೈತರೊಂದಿಗೆ  ತಾವು ಮಾತುಕತೆ ನಡೆಸಲು ಸಿದ್ಧ ಎಂದು ರಾಜನಾಥ್ ಸಿಂಗ್ ಸ್ವತಃ ಎರಡು ದಿನಗಳ  ಹಿಂದೆ ಘೋಷಿಸಿದ್ದರು.

ಜೆ.ಪಿ. ನಡ್ಡಾ ಅವರ ನಿವಾಸದಲ್ಲಿ   ನಡೆದ  ಸಭೆಯಲ್ಲಿ  ಅಮಿತ್ ಶಾ, ತೋಮರ್ ಮತ್ತು ನಡ್ಡಾ ಮತ್ತಿತರ ನಾಯಕರು   ರೈತ ಮುಖಂಡರೊಂದಿಗೆ   ರಾಜನಾಥ್ ಸಿಂಗ್ ಮಾತುಕತೆಗೆ ತೆರಳಿದರೆ   ಸೂಕ್ತ  ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿವಾದಾತ್ಮಕ ಕೃಷಿ ಕಾಯ್ದೆಗಳ  ವಿರುದ್ಧ ಪಂಜಾಬ್ ಸೇರಿದಂತೆ ಹಲವು  ರಾಜ್ಯಗಳ ರೈತ ಸಂಘಗಳು ನಡೆಸುತ್ತಿರುವ 'ದೆಹಲಿ ಚಲೋ' ಪ್ರತಿಭಟನಾ ಮೆರವಣಿಗೆ ಮುಂದುವರೆದಿದೆ.  ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆ ಮಂಗಳವಾರ ಆರನೇ ದಿನಕ್ಕೆಮುಂದುವರಿದಿದೆ.  ಕೇಂದ್ರ ಸರ್ಕಾರದ ಮನವಿ ತಳ್ಳಿಹಾಕಿರುವ  ರೈತರು  ತಮ್ಮ ಬೇಡಿಕೆ ಈಡೇರುವವರಿಗೆ  ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದ್ದಾರೆ.

ಸುದ್ದಿ ಓದಿ